ಕಾಂಗ್ರೆಸ್ ದೇಶದಲ್ಲಿ ಸೋತಿದೆ: ಕರ್ನಾಟಕದ ಸೋಲು ಪ್ರಧಾನಿಯದ್ದಲ್ಲ: ಬೊಮ್ಮಾಯಿ

ಬೆಂಗಳೂರು, ಮೇ 14: ಕಾಂಗ್ರೆಸ್ ಇಡೀ ದೇಶದಲ್ಲಿ ಸೋತಿದೆ. ಕರ್ನಾಟಕದಲ್ಲಿ ಬಿಜೆಪಿ ಸೋತ ಮಾತ್ರಕ್ಕೆ ಅದು ಪ್ರಧಾನಿ ನರೇಂದ್ರ ಮೋದಿಯವರ ಸೋಲಲ್ಲ. ಏಕೆಂದರೆ ಅವರು ರಾಜ್ಯಕ್ಕೆ ಪ್ರಚಾರಕ್ಕೆಂದು ಬಂದಿದ್ದರು ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಭೆ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಂದು ಕಚೇರಿಯಲ್ಲಿ ಬಿಜೆಪಿ ನಾಯಕರೆಲ್ಲರು ಕೂಡಿಕೊಂಡು ಕರ್ನಾಟಕ ರಾಜ್ಯ ಚುನಾವಣೆ 2023ರ ಫಲಿತಾಂಶ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಫಲಿತಾಂಶದ ಬಗ್ಗೆ ಬೇರೆ ಬೇರೆ ಕಡೆಯಿಂದ ಇನ್ನಷ್ಟು ಮಾಹಿತಿ ತರಿಸಿಕೊಂಡು ಚರ್ಚೆ ಮಾಡುತ್ತೇವೆ. ಒಟ್ಟಾರೆ ಜನಾದೇಶ ಕುರಿತು ಹಾಗೂ ವಿಧಾನಸಭೆ ಕ್ಷೇತ್ರವಾರು ಪರಾಮರ್ಶೆ ಮಾಡಬೇಕಿದೆ ಎಂದರು.

Basavaraj Bommai Reacts Of BJP Defeat In Karnataka

ನಮ್ಮ ಬಿಜೆಪಿ ಅಧ್ಯಕ್ಷರು ಇನ್ನು ಮೂರು ನಾಲ್ಕು ದಿನಗಳೊಳಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯುತ್ತಿದ್ದಾರೆ. ಮರುದಿನ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದು ಚರ್ಚೆ ಮಾಡಲಿದ್ದೇವೆ. ಅಲ್ಲಿ ಕೂಲಂಕುಷವಾಗಿ ಸಮಾಲೋಚಿಸಿ ಯಾವ ರೀತಿ ಒಗ್ಗಟ್ಡಾಗಿ ಪಕ್ಷ ಬಲವರ್ಧನೆ ಮಾಡಬೇಕೆಂದು ನಿರ್ಧರಿಸಿತ್ತೇವೆ. ನಮಗೆ ಪಕ್ಷ ಸಂಘಟನೆಗೆ ವಿಶ್ರಮ ಇರುವುದಿಲ್ಲ. ಲೋಕಸಭೆ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಬಿಜೆಪಿಯ ಸೋಲು ಮೋದಿಯ ಸೋಲು ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಕಾಂಗ್ರೆಸ್‌ ನ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ. ಮೋದಿಯವರು ರಾಷ್ಟ್ರೀಯ ನಾಯಕರು. ಇಲ್ಲಿ ಮೋದಿಯವರು ಪ್ರಚಾರಕ್ಕಷ್ಟೇ ಬಂದಿದ್ದರು. ಇದು ಅವರ ಸೋಲು ಅನ್ನುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

Basavaraj Bommai Reacts Of BJP Defeat In Karnataka

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರಿಗೂ ಶುಭಾಶಯ ತಿಳಿಸಲು ಬಯಸುತ್ತೇನೆ. ಅವರಿ ಅವರಿಬ್ಬರೂ ಆಲ್ ದಿ ಬೆಸ್ಟ್ ಮುಗಳುನಕ್ಕರು.

ಈ ವೇಳೆ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯ ಭರವಸೆಗಳ ಜಾರಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲು ಕಾಂಗ್ರೆಸ್ ನವರು ಸರ್ಕಾರ ಮಾಡಲಿ. ಆ ನಂತರ ಕ್ಯಾಬಿನೆಟ್ ಕರೆದು ಏನು ಮಾಡುತ್ತಾರೆ ಎಂದು ನೋಡೋಣ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+