ಬೆಂಗಳೂರಿನ ನೀರು ಸಮಸ್ಯೆ ಪರಿಹಾರಕ್ಕೆ ಮುಂದೆ ಬಂದ Apple ಕಂಪನಿ - ಏನಿದು ಯೋಜನೆ? ವರದಿ, ವಿವರ
ಬೆಂಗಳೂರು ಮಹಾನಗರ ಹಾಗೂ ಹೊರವಲಯದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಪರಿಹಾರಕ್ಕೆ Apple ಕಂಪನಿ ಬೆಂಬಲಿತ ಎನ್‌ಜಿಒವೊಂದು ಮುಂದೆ ಬಂದಿದೆ. ಏನಿದು ಯೋಜನೆ? ವರದಿ, ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 03: ಬೆಂಗಳೂರು ಮಹಾನಗರ ಹಾಗೂ ಹೊರವಲಯದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಪರಿಹಾರಕ್ಕೆ Apple ಕಂಪನಿ ಬೆಂಬಲಿತ ಎನ್‌ಜಿಒವೊಂದು ಮುಂದೆ ಬಂದಿದೆ. ಏನಿದು ಯೋಜನೆ? ವರದಿ, ವಿವರ ತಿಳಿಯಿರಿ
2015 ರಿಂದ, ಇಂಧನ ದಕ್ಷತೆಯ ಸುಧಾರಣೆಗಳ ಮೂಲಕ ಇಂಗಾಲದ ತಟಸ್ಥತೆಯನ್ನು ಸಾಧಿಸುವಲ್ಲಿ Apple ಕಂಪನಿ ಯಶಸ್ವಿಯಾಗಿದೆ. ಪ್ರಪಂಚದಾದ್ಯಂತ ಕಂಪನಿಯ ಎಲ್ಲಾ ಕಾರ್ಪೊರೇಟ್ ಕಛೇರಿಗಳು 100 ಪ್ರತಿಶತ ನವೀಕರಿಸಬಹುದಾದ ಶಕ್ತಿಯಿಂದ ನಡೆಯುತ್ತಿವೆ. ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಸ್ಥಳೀಯ ಸರ್ಕಾರೇತರ ಸಂಸ್ಥೆಗಳೊಂದಿಗೆ (ಎನ್‌ಜಿಒ) ಸೇರಿ ಆಪಲ್ ಕಂಪನಿಯು ಜನರ ಜೀವನಶೈಲಿಯನ್ನು ಸುಧಾರಿಸಲು ಕೆಲಸ ಮಾಡುತ್ತಿದೆ.

ಈಗ, ಭಾರತದ ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್‌ನ ಬರಪೀಡಿತ ಗ್ರಾಮಗಳಲ್ಲಿ ನೀರಿನ ನಿರ್ವಹಣೆಯನ್ನು ಸುಧಾರಿಸಲು ಕ್ಯುಪರ್ಟಿನೊ ಮೂಲದ ತಂತ್ರಜ್ಞಾನದ ಪ್ರಮುಖ ಸಂಸ್ಥೆ ಫ್ರಾಂಕ್ ವಾಟರ್ ಎಂಬ ಎನ್‌ಜಿಒ ಜೊತೆ ಕೈಜೋಡಿಸುತ್ತಿದೆ.
ಪ್ರಸ್ತುತ ಫ್ರಾಂಕ್ ವಾಟರ್ ಮನೆಗಳನ್ನು ಸಮೀಕ್ಷೆ ಮಾಡುತ್ತಿದೆ. ಈ ಪ್ರದೇಶದಲ್ಲಿ ನೀರನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅನೇಕ ಡೇಟಾ ಪಾಯಿಂಟ್‌ಗಳನ್ನು ವಿಶ್ಲೇಷಿಸುತ್ತಿದೆ. ಇದು ಜಲವಿಜ್ಞಾನದ ಮಾದರಿ ಮತ್ತು ಅತ್ಯಾಧುನಿಕ ನಿರ್ಧಾರ ಬೆಂಬಲ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ನೀರಿನ ಅತ್ಯುತ್ತಮ ಬಳಕೆಗಾಗಿ ಸಂಶೋಧನಾ ಕಾರ್ಯವನ್ನು ಬಳಸಲು ಯೋಜಿಸುತ್ತಿದೆ. ಮುಖ್ಯವಾಗಿ, ನೀರು ವ್ಯರ್ಥವಾಗಿ ಪೋಲಾಗುವುದನ್ನು ತಡೆಯಲು ಯೋಜನೆಗಳನ್ನು ರೂಪಿಸುತ್ತಿದೆ. ಭಾರತದಾದ್ಯಂತ ಮತ್ತು ಅದರಾಚೆಗೆ ಅದೇ ನೀರಿನ ನಿರ್ವಹಣೆ ತಂತ್ರಜ್ಞಾನವನ್ನು ಪುನರಾವರ್ತಿಸಲು ಚಿಂತನೆ ನಡೆದಿದೆ.

'ಹವಾಮಾನ ಬದಲಾವಣೆ ಮತ್ತು ಜಾಗತಿಕ ನೀರಿನ ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ನೀರಿನ ಸಮಸ್ಯೆಗಳು ಬೆಂಗಳೂರು ಹೊರವಲಯದಲ್ಲಿ ವಾಸಿಸುವ ಕುಟುಂಬಗಳನ್ನು ಹೆಚ್ಚು ಬಾದಿಸುತ್ತಿವೆ. ಭಾರತ ಮತ್ತು ಪ್ರಪಂಚದಾದ್ಯಂತ ನವೀನ, ಸಮುದಾಯ ಆಧಾರಿತ ವಿಧಾನಗಳನ್ನು ಬೆಂಬಲಿಸಬೇಕಿದೆ. ನಮ್ಮ ಜಾಗತಿಕ ಹವಾಮಾನ ಸುಧಾರಿಸುವಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ಜನರು ತಮ್ಮ ಜೀವನವನ್ನು ಸುಧಾರಿಸಲು ನಾವು ದುಡಿಯುತ್ತಿದ್ದೇವೆ'ಎಂದು ಆಪಲ್‌ನ ಪರಿಸರ, ನೀತಿ ಮತ್ತು ಸಾಮಾಜಿಕ ಉಪಕ್ರಮಗಳ ಉಪಾಧ್ಯಕ್ಷ ಲೀಸಾ ಜಾಕ್ಸನ್ ಹೇಳಿದರು.












Click it and Unblock the Notifications