ಕಳಸಾ ಬಂಡೂರಿಗಾಗಿ ರಾಜ್ಯದಲ್ಲಿ ನಡೆದ ಬಂದ್‌ಗಳೆಷ್ಟು?

Written By:
Subscribe to Oneindia Kannada

ಬೆಂಗಳೂರು, ಜುಲೈ, 28: ಕಳಸಾ ಬಂಡೂರಿ ಹೋರಾಟದ ಇತಿಹಾಸ ಕೆದಕಿದರೆ ಬಂದ್ ಗಳು, ಹೋರಾಟಗಳ ಸರಮಾಲೆಯೇ ನಮ್ಮ ಎದುರು ನಿಲ್ಲುತ್ತದೆ. ಅದು ಎಷ್ಟೇ ಬಂದ್ ಗಳು ಇಲ್ಲಿಯವರೆಗೂ ನಡೆದಿದ್ದರೂ ಯಾವ ಸರ್ಕಾರಗಳಿಗೂ ಬಿಸಿ ಮಾತ್ರ ತಟ್ಟಿಲ್ಲ.

ಇದೀಗ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ಕರ್ನಾಟಕವನ್ನು ಮತ್ತೆ ಬಂದ್ ಮಾಡಿದೆ. ಇಂದು ಅಂದರೆ ಜುಲೈ 28 ರಂದು ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್ ಆಚರಣೆ ಮಾಡುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ.[ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]

ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಜುಲೈ 30 ಶನಿವಾರ ಮತ್ತೊಂದು ಬಂದ್ ಗೆ ಕರೆಕೊಟ್ಟಿದ್ದಾರೆ. ಐಟಿ ಬಿಟಿ ಕನ್ನಡಿಗರು ಸಹ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ತಾಣದಲ್ಲಿ ಅಭಿಯಾನ ನಡೆಸಿದ್ದರು. ಕಳಸಾ ಬಂಡೂರಿಗಾಗಿ ರಾಜ್ಯದಲ್ಲಿ ಇಲ್ಲಿಯವರೆಗೆ ಎಷ್ಟು ಬಂದ್ ಗಳು ನಡೆದಿವೆ ಲೆಕ್ಕ ಇಲ್ಲಿದೆ..[ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]

1. ಜುಲೈ 28, 2015

1. ಜುಲೈ 28, 2015

ಜುಲೈ 28, 2015 ಅಂದರೆ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು ಉತ್ತರ ಕರ್ನಾಟಕದಲ್ಲಿ ವ್ಯಾಪಕ ಬೆಂಬಲ ಸಿಗುತ್ತಿದೆ. ಜನರ ಆಕ್ರೋಶ ಮಿತಿ ಮೀರಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.

2. ಜುಲೈ 16, 2016

2. ಜುಲೈ 16, 2016

ಕಳಸಾ-ಬಂಡೂರಿ ಹೋರಾಟ ಜುಲೈ 16 ಶನಿವಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೈತರು ಬಂದ್ಗೆ ಕರೆ ನೀಡಿದ್ದರು. ಹುಬ್ಬಳ್ಳಿ, ಗದಗ, ಹಾಹೇರಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

3. ಬೆಂಬಲಕ್ಕೆ ಸ್ಯಾಂಡಲ್ ವುಡ್

3. ಬೆಂಬಲಕ್ಕೆ ಸ್ಯಾಂಡಲ್ ವುಡ್

ಸೆಪ್ಟೆಂಬರ್ 13, 2015 ಕಳಸಾ-ಬಂಡಾರಿ ನಾಲಾ ಯೋಜನೆಗೆ ಒತ್ತಾಯಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟ 60ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಇಡೀ ಕನ್ನಡ ಚಿತ್ರರಂಗ ಹುಬ್ಬಳ್ಳಿಗೆ ತೆರಳಿ ಅಂದಿನ ಗೋಕಾಕ್ ಚಳವಳಿಯನ್ನು ನೆನಪು ಮಾಡಿತ್ತು.

4. ನರಗುಂದ ಬಂದ್

4. ನರಗುಂದ ಬಂದ್

ಕಳಸಾ ಬಂಡೂರಿ ಹೋರಾಟ 300ನೇ ದಿನಕ್ಕೆ ಕಾಲಿಟ್ಟ ವೇಳೆ ಮೇ 10, 2016 ರಂದು ನರಗುಂದ ಬಂದ್‌ ಆಚರಣೆ ಮಾಡಲಾಗಿತ್ತು. ಹೋರಾಟಗಾರರು ಬೀದಿಗೆ ಇಳಿದಿದ್ದರು.

5. ಕರ್ನಾಟಕ ಬಂದ್

5. ಕರ್ನಾಟಕ ಬಂದ್

ವಾಟಾಳ್ ನಾಗರಾಜ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸೆಪ್ಟೆಂಬರ್. 26, 2015 ಕರೆ ನೀಡಿದ್ದ ಬಂದ್ ಗೆ ಇಡೀ ರಾಜ್ಯವೇ ಸ್ತಬ್ಧವಾಗಿತ್ತು. ರಾಜಧಾನಿ ಬೆಂಗಳೂರು ಸೇರಿ ಎಲ್ಲ ಕಡೆ ಜನರು ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಿದ್ದರು.

6. ಟ್ವೀಟ್ ಅಭಿಯಾನ

6. ಟ್ವೀಟ್ ಅಭಿಯಾನ

ಜುಲೈ 13, 2016 ರಂದು #ImplementKalasaBanduri ಟ್ವಿಟ್ಟರ್ ನಲ್ಲಿಮ ಟ್ರೆಂಡ್ ಆಯಿತು. ಐಟಿ ಬಿಟಿ ಕನ್ನಡಿಗರ ಮಾತಿಗೆ ಬೆಲೆ ನೀಡಿ ರಾಜ್ಯದ ಮೂಲೆ ಮೂಲೆಗಳಿಂದ ಟ್ವೀಟ್ ಮಹಾ ಪ್ರವಾಹ ಹರಿದು ಬಂದಿತು.[ಕಳಸಾ ಬಂಡೂರಿ ಪರ ಟ್ವೀಟ್ ಅಭಿಯಾನ ಯಶಸ್ಸು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After Mahadayi tribunal verdict Pro-Kannada organisations and Farmer organisations called for Karnataka bandh on July 30, 2016. In the name of Kalasa Banduri Karnataka had witnessed many numbers of Bandh. Here is the brief look..
Please Wait while comments are loading...