ಬಾಲ್ಯ ವಿವಾಹ ತಡೆದ ಬಾಲಕಿಗೆ ಶೌರ್ಯ ಸನ್ಮಾನ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಗೃಹ ಇಲಾಖೆಗೆ CRT ಪತ್ರ
ಬೆಂಗಳೂರು, ಜೂನ್ 09: ಚಿತ್ರದುರ್ಗ ಜಿಲ್ಲೆಯಲ್ಲಿ ಗೊಲ್ಲರಹಟ್ಟಿಯಲ್ಲಿ ತನಗೆ ಬಾಲ್ಯ ವಿವಾಹವನ್ನು ಮಾಡುತ್ತಿದ್ದ ಪೋಷಕರ ವಿರುದ್ಧ ಬಾಲಕಿಯೊಬ್ಬರು ಶೌರ್ಯ ಪ್ರದರ್ಶಿಸಿದ್ದಾಳೆ. ರಸ್ತೆಯಲ್ಲಿ ಬಿದ್ದು ಚೀರಾಡಿ ಬಾಲ್ಯ ವಿವಾಹ ತಡೆದಿದ್ದಾಳೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾಹಿತಿಗಳು ಧ್ವನಿ ಎತ್ತಿದ್ದಾರೆ. ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ (CRT) ಗೃಹ ಇಲಾಖೆಗೆ ಪತ್ರ ಬರೆದಿದೆ.
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮೇಲೆ ಒತ್ತಾಯದಿಂದ ಆಯೋಜಿಸಲಾಗಿದ್ದ ಬಾಲ್ಯ ವಿವಾಹವನ್ನು ಧೈರ್ಯದಿಂದ ಎದುರಿಸಿದ್ದಾಳೆ. ತನ್ನ ಹಕ್ಕುಗಳಿಗಾಗಿ ಹೋರಾಡಿ, ಬಾಲ್ಯವಿವಾಹದ ಕಪಿ ಮುಷ್ಟಿಯಿಂದ ಮುಕ್ತಳಾಗಿರುವ ಘಟನೆಯು ಸಾಮಾಜಿಕ ಜಾಗೃತಿಗೆ ಒಂದು ಶ್ರೇಷ್ಠ ಮಾದರಿಯಾಗಿದೆ. ಈ ಬಾಲಕಿಯ ಶೌರ್ಯವು ಸಾವಿರಾರು ಹೆಣ್ಣು ಮಕ್ಕಳಿಗೆ ತಮ್ಮ ಹಕ್ಕುಗಳನ್ನು ಅರಿತುಕೊಂಡು ಹೋರಾಡಲು ದಾರಿದೀಪವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಟ್ರಸ್ಟ್‌ನ ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹಾ ರಾವ್ ಅವರು ಆಗ್ರಹಿಸಿದ್ದಾರೆ.

ಬಾಲಕಿ ಶಿಕ್ಷಣಕ್ಕೆ ಸಹಾಯ, ಇತರ ಸೌಲಭ್ಯ ಅವಶ್ಯಕ
ಈ ಬಾಲಕಿಯ ಧೈರ್ಯ ಮತ್ತು ಸ್ವಾಭಿಮಾನವು ರಾಜ್ಯದ ಯುವತಿಯರಿಗೆ ಸ್ಫೂರ್ತಿಯಾಗಿದೆ. ಆಕೆಯನ್ನು ರಾಜ್ಯ ಸರ್ಕಾರದಿಂದ ಸನ್ಮಾನಿಸುವುದು, ಇತರರಿಗೆ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಪ್ರೇರಣೆ ನೀಡುತ್ತದೆ. ಆಕೆಯ ಶೈಕ್ಷಣಿಕ ಮತ್ತು ಭವಿಷ್ಯದ ಗುರಿಗಳನ್ನು ಬೆಂಬಲಿಸಲು ಆರ್ಥಿಕ ಸಹಾಯ, ವಿದ್ಯಾರ್ಥಿವೇತನ, ಅಥವಾ ಇತರ ಸೌಲಭ್ಯಗಳನ್ನು ಒದಗಿಸಬೇಕು.
ಕಾನುನೂ ಬಾಹಿರವಾದ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ ಪೋಷಕರು, ಸಂಬಂಧಿಕರ ಯಾರೆ ಆಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆ (UNCRC, 1989) ಯ ಪ್ರಕಾರ, ಭಾರತವು 1992ರಲ್ಲಿ ಒಪ್ಪಿಕೊಂಡಿರುವ ಈ ಒಡಂಬಡಿಕೆಯ ಅನುಸಾರ, 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ದೌರ್ಜನ್ಯ, ಶೋಷಣೆ, ಅಥವಾ ಒತ್ತಾಯದ ವಿವಾಹದಿಂದ ರಕ್ಷಿಸಬೇಕು ಎಂದರು.
ಬಾಲ್ಯ ವಿವಾಹ ನಿಷೇಧ ಕಾಯಿದೆ ಏನು ಹೇಳುತ್ತದೆ..?
ಸದ್ಯದ ಬಾಲ್ಯ ವಿವಾಹ ಘಟನೆಯು ಬಾಲಕಿಯ ಶಿಕ್ಷಣ, ಆರೋಗ್ಯ, ಮತ್ತು ಸ್ವಾತಂತ್ರ್ಯದ ಹಕ್ಕಿನ ಮೇಲೆ ಆಘಾತ ಉಂಟು ಮಾಡಿದೆ (ಪರಿಚ್ಛೇದ 19, 24, 28, ಮತ್ತು 34). ಬಾಲ್ಯ ವಿವಾಹ ನಿಷೇಧ ಕಾಯಿದೆ, 2006 ರ ಪ್ರಕಾರ, 18 ವರ್ಷದೊಳಗಿನ ಹೆಣ್ಣು ಮತ್ತು 21 ವರ್ಷದೊಳಗಿನ ಗಂಡಿನ ವಿವಾಹವನ್ನು ನಿಷೇಧಿಸಲಾಗಿದೆ. ಬಾಲ್ಯ ವಿವಾಹವನ್ನು ಆಯೋಜಿಸುವ, ಉತ್ತೇಜಿಸುವ, ಅಥವಾ ನಡೆಸುವವರಿಗೆ 2 ವರ್ಷಗಳವರೆಗೆ ಕಠಿಣ ಕಾರಾಗೃಹ ವಾಸ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸಬಹುದೆಂದು ಸೆಕ್ಷನ್ 10, 11 ಹೇಳುತ್ತದೆ.
ಇದಷ್ಟೇ ಅಲ್ಲದೇ ಮಕ್ಕಳ ನ್ಯಾಯ (ರಕ್ಷಣೆ ಮತ್ತು ಪೋಷಣೆ) ಕಾಯಿದೆ, 2015 ರ ಪ್ರಕಾರ, ಮಕ್ಕಳಿಗೆ ರಕ್ಷಣೆ, ಪುನರ್ವಸತಿ, ಮತ್ತು ಸಾಮಾಜಿಕ ಮಾನ್ಯತೆ ಒದಗಿಸಬೇಕು. ಈ ಬಾಲಕಿಯನ್ನು 'ರಕ್ಷಣೆಯ ಅಗತ್ಯವಿರುವ ಮಗು' ಎಂದು ಪರಿಗಣಿಸಿ, ಆಕೆಗೆ ಕೌನ್ಸೆಲಿಂಗ್, ಶಿಕ್ಷಣ, ಮತ್ತು ಇತರ ಬೆಂಬಲ ಸರ್ಕಾರ ನೀಡಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮಾಡಿ ತಪ್ಪಿತಸ್ಥರಿಗೆ ಕಾನೂನಿನಡಿ ತಕ್ಕ ಶಿಕ್ಷೆ ಆಗಬೇಕೆಂದು ಟ್ರಸ್ಟ್ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಬಳಿ ಕೋರಿದ್ದಾರೆ.
ಬಾಲ್ಯ ವಿವಾಹ ವಿರುದ್ಧ ಜಾಗೃತಿಗೆ ಅಗತ್ಯ
ಈ ಘಟನೆಯು ಬಾಲ್ಯ ವಿವಾಹದ ವಿರುದ್ಧ ಜಾಗೃತಿಯನ್ನು ಮೂಡಿಸುವ ಅಗತ್ಯ ಒತ್ತಿಹೇಳುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು, ಗ್ರಾಮ ಪಂಚಾಯಿತಿಗಳು, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯ ವಿವಾಹದ ಕಾನೂನು ಮತ್ತು ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಚೈಲ್ಡ್‌ಲೈನ್ 1098ನಂತಹ ಹೆಲ್ಪ್‌ಲೈನ್ ಸಂಖ್ಯೆಗಳನ್ನು ಶಾಲೆಗಳು, ದೇವಸ್ಥಾನಗಳು, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಬೇಕು. ಪ್ರತಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳನ್ನು (CMPO) ಪ್ರೋತ್ಸಾಹಿಸಿ ಅವರುಗಳು ಬಾಲ್ಯ ವಿವಾಹ ತಡೆಯಲು ಕಡ್ಡಾಯ ನಿಯಮ ಜಾರಿಗೊಳಿಸ ಬೇಕು , ಅವರ ಕಾರ್ಯಕ್ಷಮತೆ ಪರಿಶೀಲಿಸಬೇಕು.
ದಿಟ್ಟ ಬಾಲಕಿಗೆ ಶೌರ್ಯ ಸನ್ಮಾನಕ್ಕೆ ಒತ್ತಾಯ
ಈ ಬಾಲಕಿಯ ಶಿಕ್ಷಣ, ಮಾನಸಿಕ ಆರೋಗ್ಯ, ಮತ್ತು ಸಾಮಾಜಿಕ ಏಳಿಗೆಗೆ ಸರ್ಕಾರದಿಂದ ಬೆಂಬಲ ಒದಗಿಸಬೇಕು. ಇದಕ್ಕಾಗಿ, ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಗಳು (CWC) ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ (DCPU) ಗಳ ಸಹಾಯಕ್ಕೆ ಮುಂದಾಗಬೇಕು. ಬಾಲ್ಯ ವಿವಾಹದ ವಿರುದ್ಧ ಹೋರಾಡಿ ಸ್ಪೂರ್ತಿಯಾಗಿರುವ ಬಾಲಕಿಯ 'ಶೌರ್ಯ ಸನ್ಮಾನ'ಮಾಡುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟುವಂತೆ ಚೈಲ್ಡ್ ರೈಟ್ಸ್ ಟ್ರಸ್ಟ್ ನ ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹಾ ರಾವ್ ಅವರು ಒತ್ತಾಯಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications