BY Vijayendra: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬದಲಾವಣೆ ಗುಸು ಗುಸು : ಅರವಿಂದ ಬೆಲ್ಲದ್ ಏನಂದ್ರು?
ಧಾರವಾಡ, ನವೆಂಬರ್ 29: ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಈ ಸೋಲಿನಿಂದಾಗಿ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ಫುಲ್ ಆಕ್ಟಿವ್ ಆಗಿದ್ದು, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ.
ಉಪಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆದಿವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರು ನೇಮಕಗೊಂಡ ನಂತರ ಕಮಲ ಪಾಳಯದಲ್ಲಿ ವಿಜಯೇಂದ್ರ ಅವರ ವಿರೋಧಿ ಬಣ ಬಲಿಷ್ಠವಾಗಿದ್ದು, ಬಿ ವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿಬ ರಮೇಶ್ ಜಾರಕಿಹೊಳಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸುಳಿವು ನೀಡಿದ್ದಾರೆ.

ಈಗಾಗಲೇ ಹಲವು ಗೌಪ್ಯ ಸಭೆಗಳನ್ನು ಮಾಡಿ ತಮ್ಮ ಬೇಡಿಕೆಯನ್ನು ಹೈಕಮಾಂಡ್ ನಾಯಕರಿಗೆ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ರವಾನಿಸಿದೆ. ಹೀಗಾಗಿ ಡಿಸೆಂಬರ್ ಅಥವಾ ಜನವರಿಯಲ್ಲಿ ವಿಜಯೇಂದ್ರ ಬದಲಾವಣೆಯಾಗುತ್ತೆ ಎನ್ನುವ ಚರ್ಚೆಗಳು ನಡೆದಿವೆ. ಆದರೆ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು, ಸಾರ್ವಜನಿಕವಾಗಿ ಮಾತನಾಡುವ ವಿಚಾರ ಅಲ್ಲ. ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಪಕ್ಷದ ಹಿರಿಯರೇ ಬಗೆಹರಿಸುತ್ತಾರೆ. ಪಕ್ಷದ ಹೈಕಮಾಂಡ್ ಮಾತಾಡಲಿಕ್ಕೆ ಕರೆಯುತ್ತದೆ. ಆಗ ಮಾತುಕತೆ ಮಾಡಿ ಸಮಸ್ಯೆ ಇತ್ಯರ್ಥ ಮಾಡುತ್ತಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
ನಮ್ಮ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಅಸಮಾಧಾನ ಇರುವುದು ಎಲ್ಲರಿಗೆ ಕಂಡು ಬಂದ ವಿಷಯ, ಅದರಲ್ಲಿ ಮುಚ್ಚುವಂತ ವಿಷಯ ಏನೂ ಇಲ್ಲ, ಅದನ್ನ ಒಂದು ಕೂತು ಬಗೆಹರಿಸಿಕೊಳ್ಳೋ ಅವಶ್ಯಕತೆ ಇದೆ
ಕಳೆದ ಕೆಲ ದಿನಗಳಿಂದ ನಮ್ಮ ಹೈಕಮಾಂಡ್ ಒಂದಿಲ್ಲ ಒಂದು ಚುನಾವಣೆಯಲ್ಲಿ ಭಾಗಿಯಾಗಿತ್ತು. ಇಷ್ಟು ದಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಇತ್ತು. ಈಗ ಮತ್ತೇ ದೆಹಲಿ ಹಾಗೂ ಬಿಹಾರ್ ಚುನಾವಣೆ ಬಂದಿದೆ ನಮ್ಮ ರಾಜ್ಯಕ್ಕೆ ಅವರಿಗೆ ಸಮಯ ಕೊಡಲು ಆಗಿಲ್ಲ. ಅವರೇ ಬಂದು ಸಮಸ್ಯೆ ಇತ್ಯರ್ಥ ಮಾಡ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಇದು ಪಕ್ಷದ ಒಳಗೆ ಚೌಕಟ್ಟಿನಲ್ಲಿ ಮಾತನಾಡುವ ವಿಚಾರ. ಟಿವಿ ಮುಂದೆ ಮಾತಾಡೊದಲ್ಲ,ಅಲ್ಲೇ ಬಗೆಹರಿಸಿಕೊಳ್ಳುತ್ತೇವೆ. ಸಮಾಧಾನ ಕೂಡಾ ಸಿಗಲಿದೆ, ಜಗತ್ತಿನ ಎಲ್ಲ ಸಮಸ್ಯೆಗೆ ಉತ್ತರ ಸಿಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು ಇದು ಕೂಡಾ ಇತ್ಯರ್ಥ ಆಗಲಿದೆ ಎಂದು ಒಪ್ಪಿಕ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ತಿಳಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಅವರು ಅಧ್ಯಕ್ಷರಿದ್ದಾರೆ. ಅವರಿಗೆ ಆ ಸ್ಥಾನ ಸಿಕ್ಕಿದೆ ಅಂದ್ರೆ ಅವರ ಜವಾವ್ದಾರಿ ಇನ್ನು ಹೆಚ್ಚಾಗುತ್ತದೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ಬಸನಗೌಡ ಪಾಟೀಲ್, ನಾನು, ಸಿದ್ದು ಸವದಿ ಎಲ್ಲರೂ ಸರಕಾರದ ಮೆಲೆ ಒತ್ತಾಯ ತಂದಿದ್ವಿ, ಬಿಜೆಪಿ ಸರಕಾರ ಪಂಚಮಸಾಲಿಗೆ ಶೇ 6 ರಷ್ಡು ಮೀಸಲಾತಿ ನೀಡಿತ್ತು. ಸದ್ಯ ಕೈ ಸರಕಾರ ಅದನ್ನ ಕಾಯ್ದಿರಿಸಿದೆ. ಸರಕಾರದ ವಿರುದ್ದ ಪಂಚಮಸಾಲಿಯ ಕೈ ಶಾಸಕರು, ಸಚಿವರು ಹೋರಾಟ ಮಾಡಬೇಕು.
ಸರಕಾರದಲ್ಲಿ ಇದ್ದೆವಿ ಅಂದ್ರೆ ಸರಕಾರ ಮಾಡಿದ್ದು ಎಲ್ಲವೂ ಸತ್ಯ ಅಲ್ಲ. ಸಿಎಂ ಅವರಿಗೆ ಹೇಳಬೇಕು, ಕ್ಯಾಬಿನೇಟ್ ಸಚಿವರಿಗೆ ಮಾತನಾಡಬೇಕು, ಅವರು ಅಧ್ಯಕ್ಷರಾಗಿರುವ ಏಕೈಕ ಕಾರಣಕ್ಕೆ ಎಲ್ಲದಕ್ಕೂ ಕಾಶಪ್ಪನವರ ಸುಮ್ಮನಿದ್ದಾರೆ ಎಂದು ಕಾಶಪ್ಪನವರ ವಿರುದ್ದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು. ಸ್ವಾಮಿಜಿ ಅವರು ಯಾವ ಶಾಸಕರ ಮೆಲೆ ಡಿಪೆಂಡ್ ಆಗಿಲ್ಲ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಸ್ವಾಮಿಜಿ ಅವರನ್ನ ಜನ ಬಹಳ ನಂಬಿದ್ದಾರೆ,
ಜನರ ಪ್ರೀತಿನು ಸ್ವಾಮಿಜಿ ಮೇಲೆ ಇದೆ. ಆದ್ದರಿಂದ ಸಮಾಜದ ಋಣ ಪಂಚಮಸಾಲಿ ಶಾಸಕರುಗಳ ಮೇಲೆ ಇದೆ ಎಂದು ಅರವಿಂದ್ ಬೆಲ್ಲದ್ ಹೇಳಿದರು.












Click it and Unblock the Notifications