ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾರನ್ನು ಭೇಟಿ ಮಾಡಲಿದ್ದಾರೆ ಅನುಪಮಾ ಶೆಣೈ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 15 : ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಸರ್ಕಾರದ ಸಚಿವರೊಬ್ಬರು ನೀಡಿರುವ ಕಿರುಕುಳದ ಬಗ್ಗೆ ವರದಿ ನೀಡಲಿದ್ದಾರೆ.

ಅನುಪಮಾ ಶೆಣೈ ಅವರ ಸಹೋದರ ಅಚ್ಯುತ್ ಶೆಣೈ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಆಂಧ್ರ ಪ್ರದೇಶದ ಪ್ರಭಾವಿ ಕಾಂಗ್ರೆಸ್ ನಾಯಕರೊಂದಿಗೆ ಬುಧವಾರ ಸಂಜೆ ಅನುಪಮಾ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ' ಎಂದು ಹೇಳಿದರು. [ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]

anupama shenoy

'ರಾಜೀನಾಮೆ ಪ್ರಕರಣಕ್ಕೆ ಈಗ ತಿರುವು ಸಿಕ್ಕಿದೆ. ವೈಯಕ್ತಿಕ ಕಾರಣಗಳಿಗೆ ಎಂಬಂತೆ ರಾಜೀನಾಮೆ ಪತ್ರ ಬರೆದುಕೊಡುವಂತೆ ಪ್ರೇರೇಪಿಸಿದ್ದು ಬಳ್ಳಾರಿ ಎಸ್ಪಿ ಚೇತನ್. ಅದಕ್ಕೂ ಮೊದಲು ಅವರು ಕಿರುಕುಳ ನೀಡಿದ ಎಲ್ಲರ ವಿವರಗಳ ಸಹಿತ ರಾಜೀನಾಮೆ ಪತ್ರ ಬರೆದಿದ್ದರು. ಆದರೆ. ಎಸ್ಪಿ ಅದನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದರು' ಎಂದು ಶೆಣೈ ತಿಳಿಸಿದರು. [ರಾಜೀನಾಮೆ ವಿವಾದ, ಉತ್ತರಗಳು ಬೇಕಾಗಿವೆ]

'ಸಚಿವರು ನೀಡಿದ ಕಿರುಕುಳದ ಕುರಿತು ಎಲ್ಲಾ ದಾಖಲೆಗಳು ಅನುಪಮಾ ಅವರ ಬಳಿ ಇವೆ. ಈ ಎಲ್ಲಾ ವಿವರಗಳನ್ನು ಅವರು ಸೋನಿಯಾ ಗಾಂಧಿ ಅವರ ಜೊತೆ ಹಂಚಿಕೊಳ್ಳಲಿದ್ದಾರೆ' ಎಂದರು. [ರಾಜೀನಾಮೆ ಅಂಗೀಕರಿಸಬಾರದಿತ್ತು : ತಾಯಿ]

ರಾಜೀನಾಮೆ ಪತ್ರ ಬಹಿರಂಗವಾಗಿತ್ತು : ಅನುಪಮಾ ಶೆಣೈ ಅವರು ಬರೆದ ರಾಜೀನಾಮೆ ಪತ್ರ ಮಂಗಳವಾರ ಬಹಿರಂಗವಾಗಿತ್ತು. ಎರಡು ಬಾರಿ ಅವರು ರಾಜೀನಾಮೆ ಪತ್ರವನ್ನು ಬರೆದಿದ್ದರು. ಲಿಕ್ಕರ್ ಮಾಫಿಯಾ ಬಗ್ಗೆ ಮೊದಲ ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು. ಎರಡನೇ ಪತ್ರದಲ್ಲಿ ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆಯಲಾಗಿತ್ತು.

English summary
Anupama Shenoy to meet AICC president Sonia Gandhi in New Delhi on Wednesday, June 15, 2016 evening. Anupama Shenoy resigned for Kudligi DySP post on June 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X