ಉಡುಪಿ ರೈತರ ನಿದ್ದೆಗೆಡಿಸಿದ ಬನಾನ ಸ್ಕಿಪ್ಪರ್ ರೋಗ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಡಿಸೆಂಬರ್, 09: ಉಡುಪಿ ಜಿಲ್ಲೆಯಾದ್ಯಂತ ಬಾಳೆ ಎಲೆಗೆ ಬನಾನ ಸ್ಕಿಪ್ಪರ್ ರೋಗ ಹರಡುತ್ತಿದ್ದು ಬಾಳೆ ಕೃಷಿಕರು ಕಂಗಾಲಾಗಿದ್ದಾರೆ. ಬಾಳೆ ಹಣ್ಣಿನ ಬೆಲೆ ಗಗನಕ್ಕೇರಿರುವ ಈ ಹೊತ್ತಲ್ಲೇ ಬಾಳೆ ಎಲೆಗಳ ಮೇಲೆ ಗೂಡುಕಟ್ಟುವ ಈ ಹುಳುಗಳು ರೈತರ ನಿದ್ದೆಗೆಡಿಸಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ತೋಟಗಳಲ್ಲಿ ಹುಳ ಬಾಧೆ ಕಾಣಿಸಿಕೊಂಡ ಪರಿಣಾಮ ಗಿಡದ ಎಲ್ಲಾ ಎಲೆಗಳು ಸುರುಳಿಯಾಗಿ ಹಾಳಾಗಿದೆ. ಈ ಬಾರಿ ಒಳ್ಳೆ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ಹುಳ ಬಾಧೆ ಪುನಃ ನಿರಾಸೆ ತಂದಿದೆ.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']

Banana skipper disease attacked to Banana tree at Udupi

ಬನಾನ ಸ್ಕಿಪ್ಪರ್ ರೋಗಕ್ಕೆ ಕಾರಣವಾಗುವ ಹುಳುಗಳು ಮೊದಲು ಮೊಟ್ಟೆ ರೂಪದಲ್ಲಿರುತ್ತದೆ. ನಂತರ ಚಿಟ್ಟೆ ರೂಪ ತಾಳುವ ಈ ಹುಳುಗಳಿಗೆ ಬಾಳೆ ಎಲೆಯೇ ಆಹಾರವಾಗಿದದ್ದು, ಬಾಳೆ ಕೃಷಿ ಹೆಚ್ಚಿದ್ದಲ್ಲಿ ಈ ಹುಳುಗಳು ಠಿಕಾಣಿ ಹೂಡುತ್ತವೆ.

ಮಳೆಗಾಲ ಮುಗಿದು ಉಷ್ಣಾಂಶ ಜಾಸ್ತಿಯಾದಾಗ ಈ ಹುಳುಗಳು ಹುಟ್ಟುತ್ತದೆ. ಇದೀಗ ಈ ರೋಗ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರ ತೋಟಗಳಲ್ಲಿ ಕಾಣಿಸಿಕೊಂಡಿದೆ. ಇದರಿಂದ ಬಾಳೆಗಿಡದ ಎಲ್ಲಾ ಎಲೆಗಳು ಸುರುಳಿಯಾಗಿ ಹಾಳಾಗಿದೆ.[ವಿಶಿಷ್ಟ ರುಚಿಯ ಮಟ್ಟುಗುಳ್ಳ ತರಕಾರಿಗೆ 'ಕಾಂಡ ಕೊರಕ ರೋಗ']

ಬನಾನ ಸ್ಕಿಪ್ಪರ್ ಹುಳಬಾಧೆಗೆ ಕೀಟ ನಾಶಕ ಸಿಂಪಡಣೆಯೂ ಕಷ್ಟಸಾಧ್ಯ. ಹುಳುಗಳು ಸುರುಳಿಕಟ್ಟಿ ಮೊಟ್ಟೆಯಿಡುವುದರಿಂದ ಅಲ್ಲಿಗೆ ಕೀಟನಾಶಕ ತಲುಪುವುದಿಲ್ಲ. ರಾಸಾಯನಿಕ ಸಿಂಪಡಿಸಿದರೆ ಹಣ್ಣಿಗೂ ವಿಷ ಸೇರುವ ಸಾಧ್ಯತೆಯಿದೆ.

ತಮಿಳುನಾಡು, ಕೇರಳ ರಾಜ್ಯದಲ್ಲಿ ಬಾಳೆ ಕೃಷಿಗೆ ಕೀಟಬಾಧೆ ತಗುಲಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾಧೆ ಕಾಣಿಸಿಕೊಂಡಿದೆ. ರೈತರು ತೋಟದ ಪಕ್ಕ ಹಣ್ಣು ಹಂಪಲು ಮರ ಬೆಳೆಸಿದರೆ ಹಕ್ಕಿಗಳನ್ನು ಆಕರ್ಷಿಸಬಹುದಾಗಿದೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಆಗ ಹಕ್ಕಿಗಳು ಹುಳಗಳನ್ನು ತಿನ್ನುವುದರಿಂದ ತಗುಲಿರುವ ರೋಗ ಕೊಂಚ ಮಟ್ಟಿಗಾದರೂ ಕಡಿಮೆ ಆಗಬಹುದು. ಬನಾನ ಸ್ಕಿಪ್ಪರ್ ರೋಗಕ್ಕೆ ಇದೇ ರಾಮಬಾಣ ಎಂದು ಕೃಷಿ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Banana skipper disease attacked to Banana tree at Udupi, Dakshina Kannada. All farmers are scared about this disease. 
Please Wait while comments are loading...