• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯೋಧ್ಯೆ ಭೂಮಿಪೂಜೆ ಮಹೂರ್ತ ಸರಿಯಿರಲಿಲ್ಲವೇ: ಖ್ಯಾತ ಜ್ಯೋತಿಷಿ ಕಬ್ಯಾಡಿ ಆಚಾರ್ಯ ಹೇಳಿದ್ದೇನು?

|
Google Oneindia Kannada News

ಶತಮಾನಗಳ ವ್ಯಾಜ್ಯಕ್ಕೆ ಕಾನೂನಿನಿಂದ ಪರಿಹಾರ ದೊರೆತು, ಇಡೀ ದೇಶವೇ ಎದುರು ನೋಡುತ್ತಿದ್ದ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರಕ್ಕೆ ಭೂಮಿಪೂಜೆ ಆಗಸ್ಟ್ ಐದರಂದು, ಪ್ರಧಾನಿ ಮೋದಿಯವರಿಂದ ನೆರವೇರಿದೆ.

   ಅಯೋಧ್ಯಾ ರಾಮಮಂದಿರ ಶಿಲಾನ್ಯಾಸ ಮುಹೂರ್ತ ಅಶುಭವೆ? | Oneindia Kannada

   ಅಭಿಜಿನ್ ಮಹೂರ್ತದಲ್ಲಿ ಈ ಭೂಮಿಪೂಜೆ ನಡೆದಿತ್ತು. ಬೆಳಗಾವಿ ಮೂಲದ ಖ್ಯಾತ ಜ್ಯೋತಿಷಿ/ವಿದ್ವಾಂಸ ವಿಜಯೇಂದ್ರ ಶರ್ಮಾ ಮಹೂರ್ತ ನೀಡಿದ್ದರು. ಈಗ, ಮಹೂರ್ತ ಸರಿಯಿರಲಿಲ್ಲ ಎನ್ನುವ ತಕರಾರನ್ನು ಕೆಲವು ಜ್ಯೋತಿಷಿಗಳು ಎತ್ತಿದ್ದಾರೆ.

   ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದ ಉಡುಪಿ, ಪೇಜಾವರ ಶ್ರೀಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದ ಉಡುಪಿ, ಪೇಜಾವರ ಶ್ರೀ

   ಈ ಬಗ್ಗೆ, ವಿಡಿಯೋ ಮಾಡಿ ಹೇಳಿಕೆ ನೀಡಿರುವ ಖ್ಯಾತ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ, "ಭೂಮಿಪೂಜೆಗೆ ಇಟ್ಟ ಮಹೂರ್ತದಲ್ಲಿ ಯಾವುದೇ ಸಮಸ್ಯೆಯಿಲ್ಲ, ಅದು ಅತ್ಯಂತ ಪ್ರಶಸ್ತವಾದ ಮಹೂರ್ತವಾಗಿತ್ತು" ಎಂದು ಹೇಳಿದ್ದಾರೆ.

   "ಕೆಲವು ಅರ್ಧಬಂರ್ಧ ಜ್ಯೋತಿಷ್ಯ ಕಲಿತವರು ವಿನಾಕಾರಣ ತಕರಾರು ಎತ್ತುತ್ತಿದ್ದಾರೆ. ಯಾವುದೇ ದೋಷವಿಲ್ಲದ, ಯುಗದಲ್ಲೇ ಅತ್ಯಂತ ಅಪರೂಪವಾಗಿ ಸಿಗುವಂತಹ ಮಹೂರ್ತ ಇದಾಗಿತ್ತು"ಎಂದು ಕಬ್ಯಾಡಿ ಆಚಾರ್ಯರು ಹೇಳಿದ್ದಾರೆ.

   ಪ್ರಶಸ್ತ ಮಹೂರ್ತ ಇದಾಗಿತ್ತು

   ಪ್ರಶಸ್ತ ಮಹೂರ್ತ ಇದಾಗಿತ್ತು

   ದಕ್ಷಿಣಾಯಣದಲ್ಲಿ ಮಹೂರ್ತ ಇಡಬಾರದಾಗಿತ್ತು ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಹೊಸದಾಗಿ ದೇವರ ಪ್ರತಿಷ್ಠಾಪನೆ ಈ ವೇಳೆ ಮಾಡಬಾರದು ಎನ್ನುವುದು ಸರಿಯಾದ ಮಾತು. ಭೂಮಿಪೂಜೆ, ಅಷ್ಟಬಂಧವನ್ನು ದಕ್ಷಿಣಾಯಣದಲ್ಲಿ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಕಬ್ಯಾಡಿ ಆಚಾರ್ಯರು ಹೇಳಿದ್ದಾರೆ.

   ಅಭಿಜಿನ್ ಮಹೂರ್ತದಲ್ಲಿ ಭೂಮಿಪೂಜೆ ಮಾಡಲಾಗಿತ್ತು

   ಅಭಿಜಿನ್ ಮಹೂರ್ತದಲ್ಲಿ ಭೂಮಿಪೂಜೆ ಮಾಡಲಾಗಿತ್ತು

   ಶ್ರಾವಣ ಮಾಸದ ಕೃಷ್ಣಪಕ್ಷದ ದ್ವಿತೀಯ, ಮಧ್ಯಾಹ್ನ ಅಭಿಜಿನ್ ಮಹೂರ್ತದಲ್ಲಿ ಭೂಮಿಪೂಜೆ ಮಾಡಲಾಗಿತ್ತು. ಬುಧವಾರ ವಿಷ್ಣು, ಕೃಷ್ಣದೇವರ ಯೋಗ ಇರುವಂತಹ ದಿನ ಮತ್ತು ಆ ದಿನಕ್ಕೆ ಅಧಿದೇವತೆಯೂ ವಿಷ್ಣುವೇ. ರಾಮ ವಿಷ್ಣುವಿನ ಅವತಾರ. ಹಾಗಾಗಿ, ಧಾರ್ಮಿಕ ಪ್ರಕ್ರಿಯೆಗೆ ಇದು ಒಳ್ಲೆಯ ದಿನ - ಕಬ್ಯಾಡಿ ಜಯರಾಮ ಆಚಾರ್ಯ.

   ಅಯೋಧ್ಯೆ ಭೂಮಿಪೂಜೆ: ಅನಾಶ್ಯಕವಾಗಿ ವಿವಾದ ಮೈಗೆಳೆದುಕೊಂಡ ಶೋಭಾ ಕರಂದ್ಲಾಜೆಅಯೋಧ್ಯೆ ಭೂಮಿಪೂಜೆ: ಅನಾಶ್ಯಕವಾಗಿ ವಿವಾದ ಮೈಗೆಳೆದುಕೊಂಡ ಶೋಭಾ ಕರಂದ್ಲಾಜೆ

   ಕಬ್ಯಾಡಿ ಜಯರಾಮ ಆಚಾರ್ಯ

   ಕಬ್ಯಾಡಿ ಜಯರಾಮ ಆಚಾರ್ಯ

   ಮಹೂರ್ತದ ದಿನ ಶತಭಿಷಾ ನಕ್ಷತ್ರವಿತ್ತು. ಈ ನಕ್ಷತ್ರದಲ್ಲಿ ವಿಷ್ಣುವಿಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹರಿತ್ರಯ ನಕ್ಷತ್ರಗಳಲ್ಲಿ ಯಾವುದೇ ದೇವತಾ ಕೆಲಸವನ್ನು ಮಾಡಬಹುದು. ಮಹೂರ್ತದ ದಿನವಿದ್ದದ್ದು ಶೋಭನಾ ಯೋಗ. ಶುಭ ಕಾರ್ಯಕ್ಕೆ ಇದು ಉತ್ತಮ ಎಂದು ಕಬ್ಯಾಡಿ ಜಯರಾಮ ಆಚಾರ್ಯ ಹೇಳಿದ್ದಾರೆ.

   ಯೋಗಿ ಆದಿತ್ಯನಾಥ್ ಅವರದ್ದು ಪೂರ್ವಾಭಾದ್ರ ನಕ್ಷತ್ರ

   ಯೋಗಿ ಆದಿತ್ಯನಾಥ್ ಅವರದ್ದು ಪೂರ್ವಾಭಾದ್ರ ನಕ್ಷತ್ರ

   ಎಂಟನೇ ಮಹೂರ್ತವಾದ ಅಭಿಜಿನ್ ನಲ್ಲಿ ಭೂಮಿಪೂಜೆ ನಡೆದಿದೆ. ಸೂರ್ಯ ನಡುಮಧ್ಯ ಬಂದಾಗ ಅದಕ್ಕೆ ಅಭಿಜಿನ್ ಮಹೂರ್ತ ಎಂದು ಕರೆಯಲಾಗುತ್ತದೆ. ಯಜಮಾನರಿಗೆ ತಾರಾಬಲ ಇರಬೇಕು ಎನ್ನುವ ಮಾತು ಬಂದಿದೆ. ಮೋದಿಯವರ ನಕ್ಷತ್ರ ಅನುರಾಧಾ, ಮೈತ್ರಿ ತಾರೆಯಿತ್ತು. ಇನ್ನು ಯೋಗಿ ಆದಿತ್ಯನಾಥ್ ಅವರದ್ದು ಪೂರ್ವಾಭಾದ್ರ ನಕ್ಷತ್ರ ಅವರಿಗೆ ಪರಮ ಮೈತ್ರ ತಾರಾಯೋಗವಿದ್ದ ದಿನವದು ಎಂದು ಕಬ್ಯಾಡಿ ಆಚಾರ್ಯರು ಹೇಳಿದ್ದಾರೆ.

   English summary
   Ayodhya Bhoomi Pooja Mahurtha Is Not Auspicious: Kabyadi Jayaram Acharya Clarification,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X