ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರವಣಗೆ ಸಚಿವ ಸ್ಥಾನಕ್ಕಾಗಿ ಆರ್ಯ ವೈಶ್ಯ ಸಮುದಾಯದ ಆಗ್ರಹ

By Mahesh
|
Google Oneindia Kannada News

ಬೆಂಗಳೂರು, ಮೇ 22 : ಕರ್ನಾಟಕದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನವೇ ಸಂಪುಟ ಸೇರುವ ಉತ್ಸಾಹ ಹಲವು ಜೆಡಿಎಸ್ ಶಾಸಕರಲ್ಲೂ ಮೂಡಿದೆ.

ಕಾಂಗ್ರೆಸ್ಸಿನಲ್ಲಿದ್ದಂತೆ ತೀವ್ರ ಪೈಪೋಟಿ ಇಲ್ಲದಿದ್ದರೂ, ಜೆಡಿಎಸ್ ನ ಶಾಸಕರು, ತಾವೂ ಕೂಡಾ ಮಂತ್ರಿ ಸ್ಥಾನ ನಿಭಾಯಿಸಲು ರೆಡಿ ಎಂದು ಹೇಳಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಂಥ ಸ್ಥಿತಿಯಲ್ಲೇ ದೇವೇಗೌಡರ ಮನೆ ಮಗನಂತಿರುವ ಉದ್ಯಮಿ, ಎಂಎಲ್ಸಿ ಟಿಎ ಶರವಣ ಅವರು ತಾವೂ ಕೂಡಾ ಸಚಿವರಾಗಲು ಸಿದ್ಧ ಎಂದು ಘೋಷಿಸಿದ್ದಾರೆ.

'ನನಗೂ ಕೂಡಾ ಆಸೆಯಿದೆ, ಅವರು ಏನೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವೆ' ಎಂದು ಶರವಣ ಹೇಳಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ, ಆರ್ಯ ವೈಶ್ಯ ಸಮುದಾಯ ಕೂಡಾ ಶರವಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಪ್ರೀತಿ ಪೂರ್ವಕ ಆಗ್ರಹವನ್ನು ನಿಯೋಜಿತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮುಂದಿಟ್ಟಿದೆ.

ದೇವೇಗೌಡರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ 'ಅಪ್ಪಾಜಿ ಕ್ಯಾಂಟೀನ್' ಯಶಸ್ಸಿನ ಬಳಿಕ ಶರವಣ ಅವರತ್ತ ಎಲ್ಲರೂ ತಿರುಗಿ ನೋಡುವಂತಾಗಿದೆ. ಈ ಕ್ಯಾಂಟೀನ್ ಏನಿದ್ದರೂ ಚುನಾವಣೆ ತನಕ ನಂತರ ಬಂದ್ ಆಗಲಿದೆ ಎಂದು ಆಡಿಕೊಂಡು ನಕ್ಕವರು ಮೂಗಿನ ಮೇಲೆ ಬೆರಳಿಡುವಂತೆ ಶರವಣ ಅವರು ತಮ್ಮ ಜನಸೇವೆ ಮುಂದುವರೆಸಿದ್ದಾರೆ.

ಕರ್ನಾಟಕ ಆರ್ಯವೈಶ್ಯ ಮಂಡಳಿಯ ಆಗ್ರಹ

ಕರ್ನಾಟಕ ಆರ್ಯವೈಶ್ಯ ಮಂಡಳಿಯ ಆಗ್ರಹ

ಕರ್ನಾಟಕ ಆರ್ಯವೈಶ್ಯ ಮಂಡಳಿಯ ರಾಜ್ಯ ಉಪಾಧ್ಯಕ್ಷ ರಾಜಾ ಶಶಿಧರ ಅವರು ಒನ್ಇಂಡಿಯಾ ಕನ್ನಡ ಜೊತೆ ಮಾತನಾಡಿ, ಅನಾದಿ ಕಾಲದಿಂದಲೂ ಕಾಂಗ್ರೆಸ್ ನಂತರ ಬಿಜೆಪಿ ಎನ್ನುತ್ತಿದ್ದ ನಮ್ಮ ಸಮುದಾಯ (ವೈಶ್ಯರು, ಶೆಟ್ಟರು) ಈ ಬಾರಿ ಜೆಡಿಎಸ್ ನತ್ತ ಮುಖ ಮಾಡಲು ಶರವಣ ಅವರೇ ಕಾರಣ ಎಂದರೆ ತಪ್ಪಾಗಲಾರದು. ಶರವಣ ಅವರು ದೇವೇಗೌಡರ ಕುಟುಂಬ, ಪಕ್ಷದ ಬಗ್ಗೆ ಇಟ್ಟುಕೊಂಡಿರುವ ನಿಷ್ಠೆ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ಅವರಿಗೆ ಸೂಕ್ತವಾದ ಖಾತೆಯನ್ನು, ಸಾಧ್ಯವಾದರೆ ಮುಜರಾಯಿ ಖಾತೆಯನ್ನು ನೀಡಿದರೆ ಉತ್ತಮ' ಎಂದರು.

ಮುಜರಾಯಿ ಖಾತೆ ಎಂದರೆ ಶಾಸಪಗ್ರಸ್ತ ಖಾತೆ?

ಮುಜರಾಯಿ ಖಾತೆ ಎಂದರೆ ಶಾಸಪಗ್ರಸ್ತ ಖಾತೆ?

ಮುಜರಾಯಿ ಖಾತೆ ಎಂದರೆ ಶಾಸಪಗ್ರಸ್ತ ಖಾತೆ ಎಂಬ ಮಾತಿದೆ. ಹೀಗಿದ್ದೂ ಈ ಖಾತೆ ಬಯಸುತ್ತಾರಾ?
-ಶರವಣ ಅವರಾಗಲಿ, ನಮ್ಮ ಸಮುದಾಯದವರಾಗಲಿ ಯಾವುದೇ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ. ಆದರೆ, ಶರವಣ ಅವರಿಗಿರುವ ದೈವಭಕ್ತಿ ಹಾಗೂ ದೇವೇಗೌಡರ ದೈವ ಪೂಜೆ ಕೈಂಕರ್ಯಗಳಲ್ಲಿ ಸದಾ ಭಾಗಿಯಾಗಿವುದರಿಂದ ಈ ರೀತಿ ಬೇಡಿಕೆ ಹುಟ್ಟಿಕೊಂಡಿದೆ. ಅಲ್ಲದೆ, ದೇಗುಲಗಳ ಜೀರ್ಣೋದ್ಧಾರ, ಅರ್ಚಕರ, ದೇಗುಲ ಸಿಬ್ಬಂದಿಗಳ ಅಭಿವೃದ್ಧಿಗಾಗಿ ಶರವಣ ಅವರು ತಮ್ಮದೇ ಆದ ಯೋಜನೆಗಳನ್ನು ಹೊಂದಿದ್ದಾರೆ.

ಅಪ್ಪಾಜಿ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್

ಅಪ್ಪಾಜಿ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್

ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಸ್ಥಾಪನೆಯಾಗುವುದಿಂದ ಇಂದಿರಾ ಕ್ಯಾಂಟೀನ್ ಹಾಗೂ ಅಪ್ಪಾಜಿ ಕ್ಯಾಂಟೀನ್ ನಡುವೆ ಪೈಪೋಟಿ ಬರುವುದಿಲ್ಲವೇ? ಎಂಬ ಪ್ರಶ್ನೆಗೆ, ಅಪ್ಪಾಜಿ ಕ್ಯಾಂಟೀನ್ ಉದ್ದೇಶವೇ ಬೇರೆ ರೀತಿಯದ್ದಾಗಿದೆ. ಇದು ವೈಯಕ್ತಿಕವಾಗಿ ಸೇವಾ ಮನೋಭಾವದಿಂದ ಮಾಡುತ್ತಿರುವ ಕಾರ್ಯ. ಇಂದಿರಾ ಕ್ಯಾಂಟೀನ್ ಸರ್ಕಾರದ ಯೋಜನೆ. ಎರಡರ ಉದ್ದೇಶ ಹಸಿದವರ ಹೊಟ್ಟೆಗೆ ಕಡಿಮೆ ದರದಲ್ಲಿ ಉತ್ತಮ ಆಹಾರ ಒದಗಿಸುವುದೇ ಆಗಿದೆ. ಒಳ್ಳೆ ಉದ್ದೇಶದಿಂದ ಮಾಡುವ ಕೆಲಸಕ್ಕೆ ಕರ್ನಾಟಕದ ಜನತೆಯಿಂದ ಸದಾ ಬೆಂಬಲ ಸಿಕ್ಕಿದೆ. ಹೀಗಾಗಿ, ಅಪ್ಪಾಜಿ ಕ್ಯಾಂಟೀನ್ ಮುಂದುವರೆಯಲಿದೆ.

ರಾಜ್ಯದ ಇತರೆಡೆ ಕ್ಯಾಂಟೀನ್ ವಿಸ್ತರಣೆ

ರಾಜ್ಯದ ಇತರೆಡೆ ಕ್ಯಾಂಟೀನ್ ವಿಸ್ತರಣೆ

ಪ್ರತಿ ದಿನ 4 ಸಾವಿರಕ್ಕೂ ಅಧಿಕ ಮಂದಿಗೆ ಊಟ ಸಿಗುತ್ತಿದ್ದು, ಇನ್ಮುಂದೆ ಕ್ಯಾಂಟೀನ್ ಅವಧಿಯನ್ನು ವಿಸ್ತರಿಸುವ ಯೋಚನೆಯೂ ಇದೆ. ಜಿಲ್ಲಾ ಕೇಂದ್ರಗಳಲ್ಲಿ, ಸಮಾವೇಶಗಳಲ್ಲಿ, ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ನೆರವಾಗಲು ಕ್ಯಾಂಟೀನ್ ಸಿದ್ಧವಾಗಿದೆ. ಅಪ್ಪಾಜಿ ಕ್ಯಾಂಟೀನ್ ಸುತ್ತಮುತ್ತ ಇರುವ ಹಣ್ಣಿನ ವ್ಯಾಪಾರಿಗಳಿಗೂ ಲಾಭವಾಗುತ್ತಿದೆ. ದಿನವೊಂದಕ್ಕೆ ಸಾವಿರಾರು ಬಾಳೆ ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ತಮಗೆ ಪರೋಕ್ಷವಾಗಿ ಗ್ರಾಹಕರನ್ನು ಒದಗಿಸುತ್ತಿರುವ ಅಪ್ಪಾಜಿ ಕ್ಯಾಂಟೀನ್ ಗೆ ಥ್ಯಾಂಕ್ಸ್ ಹೇಳಿದ್ದಾರೆ.

ಶರವಣಗೆ ಸಚಿವ ಸ್ಥಾನ ಏಕೆ?

ಶರವಣಗೆ ಸಚಿವ ಸ್ಥಾನ ಏಕೆ?

ಚಿಕ್ಕಂದಿನಲ್ಲಿ ಉತ್ತಮವಾಗಿ ಓದುತ್ತಿದ್ದ ಶರವಣ ಅವರಿಗೆ ನಂತರ ಕಾರಣಾಂತರದಿಂದ ಓದು ಮುಂದುವರೆಸಲಾಗಲಿಲ್ಲ. ಸೇಲ್ಸ್ ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದ ಶರವಣ, ಈಗ ಚಿನ್ನದ ವ್ಯಾಪಾರಿ, ಎಂಎಲ್ಸಿಯಾಗಿ ಬೆಳೆದಿದ್ದಾರೆ. ಆದರೆ, ಬೆಳೆದು ಬಂದ ಹಾದಿಯನ್ನು ಮರೆತ್ತಿಲ್ಲ.

'ಬಡತನನಾ ಅವಮಾನ ಮಾಡಬೇಡಿ, ಅನುಮಾನ ಪಡಬೇಡಿ. ಅಗತ್ಯವಿರುವವರಿಗೆ ಯೋಚಿಸದೆ ನೀಡಿ' ಎಂಬ ಉದ್ದೇಶದಿಂದ ಇಂದಿಗೂ ಬಡ ಮಕ್ಕಳ ಓದಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ತಮ್ಮ ಗಳಿಕೆಯ ಶೇ 20ರಷ್ಟು ಧಾನ ಧರ್ಮಕ್ಕೆ ಮೀಸಲಿಟ್ಟಿದ್ದಾರೆ.

English summary
Arya Vaishyas community demand cabinet berth to JD(S) MLC T A Sharavana who is prohimity to JDS supremo Deve Gowda family. Sharavana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X