Bakrid 2024: ಈ ಬಕ್ರೀದ್‌ನಲ್ಲಿ ಕುರಿಗಳಿಗಿಂತ ಮೇಕೆಗಳಿಗೆ ಬೇಡಿಕೆ ಹೆಚ್ಚು!
ಬೆಂಗಳೂರು, ಜೂನ್. 10: ಮುಸ್ಲಿಂ ಬಾಂಧವರು ಶ್ರದ್ಧೆ ಭಕ್ತಿಯಿಂದ ಆಚರಿಸುವ ಈದ್ ಅಲ್-ಅಧಾ (ಬಕ್ರೀದ್) ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 17 ರಂದು ಆಚರಿಸಲಾಗುವ ಬಕ್ರೀದ್ ಹಬ್ಬಕ್ಕೂ ಮುನ್ನ ಜಾನುವಾರುಗಳ ಬೆಲೆ ಏರಿಕೆಯಾಗಿದೆ. ಕುರಿ - ಮೇಕೆಗಳ ಬೆಲೆ ಗಗನಕ್ಕೆ ಏರಿದ್ದು, ಎಲ್ಲೆಡೆ ಭರ್ಜರಿ ಮಾರಾಟವಾಗುತ್ತಿದೆ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ಕುರಿ- ಮೇಕೆಗಳ ಸಂತೆ ನಡೆದಿದೆ. ವಿವಿಧ ತಳಿಗಳ ಕುಎಇ, ಮೇಕೆ ಸಂತೆಗೆ ಬರಂದಿದ್ದವು. ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿದ್ದು, ಈ ಬಾರಿ ಮೇಕೆಗಳಿಗೆ ಹೋಲಿಸಿದರೆ ಈ ವರ್ಷ ಕುರಿ, ಎತ್ತುಗಳಿಗೆ ಬೇಡಿಕೆ ಕುಸಿದಿದೆ. ಈ ಬಗ್ಗೆ ಕುರುಬರು ಅಳಲು ತೋಡಿಕೊಂಡಿದ್ದಾರೆ.

ಕುರಿ- ಮೇಕೆಗಳ ಸಂತೆಗೆ ಮಂಡ್ಯ, ಮದ್ದೂರು, ಚೆನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಬಾಗೇಪಲ್ಲಿ, ತುಮಕೂರು, ನೆಲಮಂಗಲ, ಹೊಸಕೋಟೆ, ಹರಿಹರ, ಅರಸಿಕೆರೆ ಸೇರಿದಂತೆ ಹೆಚ್ಚಿನ ವ್ಯಾಪಾರಸ್ಥರು ಬಂದಿದ್ದರು. ಆದರೆ, ಕುರಿಗಳ ಬೆಲೆ ಹೆಚ್ಚಾಗಿದ್ದು, ಗ್ರಾಹಕರು ಹೆಚ್ಚಾಗಿ ಮೇಕೆಗಳ ಕಡೆ ಗಮನ ಹರಿಸಿದ್ದಾರೆ.
ಕಳೆದ 15 ವರ್ಷಗಳಿಂದ ಆರ್‌ಟಿ ನಗರದಲ್ಲಿ ಕುರಿಗಳನ್ನು ಮಾರಾಟ ಮಾಡುತ್ತಿರುವ ರೈತ ಶಾಕಿಬ್ ಅವರನ್ನು ಉಲ್ಲೇಖಿಸಿರುವ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ''ಕಳೆದ ವರ್ಷ ನಾವು 150ಕ್ಕೂ ಹೆಚ್ಚು ಕುರಿಗಳನ್ನು ಮಾರಾಟ ಮಾಡಿದ್ದೇವೆ. ಈ ವರ್ಷವೂ ಇದೇ ಬೇಡಿಕೆಯನ್ನು ನಿರೀಕ್ಷಿಸಿ ಬಾಗಲಕೋಟೆಯಿಂದ ಬಾಡಿಗೆ ಲಾರಿ ಮೂಲಕ 200 ಕುರಿಗಳನ್ನು ತಂದಿದ್ದೇವೆ. ಆದರೆ, ಇದುವರೆಗೆ ಕೇವಲ 40 ಕುರಿಗಳಿಗೆ ಮಾತ್ರ ಮಾರಾಟ ಮಾಡಲಾಗಿದೆ. ಸಾರಿಗೆ ವೆಚ್ಚವನ್ನು ಕೂಡ ಗಳಿಸಲು ನಮಗೆ ಸಾಧ್ಯವಾಗಿಲ್ಲ" ಎಂದಿದ್ದಾರೆ.
ಇನ್ನು, ಕೇರಳ ಮತ್ತು ತಮಿಳುನಾಡಿನ ಗ್ರಾಹಕರು ಕುರಿಗಳಿಗಿಂತ ಮೇಕೆ ಮತ್ತು ಎತ್ತುಗಳಿಗೆ ಆದ್ಯತೆ ನೀಡುವುದರಿಂದ ಮೇಕೆ ಮಾರಾಟವು ಅಧಿಕವಾಗಿದೆ ಎಂದು ಮಾರಾಟಗಾರರು ಉಲ್ಲೇಖಿಸಿದ್ದಾರೆ. "ಕಳೆದ ವರ್ಷ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಹಲವಾರು ಗ್ರಾಹಕರು ಎತ್ತುಗಳು ಬೇಕು ಎಂದಿದ್ದರು. ಅದರಂತೆ ಈ ವರ್ಷವೂ ವ್ಯವಸ್ಥೆ ಮಾಡಿದೆವು. ಆದರೆ, ಈ ವರ್ಷ ಎತ್ತುಗಳ ಬೇಡಿಕೆಯೂ ಕಡಿಮೆಯಾಗಿದೆ. 18-19 ಕೆಜಿ ತೂಕದ ಮೇಕೆಗಳ ಬೆಲೆ ಕಳೆದ ವರ್ಷ 12,000 ರೂ.ನಿಂದ ಈ ವರ್ಷ 20,000 ರೂ.ಗೆ ಏರಿದೆ" ಎಂದು ತಿಳಿಸಿದ್ದಾರೆ.

ಕಡಿಮೆ ಆಯ್ತು ಕುರಿಗಳ ಬೆಲೆ
ಮೇಕೆಗಳ ಬೇಡಿಕೆ ಮತ್ತು ಬೆಲೆ ಏರಿಕೆಯಾಗುತ್ತಿದ್ದರೇ, ಇತ್ತ, ಕುರಿಗಳ ಬೆಲೆಗಳು ಕಡಿಮೆಯಾಗುತ್ತಿದೆ. ಕಳೆದ ವರ್ಷ 15,000 ರಿಂದ 50,000 ರೂಪಾಯಿ ಇದ್ದ ಬೆಲೆ ಈಗ ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ ಮೇಕೆಗಳಿಗಿಂತ ಕುರಿಗಳಿಗೆ ಆದ್ಯತೆ ಇದೆ. ಕುರಿ ಮಾರಾಟ ಹೆಚ್ಚಾಗುತ್ತದೆ ಎಂದು ಎಲ್ಲರೂ ಆ ಕಡೆ ಗಮನ ನೀಡೀದ ಕಾರಣ ಬೇಡಿಕೆ ಇರುವಷ್ಟು ಮೇಕೆ ಪೂರೈಕೆಯಾಗುತ್ತಿಲ್ಲ.
ಈದ್ ಅಲ್-ಅಧಾ (ಬಕ್ರೀದ್)
ಬಕ್ರೀದ್, ಈದ್ ಅಲ್-ಅಧಾ, ಈದ್ ಕುರ್ಬಾನ್ ಅಥವಾ ಕುರ್ಬಾನ್ ಬೈರಾಮಿ ಎಂದೂ ಕರೆಯಲ್ಪಡುವ ಬಕ್ರಾ ಈದ್ ಅನ್ನು ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ನ ಹನ್ನೆರಡನೇ ತಿಂಗಳಾದ ಜುಲ್ ಹಿಜ್ಜಾ (ಧು ಅಲ್-ಹಿಜ್ಜಾ) ನಲ್ಲಿ ಆಚರಿಸಲಾಗುತ್ತದೆ. ಈ ವರ್ಷ, ಇಸ್ಲಾಮಿಕ್ ಹಬ್ಬವನ್ನು ಚಂದ್ರನ ಅರ್ಧಚಂದ್ರಾಕಾರವನ್ನು ಅವಲಂಬಿಸಿ ಜೂನ್ 16 ಅಥವಾ ಜೂನ್ 17 ರಂದು ಆಚರಿಸಲಾಗುತ್ತದೆ.
ಧು ಅಲ್-ಹಿಜ್ಜಾದ ಹತ್ತನೇ ದಿನದಂದು, ವಿಶ್ವದಾದ್ಯಂತ ಮುಸ್ಲಿಮರು ಈದ್-ಉಲ್-ಅಧಾವನ್ನು ಆಚರಿಸುತ್ತಾರೆ. ಜಿಬ್ರೀಲ್ ಮೂಲಕ ಅಲ್ಲಾಹನು ಕಳುಹಿಸಿದ ಕುರಿಗಳನ್ನು ಸ್ಮರಿಸುತ್ತಾ ಅವರು ಮೇಕೆಗಳು ಅಥವಾ ಕುರಿಗಳನ್ನು ಬಲಿ ನೀಡುತ್ತಾರೆ. ಈ ತ್ಯಾಗದ ಮಾಂಸವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಲಾಗಿಗುತ್ತದೆ. ಒಂದು ಭಾಗವನ್ನು ಕುಟುಂಬಕ್ಕಾಗಿ, ಇನ್ನೊಂದು ಭಾಗವನ್ನು ಸಂಬಂಧಿಕರೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ಉಳಿದ ಭಾಗವನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ನೀಡಲಾಗುತ್ತದೆ.












Click it and Unblock the Notifications