ಯಾವ 'ಯಪ್ಪ'ನ ಮುಖ ನೋಡಿ ಯಾರೂ ವೋಟ್ ಹಾಕಲ್ಲ- ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ

ವಿಜಯಪುರ,ಡಿಸೆಂಬರ್‌ 23: ಕರ್ನಾಟಕದ ಗೆಲುವು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಯಾವ 'ಯಪ್ಪ'ನಿಂದಲೂ ಸಾಧ್ಯವಿಲ್ಲ. ಇವರ ಮುಖ ನೋಡಿ ಯಾರೂ ವೋಟ್ ಹಾಕಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ದೆಹಲಿಗೆ ಯಾರ ಭೇಟಿಗೂ ಹೋಗಿಲ್ಲ. ನಾನು ಯಾರ ಅಪೈಂಟ್ಮೆಂಟ್ ಕೇಳಿಲ್ಲ, ನನಗೆ ಯಾರ ಅಪೈಂಟ್ಮೆಂಟ್ ಅವಶ್ಯಕತೆ ಇಲ್ಲ
ನಾನು ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಕಾರ್ಖಾನೆ ಕೆಲಸಕ್ಕೆ ಹೋಗಿದ್ದೆ. ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಹಾಗೂ ಇತರೆ ಕೆಲ ಸಂಸದರನ್ನು ಭೇಟಿಯಾಗಿದ್ದೇನೆ ಎಂದರು.

Basangouda Patil Yatnal‌ Outraged Against BS Yediyurappa

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದ ಯತ್ನಳ್‌, ವಿಜಯೇದ್ರ ನನ್ನ ಬೇಕಾದಷ್ಟು ಹೊಗಳಿ ........ ಎಂದ ಯತ್ನಾಳ್. ವಿಜಯೇಂದ್ರ ಇರುವುದರಿಂದ 35 ಲೋಕಸಭಾ ಸೀಟ್ ಗಳು ಬರುತ್ತವೆ ಎಂದು ಹೊಗಳಿ ನನ್ನದೇನು ಗಂಟು ಹೋಗುತ್ತದೆ. ಇರುವ 28 ಕ್ಷೇತ್ರಗಳಿದ್ದರೂ 35 ಕ್ಷೇತ್ರಗಳು ಇವೆ ಎಂದು ಹಾಕಿರಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆಯೇ ಕರ್ನಾಟಕದಲ್ಲಿ ‌ಲೋಕಸಭಾ ಚುನಾವಣೆ ನಡೆಯುತ್ತದೆ. ಯಾ ಯಪ್ಪಂದು ಏನು ಇಲ್ಲ ಇವರ ಮುಖ ನೋಡಿ ಯಾರು ಮತ ಹಾಕಲ್ಲ ಎಂದರು.

ನನ್ನ ಹೋರಾಟ ವಂಶವಾರು, ಭ್ರಷ್ಟಾಚಾರ ಹಾಗೂ ಅಡ್ಜೆಸ್ಟಮೆಂಟ್ ಈ ಮೂರರ ವಿರುದ್ಧ. ಇವುಗಳ ಕುರಿತು ನನ್ನ ಹೋರಾಟ ನಿರಂತರವಾಗಿರುತ್ತದೆ. ನನಗೆ ಯಾರೋ ಬೈದಿಲ್ಲ ಎಚ್ಚರಿಕೆಯನ್ನು ನೀಡಿಲ್ಲ. ಗಂಭೀರವಾದ ಎಚ್ಚರಿಕೆಯನ್ನು ಯಾವನೂ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಯತ್ನಾಳ್ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ವಿಚಾರವಾಗಿ ಮಾತನಾಡಿ, ಅಂಥವುಗಳ ಬಗ್ಗೆ ಒಮ್ಮೆ ಹೇಳಿದ್ದೇನೆ ಪ್ರತಿ ಬಾರಿ ಅಂಥವರ ಹೆಸರನ್ನು ತೆಗೆಯಬೇಡಿ ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಹಾದಿ ಬೀದಿಯಲ್ಲಿರುವವರ ಹೇಳಿಕೆ ಕುರಿತು ಉತ್ತರಿಸುವಷ್ಟು ಲೋ ಲೆವಲ್ ರಾಜಕಾರಣಿಯಲ್ಲ. ಒಂದಷ್ಟು ಸ್ಟೇಟಸ್ ಇದ್ದವರ ಬಗ್ಗೆ ಕೇಳಿ. ಯಾವನೋ ಒಬ್ಬ ಹುಚ್ಚ ಎನ್ನುತ್ತಾನೆ. ಮತ್ತೋರ್ವ ಉತ್ತರ ಕುಮಾರ ಎನ್ನುತ್ತಾನೆ, ಮತ್ತೆ ಆತನೇ ಯತ್ನಾಳ್ ನಮ್ಮ ಪಕ್ಷದ ಆಸ್ತಿ ಎನ್ನುತ್ತಾನೆ. ನಾನು ಯಾರಿಗೂ ಐ ಡೋಂಟ್ ಕೇರ್ ಎಂದು ತಿರುಗೇಟು ನೀಡಿದರು.

Basangouda Patil Yatnal‌ Outraged Against BS Yediyurappa

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಐಷಾರಾಮಿ‌ ವಿಮಾನದಲ್ಲಿ ಪ್ರಯಾಣ ವಿಚಾರವಾಗಿ ಮಾತನಾಡಿ, ಸಿಎಂ ಹಾಗೂ ಜಮೀರ್ ಅಹ್ಮದ್ ಖಾನ್ ಪ್ರಯಾಣ ಮಾಡಿದ ವಿಮಾನ ಫೈವ್ ಸ್ಟಾರ್ ಮಾದರಿಯಲ್ಲಿದೆ. ಸಿದ್ದರಾಮಯ್ಯನವರು ಸಮಾಜದ ಬಡವರ ಪರವಾಗಿ ಏನೇನೋ ಕಥೆ ಹೊಡೆಯುತ್ತಿದ್ದರು. ಜಮೀರ್ ಅಹ್ಮದ್ ಜೊತೆಗುಡಿ ಹಾದಿ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಮೀರ್ ಅಹ್ಮದ್ ಜೊತೆಗೆ ಯಾರು ಕೊಡುತ್ತಾರೆ ಅವರು ಹಾದಿ ಬಿಡುತ್ತಾರೆ. ಹಿಂದೆ ಕುಮಾರಸ್ವಾಮಿ ಜಮೀರ್ ಜೊತೆ ಕೂಡಿ ಹಾದಿ ಬಿಟ್ಟಿದ್ದರು, ಈಗ ಕುಮಾರಸ್ವಾಮಿ ಹಾದಿಯೊಳಗೆ ಬಂದಿದ್ದಾರೆ
ಈಗ ಜಮೀರ್ ಜೊತೆಗೂಡಿ ಸಿದ್ದರಾಮಯ್ಯ ಹಾದಿ ಬಿಟ್ಟು ಮೆಕ್ಕಾ ಮದೀನಾಕ್ಕೆ ಹೊರಟಿದ್ದಾರೆ ಎಂದು ಹೇಳಿದರು.

ರಾಮ ಮಂದಿರ ಉದ್ಘಾಟನೆಗೆ ಸೋನಿಯಾಗಾಂಧಿ ಬರ್ತಾರಾ? ಎಂಬ ವಿಚಾರವಾಗಿ ಮಾತನಾಡಿ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕೆಂದು ಸೋನಿಯಾ ಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ರಾಮ‌ಮಂದಿರ ಟ್ರಸ್ಟ್ ಆಹ್ವಾನ ಮಾಡಿವೆ. ಹಿಂದೂಗಳ ಬಗ್ಗೆ ಕಳಕಳಿ ಇದ್ದರೆ, ದೇಶದ ಬಗ್ಗೆ ಕಳಕಳಿ ಇದ್ದರೆ ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ. ಸೋನಿಯಾ ರಾಮ ಮಂದಿರಕ್ಕೆ ಬರೋದು ವೋಟಿಗಾಗಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+