Arundhati Roy: ಅಫ್ಜಲ್ ಗುರು ನಿರಪರಾಧಿ ಎಂದಿದ್ದ ಬರಹಗಾರ್ತಿ ಅರುಂಧತಿ ರಾಯ್ ಪುಸ್ತಕ ಕನ್ನಡೀಕರಣ: ಕನ್ನಡಿಗರ ವಿರೋಧ
Arundhati Roy: ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪ್ರಕಾಶಕರಾಗಿರುವ ವಸುಧೇಂದ್ರ ಅವರ ನಿರ್ಧಾರ ಒಂದು ವರ್ಗದ ವಿರೋಧಕ್ಕೆ ಕಾರಣವಾಗಿದೆ. ಅರುಂಧತಿ ರಾಯ್ ಅವರ ಮೂರು ವಿಶಿಷ್ಟ ಕೃತಿಗಳ ಅನುವಾದದ ಹಕ್ಕನ್ನು ಛಂದ ಪುಸ್ತಕ ಪಡೆದುಕೊಂಡಿದ್ದು, ಪುಸ್ತಕಗಳನ್ನು ಕನ್ನಡಿಸುವ (ಕನ್ನಡಕ್ಕೆ ಅನುವಾದ ಮಾಡುವ) ಕೆಲಸ ಭರದಿಂದ ಸಾಗಿದೆ ಎಂದು ಛಂದ ಪುಸ್ತಕ ಪ್ರಕಾಶನ ಹಂಚಿಕೊಂಡಿರುವ ಪೋಸ್ಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಬರಹಗಾರ್ತಿ ಅರುಂಧತಿ ರಾಯ್ ಅವರು ಕೆಲವೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಭಾರತೀಯ ಸಂಸತ್ ಮೇಲೆ 2001ರಲ್ಲಿ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಫ್ಜಲ್ ಗುರು ಬಗ್ಗೆ ಕಾದಂಬರಿಗಾರ್ತಿ ಅರುಂಧತಿ ರಾಯ್ ಮೃದು ಧೋರಣೆ ತೋರಿದ್ದರು ಎನ್ನುವ ವಿಚಾರವು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಅವರ ಬರಹಗಳನ್ನು ಕನ್ನಡೀಕರಿಸುತ್ತಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಪತ್ರಕರ್ತ ಮುರಳಿ ಕೃಷ್ಣ ಅವರು ಅರುಂಧತಿ ರಾಯ್ ಅವರ ಪುಸ್ತಕಗಳ ಕನ್ನಡೀಕರಣ (ಕನ್ನಡಕ್ಕೆ ಅನುವಾದ ಆಗುವುದನ್ನು) ಸ್ಪಷ್ಟವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಬರಹಗಾರ ವಸುಧೇಂದ್ರ ಅವರನ್ನು ಟ್ಯಾಗ್ ಮಾಡಿದ್ದು, ನಿಮ್ಮ ಈ ನಡೆಯನ್ನು ಸ್ಪಷ್ಟವಾಗಿ, ಪ್ರಾಮಾಣಿಕವಾಗಿ ವಿರೋಧಿಸುತ್ತೇನೆ. ಅವರ ಕೃತಿಗಳನ್ನು ಕನ್ನಡಕ್ಕೆ ತಂದು ಪರಿಚಯಿಸುತ್ತಿದ್ದೀರಿ. ಇದು ಸರಿಯಲ್ಲ. ನಿಮ್ಮ ಜಾಗದಲ್ಲಿ ಯಾರೇ ಈ ಕಾರ್ಯ ಮಾಡಿದ್ದರೂ ನಾನು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದೆ.
ಸಹೃದಯಿ, ಸ್ನೇಹಮಯಿ ವ್ಯಕ್ತಿತ್ವದ ನಿಮ್ಮ ಬಗ್ಗೆ ನನ್ನಲ್ಲಿ ಅಪಾರ ಗೌರವ ಇದೆ. ಹೊಸ ತಲೆಮಾರಿನ ಯುವ ಲೇಖಕ, ಲೇಖಕಿಯರಿಗೆ ಅವಕಾಶ, ವೇದಿಕೆ ನೀಡಿ ಬೆಳೆಸುತ್ತಿದ್ದೀರಿ. ನಿಮ್ಮ ಬಗ್ಗೆ ಅಭಿಮಾನವಿದೆ. ದೇಶದ ವಿಷಯ ಬಂದಾಗ ದೇಶ ಮೊದಲು ಅನ್ನೋದು ನನ್ನ ಸ್ಪಷ್ಟ ನಿಲುವು. ದೇಶ ವಿರೋಧಿ ಚಟುವಟಿಕೆಗಳನ್ನೇ ವೃತ್ತಿಯಾಗಿಸಿಕೊಂಡಿರುವ ಅರ್ಬನ್ ನಕ್ಸಲ್ ಅರುಂಧತಿ ರಾಯ್ ಅವರನ್ನು ಕನ್ನಡಕ್ಕೆ ತಂದು ಏನು ಸಾಧಿಸಲು ಹೊರಟಿದ್ದೀರಿ ಎಂದು ತಿಳಿಯಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು ಈ ದಿನವೇ ಹೇಳುತ್ತಿದ್ದೇನೆ.. ನೀವು ಅರುಂಧತಿ ರಾಯ್ ಅವರ ಕೃತಿಗಳನ್ನು ಪ್ರಕಟಿಸಿದರೆ ಮುಂದೆ ಎಂದೆಂದಿಗೂ ನಿಮ್ಮ ಪ್ರಕಾಶನದ ಪುಸ್ತಕಗಳನ್ನು ನಾನು ಕೊಂಡು ಓದುವುದಿಲ್ಲ. ಕೊಂಡು ಉಡುಗೊರೆ ಕೊಡುವುದಿಲ್ಲ. ಹೊಸ ಓದುಗರಿಗೆ ನಿಮ್ಮ ಪ್ರಕಾಶನದ ಕೃತಿಗಳನ್ನು ಶಿಫಾರಸ್ಸು ಮಾಡುವುದಿಲ್ಲ.
ಇದು ಬೆದರಿಕೆ ಅಲ್ಲ. ಗೌರವಯುತ ಆಗ್ರಹ. ಉಳಿದಂತೆ ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ, ಆಯ್ಕೆಯ ಸ್ವಾತಂತ್ರ್ಯ ನಿಮ್ಮದು. ನಮ್ಮ ಭಾವನೆಗಳನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ.. ಎಂದು ಬರೆದುಕೊಂಡಿದ್ದಾರೆ.
ಈ ವಿಷಯಕ್ಕೆ ಹಲವರು ದನಿಗೂಡಿಸಿದ್ದಾರೆ. ರಾಜೇಂದ್ರಪ್ಪ ಶಿವಪ್ಪ ಎನ್ನುವವರು, ಅವರೇನು ಬರೆದಿದ್ದಾರೆ ಎಂದು ಕನ್ನಡಿಗರಿಗೆ ಗೊತ್ತಾಗಲಿ ಬಿಡಿ. ಹೆಸರು ಪ್ರತಿಷ್ಠೆ ಹಣ ಸನ್ಮಾನಗಳಿಗಾಗಿ ಬರೆಯುವವರ, ಪುಸ್ತಕ ಪ್ರಕಾಶಕರ ಮಾರಾಟಗಾರರ ದೊಡ್ಡ ಲಾಬಿಯ ನಡುವೆ ನಾವು ಬದುಕುತ್ತಿದ್ದೇವೆ. ಸಾಹಿತ್ಯವನ್ನು ಓದಿದವರೆಲ್ಲರೂ ಪ್ರಭಾವಿತರಾಗಿ ಪರಿವರ್ತಿತಗೊಳ್ಳುವುದು ವಾಸ್ತವವಾಗಿದ್ದರೆ ಇಂದು ಎಲ್ಲರೂ ಬುದ್ಧ, ಬಸವ, ಕನಕದಾಸರು, ಪುರಂದರದಾಸರು ಹಾಗೂ ಅಂಬೇಡ್ಕರ್ ಆಗಿರಬೇಕಿತ್ತು. ವಿಶ್ವಮಾನವರಾಗಬೇಕಿತ್ತು. ಆದರೆ ಸಮಾಜ ಇಂದು ಏನಾಗಿದೆ ಎಂಬುದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಮಾನವ ಮನ ಪರಿವರ್ತನೆಯಾಗದ ಹೊರತು ಎಲ್ಲವೂ ನಿಷ್ಪ್ರಯೋಜಕ. ಸಾಹಿತ್ಯ ಇಂದು ಸಮಾಜ ಸುಧಾರಣೆಗಿಂತ ಸ್ವಪ್ರತಿಷ್ಠೆಯ ಮೆರವಣಿಗೆಯಾಗಿರುವುದು ಮಹಾ ದುರಂತ ಎಂದು ಅಭಿಪ್ರಾಯಪಟ್ಟಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications