ಬೆಂಗಳೂರು: ನೀಲಗಿರಿ ತೋಪಿನಲ್ಲಿ ಗ್ಯಾಂಗ್‌ ರೇಪ್‌

Bangalore - Minor girl gang raped by 3 HAL police station limits
ಬೆಂಗಳೂರು, ನ. 25: ಬೆಂಗಳೂರಿನ ಬೆಮಲ್‌ ಲೇ ಔಟ್‌ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನವೆಂಬರ್ 22ರಂದು ಗ್ಯಾಂಗ್‌ ರೇಪ್‌ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಸ್ಲಾಂಪುರ ನಿವಾಸಿಯಾಗಿರುವ ಬಾಲಕಿಯ ಮೇಲೆ ಪರಿಚಯಸ್ಥನಾಗಿರುವ ವಾಸೀಂ ಮತ್ತು ಅವನ ಇಬ್ಬರು ಸ್ನೇಹಿತರು ಗ್ಯಾಂಗ್‌ ರೇಪ್‌ ನಡೆಸಿರುವ ಬಗ್ಗೆ ಎಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಎಚ್‌ಎಎಲ್‌ ಠಾಣಾ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಏನಾಯಿತು?: ಬಾಧಿತ ಬಾಲಕಿ 16 ವರ್ಷದ ಅಪ್ರಾಪ್ತಳಾಗಿದ್ದು, ಘಟನೆ ನಡೆದ ದಿನ ಅಂಗಡಿಯಲ್ಲಿ ಕುಳಿತಿದ್ದಳು. ಆ ವೇಳೆ ಅಂಗಡಿಗೆ ಬಂದ ಪರಿಚಯಸ್ಥ ವಾಸೀಂ ಆಕೆಯನ್ನು ಪುಸಲಾಯಿಸಿ, ಹೊರಗೆ ಕರೆದೊಯ್ದಿದ್ದಾನೆ. ಆನಂತರ ಆಕೆಗೆ ಸಿನಿಮಾ ತೋರಿಸಲು ಚಿತ್ರಮಂದಿರಕ್ಕೆ ಕರೆದೊಯ್ದಿದ್ದಾನೆ.

ಮ್ಯಾಟ್ನಿ ಷೋ ಮುಗಿಸಿಕೊಂಡು ಮನೆಗೆ ಬರುವಾಗ ಆರೋಪಿ ವಾಸೀಂ ಬಾಲಕಿಯನ್ನು ಮಾರ್ಗ ಮಧ್ಯೆ ನೀಲಗಿರಿ ತೋಪಿಗೆ ಎಳೆದೊಯ್ದಿದ್ದಾನೆ. ಅಲ್ಲಿ ತನ್ನ ಇಬ್ಬರು ಸ್ನೇಹಿತರೊಡಗೂಡಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ.

ಅಂದು ರಾತ್ರಿ 7 ಗಂಟೆಗೆ ಮಗಳು ವಾಪಸಾದಾಗ ಅವಳ ನಡುವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿದ್ದಾರೆ. ವೃದ್ಯರಲ್ಲಿಗೆ ಕರೆದೊಯ್ದು ತೋರಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಪೋಷಕರು ವಿಚಾರಣೆ ನಡೆಸಲಾಗಿ ಆಕೆ ಕುಕೃತ್ಯವನ್ನು ವಿವರಿಸಿದ್ದಾಳೆ. ಪೋಷಕರು ತಕ್ಷಣ ಎಚ್‌ಎಎಲ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಬಾಲಕಿ ಸ್ನೇಹಿತ ಆಟೋ ಚಾಲಕ ಹುಸೇನ್ ಮತ್ತು ಆತನ ಸ್ನೇಹಿತರಾದ ವಾಸಿಂ, ಜಾಫರ್ ಹಾಗೂ ಮತ್ತೊಬ್ಬ ಸೇರಿ ಕೃತ್ಯವೆಸಗಿದ್ದಾರೆ. ಹುಸೇನ್ ಮತ್ತು ವಾಸಿಂ ಎಂಬವರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಶೋಧ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+