ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಹಂದಿ ಎಂದ ಯತ್ನಾಳ್

ಬೆಂಗಳೂರು ಮಾರ್ಚ 6: ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನಕ್ಕಾಗಿ ಕೈ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೆ ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಕೂಗು ಜೋರಾಗಿದೆ. ಬಿಜೆಪಿ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬುದ್ದಿಭ್ರಮಣೆ ಆಗಿದೆ ಆಸ್ಪತ್ರೆಗೆ ಸೇರಿಸಬೇಕು ಎಂದಿದ್ದ ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರಿಗೆ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರಿಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಬಗ್ಗೆ ಕೇಳಿದಾಗ, 'ನಾನು ಹಂದಿಗಳ ಬಗ್ಗೆ ಮಾತನಾಡುವುದಿಲ್ಲ' ಎಂದಿದ್ದಾರೆ. ಇಲ್ಲಿ ರೇಣುಕಾಚಾರ್ಯ ಅವರು ಹೇಳಿದ 'ಯತ್ನಾಳ್‌ಗೆ ಬುದ್ದಿಭ್ರಮಣೆ ಆಗಿದೆ' ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯತ್ನಾಳ್ ಅವರು ರೇಣುಕಾಚಾರ್ಯ ಅವರನ್ನು 'ಹಂದಿ' ಎಂದು ಕರೆದಿದ್ದಾರೆ.

basanagouda patil yatnal calls former minister mp renukacharya a pig

ಯತ್ನಾಳ್‌ಗೆ ರೇಣುಕಾಚಾರ್ಯಗೆ ಎಚ್ಚರಿಕೆ

ರಾಜ್ಯದಲ್ಲಿ ಕುಟುಂಬ ರಾಜಕಾರಣ ವಿರೋಧಿಸಿ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ದೂರಿದ್ದ ಯತ್ನಾಳ್ ಅವರಿಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಯತ್ನಾಳ್ ಹರಕು ಬಾಯಿಯಿಂದ ಬಿಜೆಪಿಗೆ ಉಪ ಚುನಾವಣೆಯಲ್ಲಿ ಸೋಲಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅವರೇ ಕಾರಣ ಎಂದಿದ್ದರು. ಹೀಗಾಗಿ ಅವರು ಯತ್ನಾಳ್‌ಗೆ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. 'ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದರೆ ನಾವು ಸಹಿಸುವುದಿಲ್ಲ. ನಾವು ಉತ್ತರ ಕೊಡಬೇಕಾಗುತ್ತದೆ. ಸಮಾಜ ಉತ್ತರ ಕೊಡುತ್ತದೆ' ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಇನ್ನಷ್ಟು ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಯತ್ನಾಳ್ ಮುಡಾ ಪಾದಯಾತ್ರೆಗೆ ಬರಲಿಲ್ಲ. ಭ್ರಷ್ಟಾಚಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬ್ಲಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿಯ ಬ್ಲಾಕ್ ಮೇಲ್ ರಾಜಕಾರಣ ನಡೆಯದು ಎಂದಿದ್ದಾರೆ.

ರೇಣುಕಾಚಾರ್ಯಗೆ ಹಂದಿ ಎಂದ ಯತ್ನಾಳ್

ಇದಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, 'ಹಂದಿಗಳಿಗೆಲ್ಲಾ ನಾವು ಉತ್ತರ ಕೊಡಲಾಗುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರಿಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಂದಿ ಎಂದು ಕರೆದಿದ್ದಾರೆ.

ವಿಜಯೇಂದ್ರಗೆ ಯತ್ನಾಳ್ ತಿರುಗೇಟು

ಜಾತಿ ರಾಜಕಾರಣ ಮಾಡಿದವರೆಲ್ಲಾ ಮಾಜಿ ಶಾಸಕರು, ಮಾಜಿ ಸಚಿವರಾಗಿ ಉಳಿದಿದ್ದಾರೆ ಎಂದು ಹೇಳಿದ ವಿಜಯೇಂದ್ರ ಅವರಿಗೆ ತಿರುಗೇಟು ಕೊಟ್ಟ ಯತ್ನಾಳ್, 'ನಾವೇನು ಮಾಜಿಗಳಾಗಿ ಉಳಿದಿಲ್ಲ. ವಿಜಯೇಂದ್ರ ಅವರ ಹಿಂದೆ ಮಾಜಿಗಳ ಸಂಖ್ಯೆ ತುಂಬಾ ಇದೆ. ನಾವೆಲ್ಲಾ ಹಾಲಿ ಶಾಸಕರು ಆಗಿದ್ದೇವೆ. ಯಡಿಯೂರಪ್ಪ ಕೂಡ ನಾನು ಲಿಂಗಾಯತ ಅಂತ ಹೇಳಿಕೊಂಡೇ ಲೀಡರ್ ಆಗಿದ್ದು' ಎಂದು ವಾಗ್ದಾಳಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+