• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದನದಲ್ಲಿ ಮಾಧ್ಯಮ ನಿರ್ಬಂಧ: ಕರಗದ ಕಾಗೇರಿ ಮನ, ನಾಡಿನ ನಾಡಿ ಚಂದನ!

|

ಕರ್ನಾಟಕ, ಮಾರ್ಚ್ 03: ಕರ್ನಾಟಕ ವಿಧಾನ ಮಂಡಲ ಅಧಿವೇಶನದಲ್ಲಿ ಖಾಸಗಿ ಸುದ್ದಿ ವಾಹಿನಿಗಳ ನೇರ ಪ್ರಸಾರ ಮತ್ತು ಸದನದಲ್ಲಿ ಮಾಧ್ಯಮಗಳಿಗೆ ಚಿತ್ರ ತೆಗೆಯುವುದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿಷೇಧ ಹೇರಿದ್ದಾರೆ.

   Karnataka Budget 2020 LIVE | 05-03-2020 | BS Yediyurappa

   ಸದನದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ರಾಜ್ಯ ರಾಜಕಾರಣದ ಹಲವು ಪ್ರಮುಖ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

   ಸದನದಲ್ಲಿ ಮಾಧ್ಯಮದವರಿಗೆ ವರದಿ ಮಾಡಲು ಮುಕ್ತ ಅವಕಾಶ ಕೊಡುವಂತೆ ನಿನ್ನೆಯಷ್ಟೇ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದು ಮನವಿ ಮಾಡಿದ್ದರು.

   ಸದನದಲ್ಲಿ ಮಾಧ್ಯಮಗಳಿಗೆ ಮುಕ್ತ ಅವಕಾಶ ನೀಡಿ: ಪ್ರಿಯಾಂಕ್ ಖರ್ಗೆ ಮನವಿ

   ಯಾರು ಏನೇ ಹೇಳಿದರೂ, ಎಷ್ಟೇ ಮನವಿ ಮಾಡಿದರೂ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನ ಮಾತ್ರ ಮೀಡಿಯಾ ಪರವಾಗಿ ಕರಗುತ್ತಿಲ್ಲ. ವಿಧಾನಸಭೆ ಕಲಾಪ ಪ್ರಸಾರಕ್ಕೆ ಖಾಸಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿರಾಕರಿಸಿದ್ದಾರೆ. ಮುಂದೆ ಓದಿರಿ...

   ಸಿಎಂ ಹೇಳಿದರೂ ಕೇಳುತ್ತಿಲ್ಲ!

   ಸಿಎಂ ಹೇಳಿದರೂ ಕೇಳುತ್ತಿಲ್ಲ!

   ಸದನದಲ್ಲಿ ಖಾಸಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ವರದಿ ಮಾಡಲು ಮುಕ್ತ ಅವಕಾಶ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರವರಿಗೆ ಸಂದೇಶ ರವಾನಿಸಿದ್ದರು. ಸಿಎಂ ಪರವಾಗಿ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರನ್ನು ಸ್ಪೀಕರ್ ಬಳಿ ಕಳುಹಿಸಲಾಗಿತ್ತು.

   ಕರಗದ ಕಾಗೇರಿ ಮನ!

   ಕರಗದ ಕಾಗೇರಿ ಮನ!

   ''ಬೇರೆ ಯಾವುದೇ ರಾಜ್ಯದಲ್ಲೂ ಖಾಸಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅವಕಾಶ ನೀಡಿಲ್ಲ. ಹಾಗಾಗಿ ಈ ರಾಜ್ಯದಲ್ಲೂ ಸಾಧ್ಯವಿಲ್ಲ'' ಎಂದು ಎಸ್.ಆರ್.ವಿಶ್ವನಾಥ್ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟವಾಗಿ ಹೇಳಿ ಕಳುಹಿಸಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್ ಅಧಿವೇಶನದಲ್ಲೂ ಮಾಧ್ಯಮಗಳಿಗೆ ಹೇರಿದ್ದ ನಿರ್ಬಂಧ ಮುಂದುವರೆದಿದೆ.

   ಖಾಸಗಿ ಚಾನಲ್‌ಗಳ ಕ್ಯಾಮರಾ ನಿರ್ಬಂಧ ಯಾಕೇ? ಇಲ್ಲಿದೆ ಮಾಹಿತಿ!

   ಪ್ರಚಾರ ಸಿಗುತ್ತಿಲ್ಲ!

   ಪ್ರಚಾರ ಸಿಗುತ್ತಿಲ್ಲ!

   ''ಖಾಸಗಿ ಎಲೆಕ್ಟ್ರಾನಿಕ್ ಮೀಡಿಯಾಗಳನ್ನು ನಿರ್ಬಂಧಿಸಿದ ನಂತರ ತಮಗೆ ಪ್ರಚಾರ ಸಿಗುತ್ತಿಲ್ಲ. ತಾವು ವಿಧಾನಸಭೆಯಲ್ಲಿ ಮಾತನಾಡಿದ್ದು ಕ್ಷೇತ್ರದ ಜನರಿಗೂ ಗೊತ್ತಾಗುತ್ತಿಲ್ಲ'' ಎಂದು ಆಡಳಿತ ಪಕ್ಷದ ಶಾಸಕರೇ ಸಿ.ಎಂ ಬಳಿ ಅಲವತ್ತುಕೊಂಡಿದ್ದರು.

   ನಾಡಿನ ನಾಡಿ ಚಂದನ!

   ನಾಡಿನ ನಾಡಿ ಚಂದನ!

   ವಿಧಾನ ಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಖಾಸಗಿ ವಾಹಿನಿ ಮತ್ತು ಪತ್ರಿಕಾ ವರದಿಗಾರರ ಕ್ಯಾಮರಾಗಳಿಗೆ ಅವಕಾಶವಿಲ್ಲ. ಕಲಾಪದ ನೇರ ಪ್ರಸಾರವನ್ನು ಚಿತ್ರೀಕರಣ ಮಾಡಲು ಡಿಡಿ ಚಂದನ ವಾಹಿನಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

   English summary
   Karnataka Budget Session: Speaker Vishweshwar Hegde Kageri refuses to lif ban on media.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X