100% ಬಹುಮತ ಸಾಬೀತು ಮಾಡಿಯೇ ತೀರುತ್ತೇನೆ: ಯಡಿಯೂರಪ್ಪ ಶಪಥ

ಬೆಂಗಳೂರು, ಮೇ 17: ಬಹುಮತ ಸಾಬೀತು ಮಾಡಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ ಆದರೆ ಅಷ್ಟು ದಿನ ಅವಶ್ಯಕತೆ ಇಲ್ಲ ಇನ್ನೂ ಬೇಗ ಬಹುಮತವನ್ನು ಸಾಬೀತು ಮಾಡುತ್ತೇವೆ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸದಿಂದ ನುಡಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಮೇಲೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 100% ಶತಾಯಗತಾಯ ಬಹುಮತ ಸಾಬೀತು ಮಾಡಿಯೇ ತೀರುತ್ತೇನೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ರೆಸಾರ್ಟ್‌ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ಎರಡೂ ಪಕ್ಷದ ಶಾಸಕರನ್ನು ಕೂಡಿ ಹಾಕಿ ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ, ಅವರ ಮೊಬೈಲ್ ಕಿತ್ತುಕೊಳ್ಳಲಾಗಿದೆ, ಅವರ ಕುಟುಂಬದವರೊಂದಿಗೂ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

B S Yeddyurappa says he will defnetly prove majority

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗೂಂಡಾ ರಾಜಕೀಯ ನಡೆಸುತ್ತಿದೆ, ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ, ನಾನೂ ಗಮನಿಸುತ್ತಿದ್ದೇನೆ ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಬಿಎಸ್‌ವೈ ಮಾರ್ಮಿಕವಾಗಿ ನುಡಿದರು.

ಬಿಜೆಪಿಯನ್ನು ಗೆಲ್ಲಿಸಿದಕ್ಕೆ ರಾಜ್ಯದ ಜನರಿಗೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ ಅವರು, ಮೋದಿ, ಅಮಿತ್ ಶಾ ಸೇರಿದಂತೆ ರಾಜ್ಯದ ಬಿಜೆಪಿ ಪ್ರಮುಖ ನಾಯಕರು ಮತ್ತು ಉಸ್ತುವಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ ಈ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳಿಗೆ ಧೈರ್ಯದಿಂದಿರುವಂತೆ ಸೂಚಿಸಿದರು.

ರೈತರ ಸಾಲ ಮನ್ನಾದ ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, ಅಂಕಿ ಅಂಶಗಳನ್ನು ಕ್ರೂಡೀಕರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಅವೆಲ್ಲಾ ಅಂತಿಮವಾದ ಕೂಡಲೇ ಇನ್ನೆರಡು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದರು.

ಬಿಜೆಪಿ ಶಾಸಕರಿಗೆ ತಮ್ಮ ಕ್ಷೇತ್ರಗಳಿಗೆ ವಾಪಾಸ್ಸು ತೆರಳಲು ಹೇಳಿದ ಯಡಿಯೂರಪ್ಪ ಅವರು 'ಎಲ್ಲ ಶಾಸಕರು ಪಕ್ಷದ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ ತುರ್ತು ಅಧಿವೇಶನ ಕರೆಯಬಹುದು, ಹಾಗೆ ಕರೆದ ಕೂಡಲೆ ತಡ ಮಾಡದೆ ಹೊರಟು ಬನ್ನಿ' ಎಂದು ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+