ಕರ್ನಾಟಕ ಉಪಲೋಕಾಯುಕ್ತರಾಗಿ ನ್ಯಾ. ಆನಂದ ನೇಮಕ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್, 09: ಲೋಕಾಯುಕ್ತ ಭಾಸ್ಕರರಾವ್ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದಂತೆ ಹುದ್ದೆಗೆ ಮುಂದೆ ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಇದರೊಂದಿಗೆ ಜಸ್ಟಿಸ್ ನಾರಾಯಣಪ್ಪ ಆನಂದ ಅವರು ಉಪಲೋಕಾಯುಕ್ತ ಹುದ್ದೆಗೆ ನೇಮಕವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಜತೆಗೆ ಆನಂದ ಉತ್ತಮ ಆಯ್ಕೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ ಸಂದರ್ಭ ಅವರು ಮಾಡಿದ ಭಾಷಣ ನೇಮಕವಾಗುವ ಸಾಧ್ಯತೆಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಅವರು ನೀಡಿದ ತೀರ್ಮಾನಗಳ ಇತಿಹಾಸ ಸಹ ಉಪಲೋಕಾಯುಕ್ತ ಹುದ್ದೆಗೆ ಸಮರ್ಥರು ಎಂದು ಹೇಳುತ್ತಿದೆ. ಇವರ ಆಯ್ಕೆಗೆ ಯಾವ ರಾಜಕೀಯ ಪಕ್ಷಗಳಿಂದಲೂ ವಿರೋಧ ವ್ಯಕ್ತವಾಗುವ ಸಾಧ್ಯತೆ ಕಡಿಮೆ ಇದೆ.[ಭಾಸ್ಕರರಾವ್ ರಾಜೀನಾಮೆ ನೀಡಲು ಕಾರಣವೇನು?]

Appointing Justice Ananda as Upa-Lokayukta was a good choice

ಒನ್ಇಂಡಿಯಾದೊಂದಿಗೆ ಮಾತನಾಡಿದ ಕಾನೂನು ಇಲಾಖೆಯ ಕೆಲ ಅಧಿಕಾರಿಗಳು, ಆನಂದ ಅವರು ನಾವು ಕಂಡ ನಿಷ್ಪಕ್ಷಪಾತ ತೀರ್ಮಾನ ನೀಡುವ ನ್ಯಾಯಾಧೀಶರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಸದಾ ನಗುಮೊಗದಿಂದ ಇರುವ ಅವರು ತೀರ್ಮಾನ ನೀಡುವ ವೇಳೆ ಮಾತ್ರ ಯಾವ ಪ್ರಭಾವಕ್ಕೂ ಪೂರ್ವಗ್ರಹಕ್ಕೂ ಅವರು ಒಳಗಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.[ಲೋಕಾಯುಕ್ತ ಹುದ್ದೆಗೆ ಕೇಳಿಬರಲಿವೆ ಕನಿಷ್ಠ 5 ಹೆಸರು]

ಆನಂದ ಅವರ ನಿವೃತ್ತಿ ಭಾಷಣದ ಸಾಲುಗಳನ್ನು ಕೇಳಿದರೆ ಅವರ ಭ್ರಷ್ಟಾಚಾರ ಮುಕ್ತ ಸಮಾಜದ ಕಲ್ಪನೆ ನಮ್ಮ ಎದುರಿಗೆ ಬರುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವೇಳೆಯಲ್ಲೇ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲ ಕಾನೂನುಗಳು ಅನುಷ್ಠಾನಕ್ಕೆ ಬಂದವು. ನಂತರ ಅದರಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಮುಂದುವರಿಯಲಾಯಿತು. ಆದರೆ ಸಮಾಜದಲ್ಲಿ ಮತ್ತು ಆಡಳಿತದಲ್ಲಿ ಇಂದು ಪಾರದರ್ಶಕತೆ ತರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದ್ದರು.

ಜಸ್ಟಿಸ್ ನಾರಾಯಣಪ್ಪ ಆನಂದ ಯಾರು?
ಜಸ್ಟಿಸ್ ನಾರಾಯಣಪ್ಪ ಆನಂದ 30-11-1977 ರಿಂದ ವಕೀಲ ವೃತ್ತಿ ಆರಂಭ ಮಾಡಿದರು. ಕೋಲಾರ ಜಿಲ್ಲಾ ಕೋರ್ಟ್ ನಲ್ಲಿ ಮೊದಲಿಗೆ ಸೇವೆ ಸಲ್ಲಿಸಿದ್ದರು. ನಂತರ ಕೆಲಸ 1987-1989 ನಡುವೆ ಬೆಂಗಳೂರಿನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು. ನಂತರ ಹಾಸನ, ಚಿತ್ರದುರ್ಗ ಮತ್ತು ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನ್ಯಾಯ ದಾನ ಮಾಡಿದ್ದರು.[ಕರ್ನಾಟಕ ಲೋಕಾಯುಕ್ತ ಹಗರಣದ Timeline]

2003ರಲ್ಲಿ ಕರ್ನಾಟಕ ಹೈ ಕೋರ್ಟ್ ರಿಜಿಸ್ಟರ್ ಜನರಲ್ ಆಗಿ ನೇಮಕಗೊಂಡರು. ನಂತರ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದುಕೊಂಡರು. 2006 ರಿಂದ 2008ರ ವರೆಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Those who have stood before Justice Narayanappa Ananda and argued a case would say that he is one of the toughest judges that they have come across. With an impeccable record and a no-nonsense attitude many in the legal fraternity in Karnataka would say that he is the best choice for the post of Karnataka Upa-Lokayukta.
Please Wait while comments are loading...