ಟಿಪ್ಪು ಜಯಂತಿ ಮಾಡೋ ನಾಲಾಯಕ್‌ ಹಿಂದೂಗಳು ಇದಾರೆ ನಮ್ಮ ದೇಶದಲ್ಲಿ: ಯತ್ನಾಳ್

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದ್ದು, ಸಿದ್ದರಾಮಯ್ಯ ಹಾಗೂ ಕೆಲ ಶಾಸಕರ ವಿರುದ್ದ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಕಾರಿದ್ದಾರೆ.

ವಿಜಯಪುರ,ಫೆಬ್ರವರಿ27: ಟಿಪ್ಪು ಸುಲ್ತಾನ್ ಮೆರವಣಿಗೆ ಮಾಡುವ ನಾಲಾಯಕ ಹಿಂದೂಗಳು ನಮ್ಮ ದೇಶದಲ್ಲಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು.

ಈ ಕುರಿತು ವಿಜಯಪುರದಲ್ಲಿ ಶಿವಾಜಿ ಚೌಕ್ ನಲ್ಲಿ ಆಯೋಜಿಸಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ವೀರಾವೇಶವಾಗಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರೂ ಯುದ್ಧ ಮಾಡಿದ್ದಾರೆ. ಅವರ ಸೈನ್ಯದಲ್ಲಿಯೂ ಮುಸ್ಲಿಂ ಸೈನಿಕರಿದ್ದರು. ಶಿವಾಜಿ ಮಹಾರಾಜರು ಯುದ್ಧಕ್ಕೆ ಹೋದಾಗ ಗೆದ್ದ ಮೇಲೆ ಯಾವುದೇ ಸಮಾಜದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಲಿಲ್ಲ. ಸೈನಿಕರು ಶೀಲಕ್ಕೆ ಕೈ ಹಾಕಿದರೆ ಅವರ ಕೈ ಕತ್ತರಿಸಿದ್ದಾರೆ. ಒಂದು ಮಸೀದಿ ಕೆಡವಲಿಲ್ಲ. ಮುಸ್ಲಿಂ ಮಹಿಳೆಯರ ಜೊತೆ ಗೌರವಯುತವಾಗಿ ನಡೆದುಕೊಂಡ ಭಾರತದ ಮಹಾನ್ ನಾಯಕ ಶಿವಾಜಿ ಮಹಾರಾಜರು ಎಂದು ಹೇಳಿದರು.

Basavanagowda Patil Yatnal Outrage On Siddaramaiah

ಇನ್ನೂ ರಾಜ್ಯದ ಟಿಪ್ಪು ಸುಲ್ತಾನ್ ಮೂರುವರೆ ಸಾವಿರ ಹಿಂದೂ ದೇವಾಲಯಗಳನ್ನು ಕೆಡವಿದ್ದಾನೆ. ಲಕ್ಷಾಂತರ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಮತಾಂತರ ಮಾಡಿದ್ದಾನೆ. ಹಿಂದೂಗಳ ಕಗ್ಗೊಲೆ ಮಾಡಿದ್ದಾನೆ. ಕೊಡಗಿನವರ ವಿರುದ್ಧ ಗೆಲುವು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನ ಜನರನ್ನು ಒಪ್ಪಂದಕ್ಕೆ ಕರೆದು ಲಕ್ಷಾಂತರ ಕೊಡಗು ಜನರನ್ನು ತನ್ನ ಸೈನಿಕರ ಮೂಲಕ ಕೊಲೆ ಮಾಡಿಸಿದ ಎಂದು ಕಿಡಿಕಾರಿದ್ದಾರೆ.

ನಾನು ಹಿಂದೂ ಇದ್ದೇನೆ. ಆದರೆ, ಹಿಂದುತ್ವ ಒಪ್ಪುವುದಿಲ್ಲ. ನಾನು ಅಪ್ಪನಿಗೆ ಹುಟ್ಟಿದ್ದು ಖರೆ ಐತಿ. ಆದರೆ, ಗ್ಯಾರಂಟಿ ಇಲ್ಲ. ನಾನು ಕುಂಕುಮ ಹಚ್ಚಿಕೊಳ್ಳುವುದಿಲ್ಲ.ನಮ್ಮ ರೇಶ್ಮೆ ಪೇಟ ಹಾಕಿಕೊಳ್ಳುವುದಿಲ್ಲ. ಆದರೆ, ಸಾಬರು ಹಾಕುವ ವಸ್ತುಗಳನ್ನು ಸ್ವೀಕರಿಸುತ್ತೇನೆ ಎಂಬ ಮನೋಭಾವ ಹೊಂದಿದ್ದಾರೆ. ಮುಸ್ಲಿಮರು ಓಟು ಹಾಕಿದರೆ ಮಾತ್ರ ನಾನು ಗೆಲ್ಲುತ್ತೇನೆ ಎಂದು ಅವರ ಭಾವನೆಯಾಗಿದೆ. ಆದರೆ, ಕರ್ನಾಟಕದಲ್ಲಿ ಇದು ನಡೆಯುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ಧಾರಮಯ್ಯ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಇನ್ನೂ ಬೇರೆ ಶಾಸಕರು ನನ್ನನ್ನು ಪ್ರಶ್ನಿಸುತ್ತಾರೆ. ಗೌಡ್ರೆ, ನಿಮ್ಮ ಮತಕ್ಷೇತ್ರದಲ್ಲಿ ಒಂದು ಲಕ್ಷ ಟಿಪ್ಪು ಸುಲ್ತಾನ್ ಮತದಾರರಿದ್ದಾರೆ. ಆದರೆ, ನೀವು ಹೇಗೆ ಶಿವಾಜಿ ವಂಶಜರು ಆಯ್ಕೆಯಾಗಿದ್ದೀರಿ ಎಂದು ಪ್ರಶ್ನಿಸುತ್ತಾರೆ. ವಿಜಯಪುರದಲ್ಲಿ ಇನ್ನು ಮುಂದೆ ಯಾರೂ ಟಿಪ್ಪು ಸುಲ್ತಾನರು ಆರಿಸಿ ಬರುವುದಿಲ್ಲ. ಇಲ್ಲಿ ಆರಿಸಿ ಬರುವವರು ಶಿವಾಜಿ ಮಹಾರಾಜರ ಭಗವಾ ಧ್ವಜ. ಹೌದಲ್ವಾ ಜನರಿಗೆ ಪ್ರಶ್ನಿಸಿದರು.

Basavanagowda Patil Yatnal Outrage On Siddaramaiah

ನನ್ನನ್ನು ಸೋಲಿಸಲು ವಿಯಪುರಕ್ಕೆ ರೊಕ್ಕ(ಹಣ) ಬಹಳ ಬರಲಿದೆ. ಅಲ್ಲೊಬ್ಬ ಮಗ ಕುಳಿತಿದ್ದಾರೆ, ಬೆಂಗಳೂರಿನಿನಲ್ಲೊಬ್ಬ, ಇಲ್ಲೇ ಪಕ್ಕದ ಜಿಲ್ಲೆಯಲೊಬ್ಬಬ ಕುಳಿತಿದ್ದಾನೆ ಎಂದು ಹೆಸರು ಹೇಳದೆ ರಾಜಕೀಯ ವಿರೋಧಿಗಳ ಕುರಿತು ವಾಗ್ದಾಳಿ ನಡೆಸಿದರು. ಇನ್ನು ಮುಂದೆ ತಪ್ಪಿಯೂ ನೀವೂ ಸಾಬರಿಗೆ ಓಟು ಹಾಕಬಾರದು. ಬಸನಗೌಡನನ್ನು ಕೆಡವಲು ರೂ. 50 ಕೋಟಿ ಖರ್ಚಾಗಲಿ ಎಂದು ಹೇಳಿದ್ದಾನೆ. 50 ಕೋಟಿ ಬರಲಿ. ಎಲ್ಲರೂ ಡಾಬಾಗಳಲ್ಲಿ ಊಟ ಮಾಡಿ, ಒಳ್ಳೆಯ ಬಟ್ಟೆ ಖರೀದಿಸಿ. 15 ದಿನ ಮಜಾ ಮಾಡಿ ಆದರೆ ಓಟು ನನಗೆ ಹಾಕಿ ಎಂದು ಹೇಳಿದರು.

ಶಿವಾಜಿ ಮಹಾರಾಜರ ಆ ಒಂದು ಕನಸು ಸಂಕಲ್ಪವನ್ನು ದೇಶದಲ್ಲಿ ನಿಜ ಮಾಡಬೇಕಿದೆ. ಈ ದೇಶಕ್ಕೆ ಉತ್ತಮ ಪ್ರಧಾನಿ ಸಿಕ್ಕಿರುವುದು ನಮ್ಮ ದೈವ. ಶಿವಾಜಿ ಮಹಾರಾಜರು, ಡಾ. ಬಿ. ಆರ್. ಅಂಬೇಡ್ಕರ್ ಅವರು, ಸಂತ ಸೇವಾಲಾಲರಂಥವರು ನಮ್ಮ ದೇಶದಲ್ಲಿ ಜನಿಸಿದ್ದು ಅವರು ನಮಗೆ ಆದರ್ಶ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+