ಫೆಬ್ರವರಿಯಲ್ಲಿ 29 ದಿನ; ಬ್ಯಾಂಕ್ ರಜೆಗಳ ಪಟ್ಟಿ
ಬೆಂಗಳೂರು, ಜನವರಿ 31 : ಈ ವರ್ಷದ ಫೆಬ್ರವರಿಯಲ್ಲಿ 29 ದಿನಗಳಿವೆ. 2 ಮತ್ತು 4ನೇ ಶನಿವಾರ, ಭಾನುವಾರ ಸೇರಿ ಬ್ಯಾಂಕ್‌ಗಳಿಗೆ ಹಲವು ರಜೆಗಳಿವೆ. ತಿಂಗಳ ಮೊದಲ ದಿನವೇ ಬ್ಯಾಂಕ್ ಸಿಬ್ಬಂದಿ ಮುಷ್ಕರದಿಂದಾಗಿ ಬ್ಯಾಂಕ್ ವ್ಯವಹಾರ ಬಂದ್ ಆಗುವ ಸಾಧ್ಯತೆ ಇದೆ.
ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿಯಲ್ಲಿ 29 ದಿನಗಳು ಬರುತ್ತವೆ. ಈ ಬಾರಿ 29 ದಿನಗಳು ಬಂದಿವೆ. ಬ್ಯಾಂಕ್ ವ್ಯವಹಾರಕ್ಕೆ ಹೋಗುವವರು ಎಂದು ರಜೆ ಇದೆ ಎಂದು ಮೊದಲೇ ತಿಳಿದುಕೊಳ್ಳುವುದು ಉತ್ತಮ.
ಬ್ಯಾಂಕ್ ನೌಕರರು ಫೆಬ್ರವರಿ 1ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದ್ದರಿಂದ, ಫೆಬ್ರವರಿ ತಿಂಗಳ ಮೊದಲ ದಿನವಾದ ಶನಿವಾರ ಬ್ಯಾಂಕ್ ವ್ಯವಹಾರಗಳು ನಡೆಯುವ ಸಾಧ್ಯತೆ ಕಡಿಮೆ ಇದೆ.

ಫೆಬ್ರವರಿ 1ರಂದು ರಜೆ ಎಂದು ಪರಿಗಣಿಸಿದರೆ ಬ್ಯಾಂಕ್ ಸಿಬ್ಬಂದಿಗಳಿಗೆ ಒಟ್ಟು 10 ರಜೆಗಳು ಸಿಕ್ಕಿದಂತೆ ಆಗುತ್ತದೆ. 4 ಭಾನುವಾರ, 2 ಮತ್ತು 4ನೇ ಶನಿವಾರ ಎಂದಿನಂತೆ ಬ್ಯಾಂಕ್ ರಜೆ ಇರುತ್ತದೆ.
ರಜೆ ದಿನಗಳ ಪಟ್ಟಿ
* ಫೆಬ್ರವರಿ 1 : ಬ್ಯಾಂಕ್ ಮುಷ್ಕರ
* ಫೆಬ್ರವರಿ 2 : ಭಾನುವಾರ
* ಫೆಬ್ರವರಿ 8 : 2ನೇ ಶನಿವಾರ
* ಫೆಬ್ರವರಿ 9 : ಗುರು ರವಿದಾಸ್ ಜಯಂತಿ (ಕೆಲವು ರಾಜ್ಯಗಳಿಗೆ ಮಾತ್ರ)
* ಫೆಬ್ರವರಿ 16 : ಭಾನುವಾರ
* ಫೆಬ್ರವರಿ 18 : ದಯಾನಂದ ಸರಸ್ವತಿ ಜಯಂತಿ (ಕೆಲವು ರಾಜ್ಯಗಳು ಮಾತ್ರ)
* ಫೆಬ್ರವರಿ 19 : ಛತ್ರಪತಿ ಶಿವಾಜಿ ಜಯಂತಿ
* ಫೆಬ್ರವರಿ 21 : ಮಹಾ ಶಿವರಾತ್ರಿ
* ಫೆಬ್ರವರಿ 22 : 2ನೇ ಶನಿವಾರ
* ಫೆಬ್ರವರಿ 23 : ಭಾನುವಾರ












Click it and Unblock the Notifications