ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮೇಶಿಪ್ರೇಮ ಪ್ರಸಂಗ... ಸಿಡಿ ಬೇಕೆ, ಆಡಿಯೋ ಬೇಕೆ?

By Madhusoodhan
|
Google Oneindia Kannada News

ಬೆಂಗಳೂರು, ಜೂನ್ 07: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ ಪಿ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿರುವ ಅನುಪಮಾ ಶೆಣೈ ಸಾಮಾಜಿಕ ತಾಣದಲ್ಲಿ ತಮ್ಮ ಸ್ಟೇಟಸ್ ಸಮರವನ್ನು ಮುಂದುವರಿಸಿದ್ದಾರೆ.

ಸಿಡಿ ಬೇಕೆ, ಆಡಿಯೋ ಬೇಕೆ? ಪರಮೇಶಿಪ್ರೇಮಪ್ರಸಂಗ ಭಾಗ 1, ವಾಶಿಂಗ್ ಪೌಡರ್ ನಿರ್ಮಾ ಭಾಗ 2' ಎಂದು ಮಂಗಳವಾರ ಮಧ್ಯಾಹ್ನ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ.[ಈಸಬೇಕು ಇದ್ದು ಜಯಿಸಬೇಕು ಅನುಪಮಾ ಶೆಣೈ ಮೇಡಂ]

facebook

ಸಿಡಿ ಬೇಕೆ ಆಡಿಯೋ ಬೇಕೆ ಎಂದು ಪ್ರಶ್ನೆ ಮಾಡಿರುವ ಅನುಪಮಾ #ಟ್ಯಾಗ್ ಗಳನ್ನು ಹುಟ್ಟುಹಾಕಿದ್ದಾರೆ. ಪರಮೇಶಿ ಪ್ರೇಮ ಪ್ರಸಂಗ ಭಾಗ 1 ಮತ್ತು ವಾಶಿಂಗ್ ಪೌಡರ್ ನಿರ್ಮಾ ಭಾಗ 2 # ಟ್ಯಾಗ್ ಹಾಕಿದ್ದಾರೆ. ಸಾಮಾಜಿಕ ತಾಣದಲ್ಲಿ ಈ ಟ್ಯಾಗ್ ಗಳು ಬಲುಬೇಗ ವೈರಲ್ ಆದರೂ ಆಶ್ಚರ್ಯವಿಲ್ಲ.

ಈ # ಟ್ಯಾಗ್ ಗಳ ಅರ್ಥ ಏನು ಎಂಬುದಕ್ಕೆ ಶೆಣೈ ಅವರೇ ಉತ್ತರ ಹೇಳಬೇಕು. ಇದರ ಹಿಂದಿರುವ ಸತ್ಯ ಅಥವಾ ಅವರು ಯಾರನ್ನು ಉದ್ದೇಶದಲ್ಲಿ ಇಟ್ಟುಕೊಂಡು ಇದನ್ನು ಹಾಕಿದ್ದಾರೆ ಎಂಬುದಕ್ಕೆ ಸದ್ಯಕ್ಕೆ ಉತ್ತರ ಗೊತ್ತಾಗಿಲ್ಲ.

ಇದಕ್ಕೆ ನಾಗರಿಕರು ಕಮೆಂಟ್ ಸಹ ಮಾಡಿದ್ದು " ನೀವು ಯಾವ ದಾಖಲೆ ನೀಡಿದರೂ ಅದು ಮಾಧ್ಯಮದವರ ಸೃಷ್ಟಿ ಎಂದು ರಾಜಕಾರಣಿಗಳು ಹೇಳುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.[ಪರಮೇಶ್ವರ ನಾಯ್ಕರೇ ನಿಮ್ಮ ರಾಜೀನಾಮೆ ಯಾವಾಗ?']

ಸರ್ಕಾರದ ಲಿಕ್ಕರ್ ಲಾಬಿ, ಸಚಿವ ಪರಮೇಶ್ವರ್ ನಾಯ್ಕ್ ವಿರುದ್ಧ ಅನುಪಮಾ ಶೆಣೈ ಅವರು ತೆಗೆದುಕೊಂಡ ಕ್ರಮಕ್ಕೆ ರಾಜ್ಯದೆಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಶೆಣೈ ಅವರ ರಾಜೀನಾಮೆ ವಿಚಾರ, ಶೆಣೈ ಅವರ ಫೇಸ್ ಬುಕ್ ಸ್ಟೇಟಸ್ ಬಗ್ಗೆ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ.

ಡಿಐಜಿ ರೂಪಾ ಅವರು ಅನುಪಮಾ ಅವರಿಗೆ ಸ್ಥೈರ್ಯ ತುಂಬಿದ್ದು ರಾಜೀನಾಮೆ ಒಂದೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಟ್ವೀಟ್ ಮಾಡಿದ್ದರು. ಇದಕ್ಕೂ ಮುನ್ನ ಫೇಸ್ ಬುಕ್ ಸ್ಟೇಟಸ್ ಹಾಕಿದ್ದ ಅನುಪಮಾ ಶೆಣೈ ಅವರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದರು. 'ಪಿ ಟಿ ಪರಮೇಶ್ವರ ನಾಯ್ಕರೇ ನಾನು ರಾಜಿನಾಮೆ ನೀಡಿದ್ದೇನೆ. ನೀವು ಯಾವಾಗ ರಾಜಿನಾಮೆ ನೀಡುತ್ತೀರಾ?' ಎಂದು ಅನುಪಮಾ ಶೆಣೈ ಪ್ರಶ್ನೆ ಮಾಡಿದ್ದರು.[ಅನುಪಮಾ ಶೆಣೈ ಯಾರು?]

ಕೂಡ್ಲಗಿ ಡಿವೈಎಸ್‌ಪಿಯಾಗಿದ್ದ ಅನುಪಮಾ ಶೆಣೈ ಅವರು ಶನಿವಾರ ಜೂನ್ 4 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ ಅವರು ದೂರವಾಣಿ ಸಂಪರ್ಕಕ್ಕೂ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳ ಸಂಪರ್ಕಕ್ಕೂ ಸಿಕ್ಕಿಲ್ಲ. ಶೆಣೈ ಕೇವಲ ಫೇಸ್ ಬುಕ್ ನಲ್ಲಿ ತಮ್ಮ ಸ್ಟೇಟಸ್ ಅಪ್ ಡೇಡ್ ಮಾಡುತ್ತಾ ಇದ್ದಾರೆ.

English summary
In her recent Facebook status Anupama Shenoy questions once again government. On June 4, 2016 Kudligi Deputy Superintendent of Police (DYSP) Anupama Shenoy resigned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X