Siddeshwara Swamiji: ಗುರುಗಳ ಹೆಸರಲ್ಲಿ ಮೊದಲ 'ಸಿದ್ಧಾಂತ ಶಿಖಾಮಣಿ' ಪುಸ್ತಕ ಪ್ರಕಟಿಸಿದ್ದ ಸಿದ್ದೇಶ್ವರ ಶ್ರೀಗಳು

ವಿಜಯಪುರ, ಜನವರಿ 03: ಪ್ರವಚನಕಾರರು, ಲಕ್ಷಾಂತರ ಭಕ್ತ ಸಮೂಹ ಈ ಯುಗದ ದೇವರೆಂದೆ ಕರೆಯುತ್ತಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಅಸ್ತಂಗತರಾಗಿದ್ದಾರೆ. ಸಿದ್ದೇಶ್ವರ ಶ್ರೀಗಳು ತಮ್ಮ 19ನೇ ವಯಸ್ಸಿನಲ್ಲೇ ತಮ್ಮ ಗುರುಗಳ ಹೆಸರಿನಲ್ಲಿ ಪುಸ್ತಕ ಬರೆದವರು.

ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹೆಸರಿನಲ್ಲಿ ಸಿದ್ದೇಶ್ವರ ಶ್ರೀಗಳು ಮೊದಲ ಪುಸ್ತಕ ಪ್ರಕಟಿಸಿದ್ದರು. ಬೇರೆಯವರಿಂದ ಪುಸ್ತಕ ಬರೆಯಿಸಿ ಹೆಸರು ಹಾಕಿಸಿಕೊಳ್ಳುತ್ತಿರುವ ಕಾಲದಲ್ಲಿ ತಾವು ಬರೆದ ಪುಸ್ತಕವನ್ನು ತಮ್ಮ ಗುರುಗಳ ಹೆಸರಿನಲ್ಲಿ ಪ್ರಕಟಿಸಿದ್ದರು. ಇಂತಹ ಗುಣ, ಸರಳ ಬದುಕಿನ ಶೈಲಿ, ಪ್ರವಚನ, ಜ್ಞಾನದ ಮೂಲಕವೇ ಸಿದ್ದೇಶ್ವರ ಶ್ರೀಗಳು ಅಪಾರ ಪ್ರಮಾಣದ ಭಕ್ತಗಣ ಹೊಂದಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳು ಸೋಮವಾರ ವೈಕುಂಠ ಏಕಾದಶಿ ದಿನದಂದೇ (ಜ.02) ಅಸ್ತಂಗತರಾಗಿದ್ದಾರೆ. ಅವರು ಬರೆದ ಮೊದಲ ಪುಸ್ತಕದ ವಿಶೇಷದ ಬಗ್ಗೆ ಇಲ್ಲಿ ತಿಳಿಯಬಹುದು.

At the age 19 Siddheshwar Shri published his 1st book under name of Guru Mallikarjun

ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಕೊಲ್ಹಾಪುರ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ ವಿಷಯದಲ್ಲಿ ಸ್ನಾತಕೋತ್ತರ (ಎಂ.ಎ) ಪದವಿ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಎಂ.ಎ. ವಿದ್ಯಾಭ್ಯಾಸದಲ್ಲಿ ವೇಳೆ ಸಿದ್ದೇಶ್ವರ ಕೊಲ್ಹಾಪುರದಲ್ಲಿ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು.

ಇದೇ ಅವಧಿಯಲ್ಲಿ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಪ್ರವಚನಗಳನ್ನು ಒಟ್ಟುಗೂಡಿಸಿ 'ಸಿದ್ಧಾಂತ ಶಿಖಾಮಣಿ' ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು. ಆಗ ಸಿದ್ದೇಶ್ವರರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು.

ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಶಿಷ್ಯ ಸಿದ್ದೇಶ್ವರ ಮಾತುಗಳು ಹೆಚ್ಚು ಇಷ್ಟುವಾಗುತ್ತಿದ್ದವು. ಸಿದ್ದೇಶ್ವರರ ಬುದ್ಧಿವಂತ, ಆಧ್ಯಾತ್ಮ ಜೊತೆಗೆ ಲೌಕಿಕ ವಿಷಯಗಳಲ್ಲೂ ಪರಿಜ್ಞಾನವಿದೆ. ಭವಿಷ್ಯದಲ್ಲಿ ವಿಶ್ವಕ್ಕೆ ದೊಡ್ಡವನಾಗುತ್ತಾನೆ ಎಂದಿದ್ದರು.

At the age 19 Siddheshwar Shri published his 1st book under name of Guru Mallikarjun

ಗುರುಗಳಿಂದ ಸಿದ್ದೇಶ್ವರರ ಜ್ಞಾನ ವಿಸ್ತೃತ

ಸ್ನಾತಕೋತ್ತರ ಪದವಿ ಪಡೆದು ವಿಜಯಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಗುರುಗಳು ಭಗವದ್ಗೀತೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನ ನೀಡಿ ಅವರ ಜ್ಙಾನ ವಿಸ್ತೃತಗೊಳಿಸಿದರು. ಹೀಗೆ ಗುರುಗಳ ಮುಖೇನ ಕಲಿತ ಜ್ಞಾನದಿಂದಲೇ ವಿವಿಧ ಭಾಷೆಗಳಲ್ಲಿ ಪ್ರವಚನಗಳನ್ನು ಬುದುಕಿನುದ್ದಕ್ಕೂ ನೀಡಿದವರು.

ವಿಜಯಪುರ ಜಿಲ್ಲೆಯಲ್ಲಿ ನಾಲ್ಕನೇ ತರಗತಿ ಓದಿದ ಬಳಿಕ ಸಿದ್ದೇಶ್ವರ ಶ್ರೀಗಳು ಗುರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಆಗಮಿಸಿದ್ದರು. ಸಿದ್ದೇಶ್ವರರ ಚುರುಕುತನ ಕಂಡು ಗುರುಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರನ್ನು ಕರೆದೊಯ್ಯತ್ತಿದ್ದರು. ಈ ವೇಳೆ ಸಿದ್ದೇಶ್ವರರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡರು. ಹೀಗೆ ಗುರು ಶಿಷ್ಯರ ಸಂಬಂಧ ಸಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+