ಬಸವಣ್ಣ ಎಂದೆಂದಿಗೂ ಜಗತ್ತಿಗೆ ಜ್ಯೋತಿ: ಸಿದ್ದರಾಮಯ್ಯ

Subscribe to Oneindia Kannada

ಮೈಸೂರು, ಮೇ 9: ಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶ ಹಾಗೂ ಚಿಂತನೆಗಳು ಇಂದಿಗೆ ಮಾತ್ರವಲ್ಲ ಎಂದೆದಿಂಗೂ ಪ್ರಸ್ತುತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ, ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದರು.[ಬಸವ ತತ್ವ ಅಧ್ಯಯನಕ್ಕೆ ಅಂತರಾಷ್ಟ್ರೀಯ ಕೇಂದ್ರ : ಸಿಎಂ]

karnataka

ಮನುಷ್ಯರಾಗಿ ಹುಟ್ಟುವ ನಾವು ಯಾವುದೇ ಜಾತಿ, ಮತ, ಧರ್ಮದ ಹೆಸರನ್ನು ಹಣೆಪಟ್ಟಿಗೆ ಕಟ್ಟುಕೊಳ್ಳದೇ ಮನುಷ್ಯರಾಗಿ ಮರಣ ಹೊಂದುವುದೇ ನಾವು ಈ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದರು.

12 ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ಪದ್ಧತಿ, ಸಮಾಜದಲ್ಲಿ ಕೆಳವರ್ಗದ ಜನರಿಗೆ ಸಮಾನತೆ, ಮಹಿಳಾ ಸಮಾನತೆ, ಆರ್ಥಿಕ ಸಮಾನತೆಗಾಗಿ ಹೋರಾಟ ನಡೆಸಿದರು. ಇಂದಿಗೂ ನಾವು ಸಮಾಜದಲ್ಲಿ ಕೆಳ ವರ್ಗದ ಜನರಿಗೆ ದೇವಸ್ಥಾನಕ್ಕೆ ಪ್ರವೇಶ ನಿಷೇಧ, ಮೌಡ್ಯ, ಕಂದಾಚಾರ ಮುಂತಾದ ಪ್ರಕರಣಗಳನ್ನು ನೋಡುತ್ತಿರುವುದು ಚಿಂತಾಜನಕ ವಿಷಯವಾಗಿದೆ ಎಂದರು.[ಥೇಮ್ಸ್ ದಡದಲ್ಲಿ ಬಸವಣ್ಣನ ಪುತ್ಥಳಿ]

-
-
-
-
-
-

ಸಮಾಜದಲ್ಲಿ ಎಲ್ಲರೂ ಸಮಾನರು, ಎಲ್ಲರೂ ನಮ್ಮವರು ಎಂಬ ಬಸವಣ್ಣನವರ ಆದರ್ಶವನ್ನು ಪ್ರಮಾಣಿಕವಾಗಿ ಪಾಲಿಸಿದರೆ ನಾವು ಬಸವಣ್ಣನವರಿಗೆ ಸಲ್ಲಿಸುವ ದೊಡ್ಡ ಗೌರವ ಹಾಗೂ ಬಸವಣ್ಣ ನವರು ಕಂಡ ಸಮ ಸಮಾಜ ಎಂಬ ಕನಸು ನೆನಸಾಗುತ್ತದೆ ಎಂದರು.

ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಶಾಸಕ ವಾಸು ಸುತ್ತೂರು ಮಠದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಚಿಂತಕ ರಂಜಾನ್ ದರ್ಗಾ, ಸಚಿವರಾದ ವಿ.ಶ್ರೀನಿವಾಸ ಪ್ರಸಾದ್,ಎಚ್.ಎಸ್. ಮಹಾದೇವ ಪ್ರಸಾದ್, ಉಮಾಶ್ರೀ, ಎಂಎಲ್ ಎ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ ಗೋ. ಮಧುಸೂಧನ್ ಹಾಜರಿದ್ದರು.

ಬಸವ ಜಯಂತಿ ಆಚರಣೆ ಮಾಡಿದ ಸಂಸದರು:
ಕರ್ನಾಟಕದ ಸಂಸದರಾದ ಬಿ ಎನ್ ಚಂದ್ರಪ್ಪ, ಮುದ್ದಹನುಮೇಗೌಡ, ಬಿ ವಿ ನಾಯಕ, ಧ್ರುವನಾರಾಯಣ, ಡಿಕೆ ಸುರೇಶ್ ನವದೆಹಲಿಯಲ್ಲಿ ಬಸವಣ್ಣನಿಗೆ ನಮನ ಸಲ್ಲಿಕೆ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The saint philosopher Basaveshwara, who's birth anniversary is being celebrated as Basava Jayanti across the Karnataka on 9 may, 2016. Karnataka Chief Minister Siddaramaiah participated in Basava Jayanti at Mysuru.
Please Wait while comments are loading...