ಲಿಂಗಾಯತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಜೂನ್ 22: ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆ (ರಿ.) ಪ್ರತಿ ವರ್ಷದಂತೆಯೇ ಈ ವರ್ಷವೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಅನೇಕ ಶರಣರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. 2016 -17ನೇ ಸಾಲಿನ ವಿದ್ಯಾರ್ಥಿವೇತನ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಸಮಾಜದ ಪ್ರಮುಖ ಸಾಧಕರ ಸಾಧನೆಯನ್ನು ಸ್ಮರಿಸಿ ಎಸ್. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಎಸ್.ಆರ್ ಕಂಠಿ,ಎಸ್. ಆರ್ ಬೊಮ್ಮಾಯಿ, ಬಿ.ಡಿ ಜತ್ತಿ, ಜೆ.ಎಚ್ ಪಟೇಲ್, ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಜಿ.ಎಂ ಸಿದ್ದೇಶ್, ಎಸ್. ಆರ್ ಕಾಶಪ್ಪನವರ್, ವಿಜಯ ಸಂಕೇಶ್ವರ್, ಪ್ರಭಾಕರ್ ಕೋರೆ, ಗುರುಪಾದಪ್ಪ ನಾಗಮಾರಪಲ್ಲಿ, ಅಶೋಕ್ ಖೇಣಿ ಸಮಾಜದ ಗಣ್ಯರುಗಳಾಗಿರುವ ಇವರ ಸಾಧನೆ ಅತ್ಯಮೂಲ್ಯವಾದ ಕಾರಣ ಇವರುಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರತಿಷ್ಠಿತ "ಬಸವಜ್ಯೋತಿ" ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. [ರಾಜ್ಯದಲ್ಲೇ ಪ್ರಥಮ, ಮಠಾಧೀಶರಿಗಾಗಿ ವಿಶ್ರಾಂತಿ ಗೃಹ]

Apply for Veerashaiva Lingayat Yuva Vedike Student Scholarship

ಅರ್ಜಿ ಸಲ್ಲಿಸಲು 25/07/2016 ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು ವೆಬ್ ಸೈಟಿನಲ್ಲಿ ಪಡೆದುಕೊಳ್ಳಬಹುದಾಗಿದೆ. [ವೇದಿಕೆ ವೆಬ್ ಸೈಟ್]

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಶರಣ ಪ್ರಶಾಂತ್ ಕಲ್ಲೂರ್
ರಾಜ್ಯ ಅಧ್ಯಕ್ಷರು
ವೀರಶೈವ ಲಿಂಗಾಯತ ಯುವ ವೇದಿಕೆ (ರಿ.)
080 6455 5554. [ವೀರಶೈವ ವೇದಿಕೆಯಿಂದ ಬಸವ ಸಿರಿ ಪ್ರಶಸ್ತಿ ಪ್ರದಾನ]

ವೀರಶೈವ ಲಿಂಗಾಯತ ಯುವ ವೇದಿಕೆ ಸತತ ಒಂದೂವರೆ ವರ್ಷಗಳಿಂದ ವಿನೂತನ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮನ ತಲುಪುವುದರ ಜೊತೆಯಲ್ಲಿ ಅರಿವು - ಸಂಘಟನೆ - ಕ್ರಾಂತಿ ಮೂಡಿಸುವಲ್ಲಿ ಮುನ್ನಡೆಯುತ್ತಿದೆ. ಈಗ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ವಿದ್ಯಾರ್ಥಿ ವೇತನ ಯೋಜನೆ ಹಮ್ಮಿಕೊಂಡಿದೆ ಎಂದು ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಕವನ ಬಸವಕುಮಾರ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Veerashaiva Lingayat Yuva Vedike has invited applications for distributing schlorship for 2016-17 in the names of politicians.Below Povery Line students belonging to Veerashaiva community can apply online using Lingayat Yuva vedike website.
Please Wait while comments are loading...