Bank Holidays February 2024: ಫೆಬ್ರವರಿಯಲ್ಲಿ ಬ್ಯಾಂಕ್‌ಗಳಿಗೆ 11 ದಿನ ರಜೆ, ಯಾವ್ಯಾವಾಗ ಎಲ್ಲೆಲ್ಲಿ?-ಮಾಹಿತಿ ತಿಳಿಯಿರಿ
ನವದೆಹಲಿ, ಜನವರಿ, 31: ಇನ್ನೇನು ಕೆಲವೇ ಕ್ಷಣಗಳಲ್ಲಿ 2024ರ ಜನವರಿ ತಿಂಗಳು ಮುಗಿದು ಫೆಬ್ರವರಿ ತಿಂಗಳಿಗೆ ಕಾಲಿಡಲಿದ್ದೇವೆ. ಇನ್ನು ಆರ್‌ಬಿಐ ದೇಶದಲ್ಲಿ ಫೆಬ್ರವರಿ ತಿಂಗಳ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ಯಾವ್ಯಾವಾಗ ಎಷ್ಟು ದಿನ ಎಲ್ಲೆಲ್ಲಿ ರಜೆ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೇಶದಲ್ಲಿ ವಿವಿಧ ಪ್ರಾದೇಶಿಕ ರಜೆಗಳೂ ಸೇರಿದಂತೆ ಒಟ್ಟಾರೆ 11 ರಜೆಗಳಿವೆ. ಇದರಲ್ಲಿ 6 ಭಾನುವಾರ ಮತ್ತು ಶನಿವಾರದ ರಜೆಗಳಿವೆ. ಹೆಚ್ಚಿನ ಪ್ರಾದೇಶಿಕ ರಜೆಗಳು ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇವೆ. ಕರ್ನಾಟಕ ಸೇರಿದಂತೆ ಹೆಚ್ಚಿನ ಸ್ಥಳಗಳಲ್ಲಿ ಬ್ಯಾಂಕುಗಳಿಗೆ ಭಾನುವಾರ ಮತ್ತು ಶನಿವಾರ ಮಾತ್ರವೇ ರಜೆಗಳು ಇವೆ. .

2024ರ ಫೆಬ್ರುವರಿಯಲ್ಲಿನ ಬ್ಯಾಂಕುಗಳಿಗಿರುವ ರಜಾ ದಿನಗಳು
* ಫೆಬ್ರವರಿ 4 - ಭಾನುವಾರ
* ಫೆಬ್ರವರಿ 10 - ಎರಡನೇ ಶನಿವಾರ
* ಫೆಬ್ರವರಿ 11 - ಭಾನುವಾರ
* ಫೆಬ್ರವರಿ 14 ಸರಸ್ವತಿ ಪೂಜೆ ಅಥವಾ ಬಸಂತ ಪಂಚಮಿ ಹಿನ್ನೆಲೆ ಅಗಾರ್ತಲ, ಭುಬನೇಶ್ವರ್, ಕೋಲ್ಕತಾದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
* ಫೆಬ್ರವರಿ 15 - ಲುಯ್ ಎನ್ಗೈ ನಿ ಹಬ್ಬ ಹಿನ್ನೆಲೆ ಮಣಿಪುರದ ಬ್ಯಾಂಕುಗಳಿಗೆ ರಜೆ ಇರಲಿದೆ.
* ಫೆಬ್ರವರಿ 18 - ಭಾನುವಾರ
* ಫೆಬ್ರವರಿ 19 - ಶಿವಾಜಿ ಜಯಂತಿ ಹಿನ್ನೆಲೆ ಬೇಲಾಪುರ್, ಮುಂಬೈ ಮತ್ತು ನಾಗಪುರದಲ್ಲಿ ಬ್ಯಾಕುಗಳು ಮುಚ್ಚಲ್ಪಡುತ್ತವೆ.
* ಫೆಬ್ರವರಿ 20 - ರಾಜ್ಯೋತ್ಸವ ಹಬ್ಬದ ಪ್ರಯುಕ್ತ ಐಜ್ವಾಲ್ ಮತ್ತು ಇಟಾನಗರದಲ್ಲಿ ಬ್ಯಾಕುಗಳು ಮುಚ್ಚಲ್ಪಡುತ್ತವೆ.
* ಫೆಬ್ರವರಿ 24 - ನಾಲ್ಕನೇ ಶನಿವಾರ
* ಫೆಬ್ರವರಿ 25 - ಭಾನುವಾರ
* ಫೆಬ್ರವರಿ 26 - ನ್ಯೋಕುಮ್ ಆಚರಣೆ ಹಿನ್ನೆಲೆ ಇಟಾನಗರದಲ್ಲಿ ಬ್ಯಾಕುಗಳು ಮುಚ್ಚಲ್ಪಡುತ್ತವೆ.
ಕರ್ನಾಟಕದಲ್ಲಿ ಯಾವ್ಯಾವಾಗ ರಜೆ?
* ಫೆಬ್ರವರಿ 4 - ಭಾನುವಾರ
* ಫೆಬ್ರವರಿ 10 - ಎರಡನೇ ಶನಿವಾರ
* ಫೆಬ್ರವರಿ 11 - ಭಾನುವಾರ
* ಫೆಬ್ರವರಿ 18 - ಭಾನುವಾರ
* ಫೆಬ್ರವರಿ 24 - ನಾಲ್ಕನೇ ಶನಿವಾರ
* ಫೆಬ್ರವರಿ 25 - ಭಾನುವಾರ
ಒಟ್ಟಿನಲ್ಲಿ ಮುಂಬರುವ ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗಳು 18 ದಿನಗಳು ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಲಿದ್ದು, 11 ದಿನಗಳ ಕಾಲ ಮುಚ್ಚಲ್ಪಡುತ್ತವೆ. ಪ್ರಮುಖವಾಗಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತಹ ವ್ಯವಹಾರ ನಡೆಸುವವರು ಈ ಪಟ್ಟಿಯನ್ನು ಗಮನಿಸಲೇಬೇಕಾಗುತ್ತದೆ.












Click it and Unblock the Notifications