ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲು ಸಾಲು ಹಬ್ಬ; ಸಾಲು ಸಾಲು ರಜಾ ಮಜಾ!

By Srinath
|
Google Oneindia Kannada News

ಬೆಂಗಳೂರು, ಅ. 8: ವಾರ್ಷಿಕ ವಿಧಿಯಂತೆ ವರ್ಷಾಂತ್ಯದಲ್ಲಿ ಇನ್ನೆರಡು ಮಾಸದಲ್ಲಿ ಅಂದರೆ ಇದೇ ಅಕ್ಟೋಬರ್, ನವೆಂಬರಿನಲ್ಲಿ ರಾಜ್ಯ ಸರಕಾರಿ ನೌಕರರಿಗಾಗಿ ಸಾಲು-ಸಾಲು ರಜೆಗಳು ಕಾದು ಕುಳಿತಿವೆ. ಎರಡೂ ತಿಂಗಳಲ್ಲಿ ಲೆಕ್ಕಕ್ಕೆ ಬರುವ ನಾಲ್ಕು ಭಾನುವಾರ, ಎರಡನೇ ಶನಿವಾರಗಳನ್ನು ಗಣನೆಗೆ ತೆಗೆದುಕೊಂಡರೆ ಒಟ್ಟು ತಲಾ 12 ರಜೆಗಳನ್ನು ಅನುಭವಿಸಬಹುದು.

ಇನ್ನು ಮಕ್ಕಳಿಗಂತೂ ಮಿಡ್ ಟರ್ಮ್ ದಸರೆ ರಜೆ ಈಗಾಗಲೇ ಬಂದಾಗಿದೆ! ಸೋ, ಇಡೀ ಸ್ವಕುಟುಂಬ ಸಮೇತ ಟ್ರಿಪ್ ಹೊರಡಲು ಇದು ಸಕಾಲ. ಆದರೆ ರಾಜ್ಯದಲ್ಲಿ ಸರಕಾರಿ ಆಡಳಿತಯಂತ್ರ ಬಹುತೇಕ ಸ್ಥಗಿತಗೊಳ್ಳಲಿದೆ.

bangalore-holidays-calendar-for-govt-employees-2013

ಸರಕಾರಿ ನೌಕರರ ಸಮುದಾಯದಲ್ಲಿ ಸಾಮಾನ್ಯವಾಗಿ ಶಿಕ್ಷಣ ಇಲಾಖೆಯ ಬೋಧಕ ವರ್ಗಕ್ಕೆ ಇಂಥ ರಜೆಗಳು ಸಾಮಾನ್ಯ. ಉಳಿದ ಸರಕಾರಿ ನೌಕರರಿಗೆ ಇಂಥ ರಜೆಗಳು ಸಿಗುವುದು ಕಷ್ಟ. ತಿಂಗಳಲ್ಲಿ ಬರುವ ನಾಲ್ಕು ಭಾನುವಾರ, ಎರಡನೇ ಶನಿವಾರ ಸೇರಿ ಐದು ರಜೆಗಳು, ಜತೆಗೆ ಒಂದೋ- ಎರಡೋ ಸಾರ್ವತ್ರಿಕ ರಜೆ ಸಿಗುವುದು ಸಾಮಾನ್ಯ.

ಈ ವರ್ಷದ ಫೆಬ್ರವರಿ, ಜೂನ್, ಜುಲೈ ತಿಂಗಳಲ್ಲಿ ಒಂದೂ ಸಾರ್ವತ್ರಿಕ ರಜೆ ಇರಲಿಲ್ಲ. ಮಾರ್ಚ್, ಸೆಪ್ಟೆಂಬರ್, ಡಿಸೆಂಬರಿನಲ್ಲಿ ಒಂದೊಂದು ರಜೆ ನಿಗದಿಯಾಗಿವೆ. ಹಾಗಾಗಿ EL (ಗಳಿಕೆ ರಜೆ), CL (ಸಾಂದರ್ಭಿಕ ರಜೆ) , HPL (ಹಾಫ್ ಪೇ ಲೀವ್) ಹಾಕಿಕೊಳ್ಳುವ ಅವಶ್ಯಕತೆಯೂ ಇಲ್ಲ. ಅದೆಲ್ಲಾ ಉಳಿತಾಯ ಖಾತೆಗೆ ಸಂದಾಯವಾಗುತ್ತವೆ.

ಇಡೀ ವಾರ ರಜೆ ಮಜಾ
ಈಗಾಗಲೇ ಅಕ್ಟೋಬರ್ ಮೊದಲ ವಾರದಲ್ಲಿ 2ರಂದು ಗಾಂಧಿ ಜಯಂತಿ. 4 ಮಹಾಲಯ ಅಮಾವಾಸ್ಯೆ ರಜೆ ತೆಗೆದುಕೊಂಡಾಗಿದೆ. ಮೊದಲ ವಾರವೇ ಎರಡು ದಿನ ರಜೆ ಬಂದಾಗಿದೆ. ಆದರೆ ಈ ವಾರದಲ್ಲಿ ಯಾವುದೇ ರಜೆ ಇಲ್ಲ. ಅ. 13 ರ ಭಾನುವಾರದಿಂದ ಆರಂಭವಾಗುವ ಮೂರನೇ ವಾರದಲ್ಲಿ ಮೂರು ರಜೆಗಳು ಬರುತ್ತವೆ. ಅ. 12ರ ಎರಡನೇ ಶನಿವಾರ, ಅ. 13ರ ಭಾನುವಾರ, ಅ. 14ರ ಸೋಮವಾರ ವಿಜಯ ದಶಮಿ.

ಅ. 16ರಂದು ಬಕ್ರೀದ್, ಅ. 15ರಂದು ಒಂದು ದಿನ ರಜೆ ಹಾಕಿದರೆ ನಿರಂತರವಾಗಿ 4 ದಿನ ರಜೆ ಅನುಭವಿಸಬಹುದು. ರಜೆಯ ಮಜೆ ಇಲ್ಲಿಗೆ ಮುಗಿಯುವುದಿಲ್ಲ. ಅ. 18ರಂದು ಮಹರ್ಷಿ ವಾಲ್ಮೀಕಿ ಜಯಂತಿ. ಅ. 17ರ ಗುರುವಾರ ವೈಯಕ್ತಿಕ ಖಾತೆಯಿಂದ ರಜೆಯನ್ನು ಎತ್ತಿಟ್ಟುಕೊಂಡರೆ, ನಿರಂತರವಾಗಿ ಆರು ದಿನ ರಜೆಯ ಸಂಭ್ರಮದಲ್ಲಿರಬಹುದು. ಒಟ್ಟಾರೆ ಅಕ್ಟೋಬರ್ ಮೂರನೇ ವಾರದಲ್ಲಿ ನೌಕರರಿಗೇನಾದರೂ ಎರಡು ರಜೆಗಳು ಸಿಕ್ಕರೆ, ಒಟ್ಟಾರೆ ಏಳು ದಿನ ನಿರಂತರ ರಜೆ !

ನವೆಂಬರಿನಲ್ಲಿ ರಜಾ ಯೋಗ ಹೇಗಿದೆ?
ನವೆಂಬರ್‌ ನಲ್ಲೂ ಈ ಅವಕಾಶವುಂಟು. ನ. 1ರ ಶುಕ್ರವಾರ ಕನ್ನಡ ರಾಜ್ಯೋತ್ಸವ, ನವೆಂಬರ್ 2ರ ಶನಿವಾರ ನರಕ ಚತುರ್ದಶಿ, ನವೆಂಬರ್ 3 ಎಂದಿನಂತೆ ಭಾನುವಾರ, ನವೆಂಬರ್ 4ರಂದು ಬಲಿಪಾಡ್ಯಮಿ ರಜೆ, ನ. 14 ಮೊಹರಂ, ನ. 20 ಕನಕ ಜಯಂತಿ - ಒಟ್ಟು ಸಾಲಾಗಿ 6 ರಜೆಗಳು ಕಟ್ಟಿಟ್ಟ ಬುತ್ತಿ!

English summary
Here is a Bangalore holidays calendar for Karnataka govt employees in November and October 2013. A total of around 14 days leave can avail the employees and make a grand trip/ picnic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X