ಟಿಪ್ಪು ಜಯಂತಿ ರದ್ದು: ಬಿಎಸ್ವೈಗೆ ಜಮೀರ್ ಬಹಿರಂಗ ಸವಾಲು

Recommended Video

      ಬಿ ಎಸ್ ಯಡಿಯೂರಪ್ಪ ಟಿಪ್ಪು ಜಯಂತಿ ರದ್ದು ಮಾಡಿದ ಹಿನ್ನೆಲೆ ಜಮೀರ್ ಬಹಿರಂಗ ಸವಾಲ್

      ಬೆಂಗಳೂರು, ಜುಲೈ 30: ಟಿಪ್ಪು ಜಯಂತಿ ರದ್ದತಿ ವಿಚಾರದಲ್ಲಿ, ಯಡಿಯೂರಪ್ಪ ಸರಕಾರದ ವಿರುದ್ದ ಚಾಮರಾಜಪೇಟೆ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಕಿಡಿಕಾರಿದರು.

      ರಾಜ್ಯದ ಎಲ್ಲಾ ಭಾಗಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಟಿಪ್ಪು ಜಯಂತಿ ಆಚರಿಸಲಾಗುತ್ತಿತ್ತು. ಈಗ ಅದನ್ನು ರದ್ದತಿಗೊಳಿಸಿ ಸರಕಾರ ತಪ್ಪು ಮಾಡಿದೆ ಎಂದು ಜಮೀರ್ ಬೇಸರ ವ್ಯಕ್ತಪಡಿಸಿದರು.

      ಇನ್ನು ಮುಂದೆ ಟಿಪ್ಪು ಜಯಂತಿಯನ್ನು ಇನ್ನೂ ಅದ್ದೂರಿಯಾಗಿ ನಾವು ಆಚರಿಸಲಿದ್ದೇವೆ. ಆಗಿದ್ದಾಗಲಿ, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಜಮೀರ್, ಸರಕಾರಕ್ಕೆ ಸವಾಲೆಸೆದರು.

      Any Obstacles We Will Celebrate Tipu Jayanti Even Grandly Congress Leader Zameer Ahmed Khan

      ಟಿಪ್ಪು ಜಯಂತಿ ರದ್ದತಿ ವಿಚಾರದಲ್ಲಿ, ಕೆಲವು ದಿನಗಳ ಹಿಂದೆ ಬಿಜೆಪಿಗೆ ಸೇರಿರುವ ರೋಷನ್ ಬೇಗ್ ಅವರ ಅಭಿಪ್ರಾಯವನ್ನೂ ಕೇಳಿ ಎಂದು ಜಮೀರ್ ವ್ಯಂಗ್ಯವಾಡಿದರು.

      ಸರಕಾರದ ನಿರ್ಧಾರದಿಂದ ಇನ್ನೂ ವಿಜ್ರುಂಭಣೆಯಿಂದ ಜಯಂತಿ ಆಚರಿಸಲು, ನಾವು ಉತ್ಸುಕರಾಗಿದ್ದೇವೆ. ಇದಕ್ಕೆ ಸರಕಾರ ಅಡ್ಡಗೋಲು ಹಾಕಲು ಸಾಧ್ಯವಿಲ್ಲ ಎಂದು ಜಮೀರ್ ಹೇಳಿದರು.

      ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ನಾಲ್ಕೇ ದಿನಗಳಲ್ಲಿ ಯಡಿಯೂರಪ್ಪ ಸರಕಾರ, ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಟಿಪ್ಪು ಜಯಂತಿ ಆಚರಿಸದೇ ಇರಲು ನಿರ್ಧರಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+