ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಮುಖ್ಯಮಂತ್ರಿಗಳ ನೇಮಕ; ಇಕ್ಕಟ್ಟಿನಲ್ಲಿ ಯಡಿಯೂರಪ್ಪ!

|
Google Oneindia Kannada News

ಬೆಂಗಳೂರು, ಆಗಸ್ಟ್ 26 : ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಒಂದು ತಿಂಗಳು ಕಳೆದಿದೆ. ಸಂಪುಟಕ್ಕೆ ಸೇರಿರುವ 17 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗದೇ ಇನ್ನೂ ಪರದಾಡುತ್ತಿದ್ದಾರೆ. ಈಗ ಉಪ ಮುಖ್ಯಮಂತ್ರಿ ಹುದ್ದೆಯ ಸವಾಲು ಎದುರಾಗಿದೆ.

ಕರ್ನಾಟಕದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಬೇಕು ಎಂಬುದು ಹೈಕಮಾಂಡ್ ನಾಯಕರ ನಿರ್ದೇಶನವಾಗಿದೆ. ಆದರೆ, ಯಾರಿಗೆ ಡಿಸಿಎಂ ಹುದ್ದೆ ನೀಡಬೇಕು, ಎಷ್ಟು ಹುದ್ದೆ ಸೃಷ್ಟಿ ಮಾಡಬೇಕು ಎಂಬ ವಿಚಾರದಲ್ಲಿ ಒಮ್ಮತ ಮೂಡಿಲ್ಲ.

ಬಿಜೆಪಿ ಹೈಕಮಾಂಡ್ ವಿರುದ್ಧ ಯಡಿಯೂರಪ್ಪ ಬೆಂಬಲಿಗರ ಆಕ್ರೋಶಬಿಜೆಪಿ ಹೈಕಮಾಂಡ್ ವಿರುದ್ಧ ಯಡಿಯೂರಪ್ಪ ಬೆಂಬಲಿಗರ ಆಕ್ರೋಶ

ಸಂಪುಟ ಸೇರಿರುವ 17 ಶಾಸಕರಲ್ಲಿ ಹಲವರು ಹಿರಿಯ ನಾಯಕರು. ಅವರನ್ನು ಬಿಟ್ಟು ಜಾತಿ ಆಧಾರದಲ್ಲಿ ಕಿರಿಯರಿಗೆ ಡಿಸಿಎಂ ಹುದ್ದೆ ನೀಡಿದರೆ ಅಸಮಾಧಾನ ಉಂಟಾಗಲಿದೆ. ಇದರಿಂದಾಗಿ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಅಶೋಕ್ 'ಕಿರೀಟ' ಅಶ್ವಥ್ ನಾರಾಯಣ್ ತಲೆಗೆ; ಬದಲಾಯ್ತಾ ಬೆಂಗಳೂರು ಬಿಜೆಪಿ ಆದ್ಯತೆ?ಅಶೋಕ್ 'ಕಿರೀಟ' ಅಶ್ವಥ್ ನಾರಾಯಣ್ ತಲೆಗೆ; ಬದಲಾಯ್ತಾ ಬೆಂಗಳೂರು ಬಿಜೆಪಿ ಆದ್ಯತೆ?

ಜುಲೈ 26ರಂದು ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ, ಸಚಿವ ಸಂಪುಟ ವಿಸ್ತರಣೆ ಮಾಡಿ ನಾಲ್ಕು ದಿನ ಕಳೆದಿದೆ. ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಮಾಡಲು ಆಗಿಲ್ಲ. ಪ್ರತಿಪಕ್ಷಗಳು ಸಹ ಇದನ್ನು ಟೀಕಿಸುತ್ತಿವೆ.

ಇತಿಹಾಸ ಸೇರಿದ ಯಡಿಯೂರಪ್ಪ ಆಡಳಿತ, ಅಭಿನಂದಿಸಿದ ಜೆಡಿಎಸ್‌ಇತಿಹಾಸ ಸೇರಿದ ಯಡಿಯೂರಪ್ಪ ಆಡಳಿತ, ಅಭಿನಂದಿಸಿದ ಜೆಡಿಎಸ್‌

ಸಾಲು-ಸಾಲು ಸವಾಲುಗಳು

ಸಾಲು-ಸಾಲು ಸವಾಲುಗಳು

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಹಾದಿ ಸುಗಮವಾಗಿಲ್ಲ. ಸಾಲು-ಸಾಲು ಸವಾಲುಗಳು ಅವರಿಗೆ ಪಕ್ಷದ ಒಳಗೆ ಎದುರಾಗಿವೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ, ಸರ್ಕಾರದ ಮೇಲೆ ಹೈಕಮಾಂಡ್ ಬಿಗಿ ಹಿಡಿತ, ಡಿಸಿಎಂ ಹುದ್ದೆ ಸೃಷ್ಟಿ ಸೇರಿದಂತೆ ಹಲವು ಸವಾಲುಗಳು ಯಡಿಯೂರಪ್ಪ ಮುಂದಿವೆ.

ಹಿರಿಯ ನಾಯಕರ ಅಸಮಾಧಾನ?

ಹಿರಿಯ ನಾಯಕರ ಅಸಮಾಧಾನ?

ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಯಡಿಯೂರಪ್ಪಗೆ ದೊಡ್ಡ ಸವಾಲು ಎದುರಾಗಿದೆ. ಹೈಕಮಾಂಡ್ ಸೂಚನೆಯಂತೆ ಕಿರಿಯರನ್ನು ಡಿಸಿಎಂ ಮಾಡಿದರೆ, ಹಿರಿಯ ಶಾಸಕರು ಅಸಮಾಧಾನಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಅಶೋಕ್ ಬಿಟ್ಟು, ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣಗೆ ಡಿಸಿಎಂ ಪಟ್ಟ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ.

ಎಲ್ಲವೂ ಹೈಕಮಾಂಡ್ ಕೈಯಲ್ಲಿ

ಎಲ್ಲವೂ ಹೈಕಮಾಂಡ್ ಕೈಯಲ್ಲಿ

ಕರ್ನಾಟಕದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ. ಆದರೆ, ಎಷ್ಟು ಹುದ್ದೆ?. ಇದಕ್ಕೆ ರಾಜ್ಯ ನಾಯಕರ ಬಳಿಯೂ ಇನ್ನೂ ಸ್ಪಷ್ಟವಾದ ಉತ್ತರವಿಲ್ಲ. 3 ಅಥವ 4 ಹುದ್ದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಯಾವುದೂ ಅಂತಿಮವಾಗಿಲ್ಲ.

ಸಿದ್ದರಾಮಯ್ಯ ಹೊಸ ಬಾಂಬ್

ಸಿದ್ದರಾಮಯ್ಯ ಹೊಸ ಬಾಂಬ್

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೋಮವಾರ ಹೊಸ ಬಾಂಬ್ ಸಿಡಿಸಿದ್ದಾರೆ. "ಮಧ್ಯಂತರ ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು, ಈ ಉದ್ದೇಶಕ್ಕಾಗಿ ಪಕ್ಷ ಬಲಪಡಿಸುವಂತೆ ನಮ್ಮವರಿಗೆ ಕರೆ ನೀಡಿದ್ದೇನೆ. ಯಡಿಯೂರಪ್ಪನವರ ಸರ್ಕಾರ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಬಂಡಾಯ ಶಾಸಕರನ್ನು ಸೇರಿಸಿಕೊಂಡು ಸರ್ಕಾರ ನಡೆಸುವುದು ಸುಲಭದ ಮಾತಲ್ಲ" ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

English summary
Appointment of Deputy Chief Minister big challenge for Karnataka Chief Minister B.S.Yediyurappa. Two to Three Deputy Chief Minister may appoint as per high command direction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X