ಹಿರಿಯ ಪತ್ರಕರ್ತ ಶೇಷ ರಾಘವಾಚಾರ್ ಇನ್ನಿಲ್ಲ

ಶೇಷಾದ್ರಿಪುರಂನಲ್ಲಿನ ಸ್ವಗೃಹದಲ್ಲಿ ನಿಧನ ಹೊಂದಿದ ಶೇಷ ರಾಘವಾಚಾರ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅವರು ಆಗಲಿದ್ದಾರೆ. ಗುರುವಾರ ಬೆಳಗ್ಗೆ 10.30ಕ್ಕೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸುಮಾರು 50 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಶೇಷ ರಾಘವಾಚಾರ್ ಅವರು ಬೆಂಗಳೂರು ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷರು. ಮುಂದೆ ಹಲವು ವರ್ಷಗಳ ಕಾಲ ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.
ಶೇಷ ರಾಘವಾಚಾರ್ ಅವರು ನವ ಭಾರತ ಪತ್ರಿಕೆ, ಸಮಾಚಾರ್ ಭಾರತಿ, ದೆಹಲಿ ವಾರ್ತೆ ಮತ್ತು ಆಕಾಶವಾಣಿಯಲ್ಲಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಮುರಾರ್ಜಿ ದೇಸಾಯಿ ಕುರಿತು 'ವಿಭೂತಿ ಪುರುಷ', ಹಿರಿಯ ಜನಸಂಘದ ನಾಯಕ ಡಾ. ಶಾಮ್ ಪ್ರಸಾದ್ ಮುಖರ್ಜಿ, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್, ವಚನ ಭಾರತ ಸೇರಿದಂತೆ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ.












Click it and Unblock the Notifications