ಮಾ. 1ರಂದು ಕರ್ನಾಟಕದ 4 ಕಡೆ ಬಿಜೆಪಿಯ ಬೃಹತ್ 'ವಿಜಯ ಸಂಕಲ್ಪ ಯಾತ್ರೆ'ಗೆ ಚಾಲನೆ, ಪಕ್ಷದ ವರಿಷ್ಠರು ಭಾಗಿ
ಕರ್ನಾಟಕ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವು ವಾರಾಂತ್ಯಕ್ಕೆ ಕೊನೆಗೊಂಡಿತು. ಅದರ ಬೆನ್ನಲ್ಲೆ ಆಡಳಿತಾರೂಢ ಬಿಜೆಪಿಯು ರಾಜ್ಯದ ನಾಲ್ಕು ಮೂಲೆಗಳಿಂದ ಚುನಾವಣೆಗಾಗಿ ಭರ್ಜರಿ ಪ್ರಚಾರ ಆರಂಭಿಸಲು ಸಿದ್ಧತೆ ನಡೆಸಿದೆ.
ಬೆಂಗಳೂರು, ಫೆಬ್ರವರಿ 26: ಕರ್ನಾಟಕ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವು ವಾರಾಂತ್ಯಕ್ಕೆ ಕೊನೆಗೊಂಡಿತು. ಅದರ ಬೆನ್ನಲ್ಲೆ ಆಡಳಿತಾರೂಢ ಬಿಜೆಪಿಯು ರಾಜ್ಯದ ನಾಲ್ಕು ಮೂಲೆಗಳಿಂದ ಚುನಾವಣೆಗಾಗಿ ಭರ್ಜರಿ ಪ್ರಚಾರ ಆರಂಭಿಸಲು ಸಿದ್ಧತೆ ನಡೆಸಿದೆ.
ಬಿಜೆಪಿಯಿಂದ ಮುಂದಿನ ಮಾರ್ಚ್ 01 ರಿಂದ ಎಲ್ಲ ಸಮುದಾಯ ಮತಗಳನ್ನು ಹಿಡಿದಿಟ್ಟುಕೊಳ್ಳಲು ಅನುಕೂಲವಾಗುವಂತೆ ರಾಜ್ಯ ನಾಲ್ಕು ಮೂಲೆಗಳಿಂದ 'ವಿಜಯ ಸಂಕಲ್ಪ ಯಾತ್ರೆ'ಗಳನ್ನು ಆರಂಭಿಸಲಿದೆ. ಕೇಂದ್ರದ ಬಿಜೆಪಿ ವರಿಷ್ಠರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 1 ಮತ್ತು 3 ರ ನಡುವೆ ಪಕ್ಷದ ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಅವರು ಕರ್ನಾಟಕದ ನಾಲ್ಕು ಮೂಲೆಗಳಿಂದ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಮುಖ್ಯವಾಗಿ 'ಚಾಮರಾಜನಗರ, ಬೀದರ್ ಬೆಳಗಾವಿ ಮತ್ತು ಬೆಂಗಳೂರು' ಈ ನಾಲ್ಕು ಕಡೆಗಳಲ್ಲಿ ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ'ಗೆ ಚಾಲನೆ ನೀಡಲಿದ್ದಾರೆ.
ಈ ಯಾತ್ರೆಗಳು ಮಾರ್ಚ್ ಅಂತ್ಯಕ್ಕೆ (ಮಾ.25) ರಂದು ದಾವಣಗೆರೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ರ್‍ಯಾಲಿಯೊಂದಿಗೆ ಮುಕ್ತಾಯವಾಗಲಿವೆ ಎಂದು ಕರ್ನಾಟಕದ ಬಿಜೆಪಿ ಮೂಲಗಳು ತಿಳಿಸಿವೆ.
ಜೆ.ಪಿ.ನಡ್ಡಾ ಅವರು ಮಾರ್ಚ್ 1 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಚಾರದ ಯಾತ್ರೆಗೆ ಚಾಲನೆ ನೀಡಡಲಿದ್ದಾರೆ. ರಾಜನಾಥ್ ಸಿಂಗ್ ಅವರು ಮಾರ್ಚ್ 2 ರಂದು ಬೆಳಗಾವಿ ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರು ನಂದಗಡದಲ್ಲಿ ಮತ್ತೊಂದು ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ.

ಮೂರು ಮತ್ತು ನಾಲ್ಕನೇ ಯಾತ್ರೆಗಳು ಮಾರ್ಚ್ 3 ರಂದು ಕಲ್ಯಾಣ ಕರ್ನಾಟಕ ಭಾಗದ ಬೀದರ್‌ನ ಬಸವಕಲ್ಯಾಣ ಮತ್ತು ಕೆಂಪೇಗೌಡರ ಜನ್ಮಸ್ಥಳ ದೇವನಹಳ್ಳಿಯ ಆವತಿಯಿಂದ ಪ್ರಾರಂಭವಾಗಲಿವೆ. ಇವುಗಳಿಗೆ ಕ್ರಮವಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನ ದಂದು ಅಮಿತ್ ಶಾ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬಿಜೆಪಿ ಸರ್ಕಾರವು ಹೀಗೆ ನಾಲ್ಕು ಕಡೆಗಳಲ್ಲಿ ಯಾತ್ರೆ ನಡೆಸುವ ಮೂಲಕ ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಐತಿಹಾಸಿಕ ಮತ್ತು ಜಾತಿ ಪ್ರಾಮುಖ್ಯತೆಯನ್ನು ಆಧರಿಸಿ ಮತ ಬ್ಯಾಂಕ್ ಸೆಳೆಯಲು ಮುಂದಾಗಿದೆ.
80ಮೆರವಣಿಗೆ, 75 ಬಹಿರಂಗ ಸಭೆ, 150 ರೋಡ್ ಶೋ
ಕಲ್ಯಾಣ ಕರ್ನಾಟಕದ ಭಾಗವಾದ ಬಸವಕಲ್ಯಾಣ ಲಿಂಗಾಯತ ಸಮುದಾಯಕ್ಕೆ ಪವಿತ್ರ ಸ್ಥಳ ಎಂದಾದರೆ, ನಂದಗಡ ಮತ್ತು ಅವತಿಯಲ್ಲಿ ಬಿಜೆಪಿ ಯಾತ್ರೆ ಪ್ರಾರಂಭಿಸುವುದರಿಂದ ಕುರುಬ ಸಮುದಾಯ ಹಾಗೂ ಒಕ್ಕಲಿಗರನ್ನು ಆಕರ್ಷಿಸಲು ಸಹಾಯವಾಗುತ್ತದೆ. ಚಾಮರಾಜನಗರದಲ್ಲಿರುವ ಎಂಎಂ ಹಿಲ್ಸ್ ದೇವಾಲಯವು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮಹತ್ವದ್ದಾಗಿದೆ.
ಈ 04 ಯಾತ್ರೆಗಳಿಂದ 224 ವಿಧಾನಸಭಾ ಕ್ಷೇತ್ರಗಳ ಮೂಲಕ ಸುಮಾರು 8,000 ಕಿ.ಮೀ. ಈ ಸಂದರ್ಭದಲ್ಲಿ ಪಕ್ಷವು 80 ಯಾತ್ರೆ ಮೆರವಣಿಗೆಗಳು, 75 ಸಾರ್ವಜನಿಕ ಸಭೆಗಳು ಮತ್ತು 150 ರೋಡ್ ಶೋಗಳನ್ನು ಯೋಜಿಸಿದ್ದು, ಇದರಿಂದ ರಾಜ್ಯದ ನಾಲ್ಕು ಕೋಟಿ ಜನರನ್ನು ತಲುಪುವುದು ಬಿಜೆಪಿ ಪ್ಲಾನ್ ಆಗಿದೆ. ಈ ಮೂಲಕ ಬಿಜೆಪಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಮಾಹಿತಿ ನೀಡಿದರು.
ಮಲೆ ಮಹದೇಶ್ವರ ಬೆಟ್ಟದಿಂದ ಆರಂಭವಾಗಲಿರುವ ಯಾತ್ರೆಗೆ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹಾಗೂ ನಂದಗಡದಿಂದ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಚಾಲನೆ ನೀಡಲಿದ್ದಾರೆ. ಕಲ್ಯಾಣ-ಕರ್ನಾಟಕ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಹಳೇ ಮೈಸೂರು ಭಾಗದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಯಾತ್ರೆಗಳನ್ನು ಉದ್ಘಾಟಿಸಲಿದ್ದಾರೆ.












Click it and Unblock the Notifications