ಕನ್ನಡ ಕೇಂದ್ರಕ್ಕೆ ಸ್ವಾಯತ್ತತೆ: ಕೇಂದ್ರ ಸಚಿವರ ಭರವಸೆ

Written By:
Subscribe to Oneindia Kannada

ನವದೆಹಲಿ. ಏಪ್ರಿಲ್, 26: ಮೈಸೂರಿನಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಿ ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನಿವೇಶನ ನೀಡಿದ ಕೂಡಲೇ ಸ್ಥಳಾಂತರಕ್ಕೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನುಬಳಿಗಾರ, ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್, ಸದಾನಂದಗೌಡ, ಸಿದ್ದೇಶ್ವರ್ , ಸಂಸದ ಯಡಿಯೂರಪ್ಪ ನಿಯೋಗ ಸಲ್ಲಿಕೆ ಮಾಡಿದ ಮನವಿಗೆ ಇರಾನಿ ಸ್ಪಂದನೆ ನೀಡಿದ್ದಾರೆ.[ಮೇಷ್ಟ್ರೇ 60 ಅಂಕ ಕೊಡಿ, ನಿಮಗೆ ಪುಣ್ಯ ಗ್ಯಾರಂಟಿ!]

kannada

ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿವೇಶನವನ್ನು ನೀಡಿದ್ದರೂ ಕಟ್ಟಡಗಳನ್ನೊ ಮತ್ತು ಇತರ ಮೂಲಭೂತ ಸೌಕರ್ಯಗಳಿಲ್ಲದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಟ್ಟಡ ನೀಡಿದರೆ 15 ದಿನಗಳೊಳಗೆ ಸ್ಥಳಾಂತರಿಸಲಾಗುವುದು. ಕನ್ನಡ ಭಾಷೆಗೆ ರಾಷ್ಟ್ರ ಮಟ್ಟದ ಭಾಷಾ ಪುರಸ್ಕಾರ ನೀಡಲು ಅಂಗೀಕರಿಸುವಂತೆ ರಾಷ್ಟ್ರಪತಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಶಿಫಾರಸು ಮಾಡಿದೆ ಎಂದು ಅವರು ಇರಾನಿ ತಿಳಿಸಿದರು.

ಕೇಂದ್ರ ಸಚಿವ ಅನಂತ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು 3.5 ಎಕರೆ ನಿವೇಶವನ್ನು ನೀಡಿದೆಯಾದರೂ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಸ್ಥಳಾಂತರ ಪ್ರಕ್ರಿಯೆಗೆ ವಿಳಂಭವಾಗಬಾರದು. ರಾಜ್ಯ ಸರ್ಕಾರವು ಕೂಡಲೇ ತಾತ್ಕಾಲಿಕ ಕಟ್ಟಡವನ್ನು ಒದಗಿಸಬೇಕು. ಈ ಕುರಿತು ಮುಖ್ಯಮಂತ್ರಿಗಳು ಹಾಗು ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.[ನಮ್ಮ ವೆಬ್ ಸೈಟಿಗೆ 16 ಬೇವು, 16 ಬೆಲ್ಲ]

ನಹದೆಹಲಿಯ ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಪುರುಷೋತ್ತಮ ಬಿಳಿಮಲೆ, ಚಿಂತಕ ರಾ ನಂ ಚಂದ್ರಶೇಖರ್, ಕನ್ನಡ ಭಾಷಾ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರ ಪ್ರೊ. ಪಿ. ಕೆ. ಖಂಡೋಬಾ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳಿಧರ, ಸಂಸದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ಪ್ರತಾಪ್ ಸಿಂಹ, ಸುರೇಶ್ ಅಂಗಡಿ, ಭಗಂತ ಖೂಬಾ, ರಮೇಶ್ ಜಿಗಜಿಣಗಿ, ಪಿ.ಸಿ. ಮೋಹನ್ ಇದ್ದರು.

-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi: Union Minister for Human Resource Development Smriti Irani said the Centre will take all steps to grant autonomous status to Centre of Excellence for Studies in Classical Kannada (CESCK) at the earliest. After meeting a delegation comprising Union ministers and Members of Parliament from Karnataka, Kannada writers and activists, the minister told reporters that as the ministry had to follow certain norms before granting autonomous status to the CESCK.
Please Wait while comments are loading...