ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ದಿವ್ಯಾ ಹಾಗರಗಿಗೆ ಜಾಮೀನು, ಯಾಕೆ ಸಂಭ್ರಮ ಎಂದ ಕಾಂಗ್ರೆಸ್!

|
Google Oneindia Kannada News

ಬೆಂಗಳೂರು, ಜನವರಿ 08; ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದು ಪಿಎಸ್‌ಐ ನೇಮಕಾತಿ ಹಗರಣ. ಈ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ 27 ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಆರೋಪಿಗಳಿಗೆ ಜಾಮೀನು ನೀಡಿದ ಬಳಿಕ ಎಲ್ಲರೂ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಪಟಾಕಿ ಸಿಡಿಸಿ ದಿವ್ಯಾ ಹಾಗರಗಿ ಬರಮಾಡಿಕೊಳ್ಳಲಾಗಿದೆ ಎಂಬ ಸುದ್ದಿಗಳು ಹಬ್ಬಿವೆ.

Breaking: ಪಿಎಸ್ಐ ನೇಮಕಾತಿ ಹಗರಣ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನುBreaking: ಪಿಎಸ್ಐ ನೇಮಕಾತಿ ಹಗರಣ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನು

ಭಾನುವಾರ ಕರ್ನಾಟಕ ಕಾಂಗ್ರೆಸ್ ಟ್ವೀಟ್‌ ಮಾಡಿದ್ದು, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. 'ಸರ್ಕಾರದ ಸಹಕಾರ, ಗೃಹಸಚಿವರ ಮುತುವರ್ಜಿಯಿಂದ ಜಾಮೀನು ಪಡೆದು ಹೊರಬಂದ PSI ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯ ಹಾಗಾರಗಿಯನ್ನು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು' ಎಂದು ಹೇಳಿದೆ.

ಪಿಎಸ್‌ಐ ನೇಮಕಾತಿ ಹಗರಣ: ದಿವ್ಯಾ, ವೈಜನಾಥ್ ಜಾಮೀನು ಅರ್ಜಿ ಮತ್ತೆ ವಜಾ ಪಿಎಸ್‌ಐ ನೇಮಕಾತಿ ಹಗರಣ: ದಿವ್ಯಾ, ವೈಜನಾಥ್ ಜಾಮೀನು ಅರ್ಜಿ ಮತ್ತೆ ವಜಾ

Bail To Divya Hagaragi Why Celebration Karnataka Congress Asked BJP

'ಯಾಕೆ ಈ ಸಂಭ್ರಮ @BJP4Karnataka?. 56 ಸಾವಿರ ಯುವಕರ ಬದುಕು ಮುಳುಗಿಸಿದ್ದಕ್ಕಾ?. ಸರ್ಕಾರದ ಕಿಂಗ್‌ಪಿನ್‌ಗಳನ್ನು ಬಚಾವು ಮಾಡಿದ್ದಕ್ಕಾ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಪಿಎಸ್‌ಐ ಹಗರಣ: ಪ್ರಮುಖ ಆರೋಪಿ ದಿವ್ಯಾ ಪತಿ ರಾಜೇಶ್ ಹಾಗರಗಿಗೆ ಜಾಮೀನು ಪಿಎಸ್‌ಐ ಹಗರಣ: ಪ್ರಮುಖ ಆರೋಪಿ ದಿವ್ಯಾ ಪತಿ ರಾಜೇಶ್ ಹಾಗರಗಿಗೆ ಜಾಮೀನು

ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, 'ಭ್ರಷ್ಟ @BJP4Karnataka ಆಡಳಿತದ ವಿಪರ್ಯಾಸ ಇದು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ 56 ಸಾವಿರ PSI ಅಭ್ಯರ್ಥಿಗಳು ಭವಿಷ್ಯದ ದಿಕ್ಕು ಕಾಣದೆ ನೋವು ಅನುಭವಿಸುತ್ತಿದ್ದಾರೆ' ಎಂದು ಹೇಳಿದೆ.

'ಅಕ್ರಮ ನಡೆಸಿದ ಆರೋಪಿಗಳು ಸರ್ಕಾರದ ಸಹಕಾರದಿಂದ ಜಾಮೀನು ಪಡೆದು, ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಈ ಮೂಲಕ 56 ಸಾವಿರ ಯುವಕರನ್ನು ಅಣಕಿಸುತ್ತಿದೆ ಸರ್ಕಾರ' ಎಂದು ಟೀಕೆ ಮಾಡಿದೆ.

ಗೃಹ ಸಚಿವರಿಗೆ ಪ್ರಶ್ನೆ; ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'ಗೃಹ ಸಚಿವ @JnanendraAraga
ಅವರೇ, PSI ಹಗರಣದ ಆರೋಪಿಗಳಿಗೆ ಅರ್ಥಾತ್ ನಿಮ್ಮ ಆಪ್ತರಿಗೆ ಜಾಮೀನು ದೊರಕಿದ್ದು ನಿಮ್ಮ ವೈಫಲ್ಯದಿಂದಲೋ ಅಥವಾ ಸಹಕಾರದಿಂದಲೋ?. ಜಾಮೀನು ದೊರಕಿಸಿಕೊಡುವಲ್ಲಿ ಸರ್ಕಾರವೇ ಶ್ರಮ ಹಾಕಿದಂತಿದೆ. ವಿಧಾನಸೌಧದ ಒಳಗಿನ ಕುಳಗಳನ್ನು ವಿಚಾರಣೆಗೆ ಒಳಪಡಿಸಿದೆ ತನಿಖೆಯನ್ನು ದುರ್ಬಲಗೊಳಿಸಿದ್ದೇಕೆ?' ಎಂದು ಪ್ರಶ್ನೆ ಮಾಡಿದೆ.

ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದ ಬಳಿಕ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದರು. ಬಳಿಕ ಅವರನ್ನು ಬಂಧಿಸಲಾಗಿತ್ತು. ಎಂಟು ತಿಂಗಳ ಕಾಲ ಜೈಲಿನಲ್ಲಿದ್ದ ಆಕೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಾಜಿ ಪಾಟೀಲ ಜಾಮೀನು ಮಂಜೂರು ಮಾಡಿದ್ದರು. ಆಕೆ ಪತಿ ರಾಜೇಶ್ ಸಹ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

English summary
PSI recruitment scam accused Divya Hagaragi granted bail and released from jail. Why celebration asked Karnataka Congress BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X