Get Updates
Get notified of breaking news, exclusive insights, and must-see stories!

Cereals: ಬರದಲ್ಲೂ ಉತ್ತಮ ಸಿರಿಧಾನ್ಯ ಬೆಳೆ ಬೆಳೆದ ರೈತ ಸಹೋದರರು

ಹುಬ್ಬಳ್ಳಿ, ಡಿಸೆಂಬರ್ 17: ಇತ್ತಿಚೀನ ದಿನಗಳಲ್ಲಿ ಸಿರಿಧಾನ್ಯಗಳು ಮಾರುಕಟ್ಟೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮವಾಗಿರುವದರಿಂದ ಇದನ್ನು ದಿನದಿನಕ್ಕೆ ಬಳಸುತ್ತಿರುವವರ ಸಂಖ್ಯೆ ಏರುತ್ತಲೇ ಇದೆ, ರೈತರು ಸಿರಿಧಾನ್ಯಗಳನ್ನು ಬೆಳೆಯಲು ಆಸಕ್ತಿ ತೋರುತ್ತಿರುವದು ನಿಜಕ್ಕೂ ಸಂತಸದ ಸಂಗತಿ.

ಇಂತಹ ಸಿರಿಧಾನ್ಯಗಳನ್ನು ಬೆಳೆದು ಉತ್ತಮ ಇಳುವರಿಯನ್ನು ಪಡೆದಿರುವದು ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದ ಪ್ರಕಾಶ ಅಂಗಡಿ ಹಾಗೂ ಸಂಗಮೇಶ ಅಂಗಡಿ ಸಹೋದರರು. ಇವರು ಪ್ರಥಮ ಬಾರಿಗೆ ತಮ್ಮ 28 ಎಕರೆ ಜಮೀನಿನಲ್ಲಿ ಸಿರಿಧಾನ್ಯಗಳನ್ನು ಬೆಳೆದು ನೀರಿಕ್ಷಿತ ಇಳುವರಿಯನ್ನು ಪಡೆದು ರೈತರಿಗೆ ಮಾರ್ಗದರ್ಶಿಗಳಾಗಿದ್ದಾರೆ.

Annigeri Farmer Brothers growing Cereals of Crops, they got more Income amid In Drought

ರೈತರ ಪರಿಚಯ

ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದ ಪ್ರಕಾಶ ಅಂಗಡಿ ಅವರು ವೃತ್ತಿಯಲ್ಲಿ ವಕೀಲರಾದರು ಪ್ರವೃತ್ತಿಯಲ್ಲಿ ರೈತರು ಹಾಗೂ ಅಣ್ಣಿಗೇರಿ ತಾಲೂಕಾ ಫಾರ್ಮರ್ ಪ್ರೋಡ್ಯೂಸರ್ ಕಂಪನಿಯ ಅದ್ಯಕ್ಷರು, ಹಾಗೂ ಸಹೋದರ ಸಂಗಮೇಶ ಅಂಗಡಿ ಅವರು ಮೂಲತಃ ಕೃಷಿಕರಾದರು ಸದ್ಯ ಭದ್ರಾಪೂರ ಗ್ರಾಪಂ ಸದ್ಯರಾಗಿದ್ದಾರೆ. ಹೀಗೆ ಮೂಲತಃ ಕೃಷಿ ಕುಟುಂಬದಲ್ಲಿ ಬಂದಿರುವ ಅಂಗಡಿ ಸಹೋದರರು ಈ ಬಾರಿ ಸಿರಿಧಾನ್ಯ ಬೆಳೆದು ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ.

ಬರದಲ್ಲೂ ಉತ್ತಮ ಬೆಳೆ

ಸದ್ಯ ಸಮರ್ಪಕ ಮಳೆಯಿಲ್ಲದೆ ಬರಗಾಲ ಇದ್ದರೂ ಸಹ ಅಲ್ಪ ಸಲ್ಪ ಮಳೆಯಲ್ಲಿ ತಮ್ಮ 28 ಎಕರೆ ಹೊಲದಲ್ಲಿ ಪರೀಕ್ಷಾರ್ಥವಾಗಿ ನವಣಿ, ಊದಲು, ಕೊರಲೆ, ಹಾಗೂ ಜೋಳವನ್ನು ಬೆಳೆದು ಬರಗಾಲದಲ್ಲೂ ಸಂಧರ್ಭದಲ್ಲಿ ಅತಿ ಕಡಿಮೆ ನೀರು ಹಾಗೂ ವೆಚ್ಚವನ್ನು ಮಾಡಿ ಸಿರಿಧಾನ್ಯಗಳು ಬೆಳೆಯಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ಅಂಗಡಿ ಸಹೋದರರು.

ಬೆಳೆದ ಸಿರಿಧಾನ್ಯ ಬೆಳೆಗಳು

ಅಂಗಡಿ ಸಹೋದರರು ತಾವು ಈಬಾರಿ 28 ಎಕರೆ ಹೊಲದಲ್ಲಿ 4 ಎಕರೆ ನವಣಿ, 2.5 ಎಕರೆ ಉದಲು, 8 ಎಕರೆ ಜೋಳ, 10 ಎಕರೆ ಕೊರಲೆ ಮತ್ತು ಉದಲೂ ಬೆಳೆ ಬೆಳೆದಿದ್ದಾರೆ. ಈಗಾಗಲೇ ನಾಲ್ಕು ಎಕರೆ ನವಣಿಯನ್ನು ಕಟಾವು ಮಾಡಿ ಅಂದಾಜು 33 ಕ್ವಿಂಟಾಲಲನಷ್ಟು ಇಳುವರಿ ತೆಗೆದಿದ್ದಾರೆ.

ಅದೇರೀತಿ 2.5 ಎಕರೆ ಉದಲು ಬೆಳೆ ೧೦ಕ್ವಿಂಟಲ್‌ನಷ್ಟು ಇಳುವರಿ ಬಂದಿದೆ ಇನ್ನೂ ಜೋಳ ಕೊರಲೆ, ಉದಲುಬೆಳೆ ಇದೆ ಎನ್ನುತ್ತಾರೆ ರೈತ ಸಂಗಮೇಶ ಅಂಗಡಿ.

ಸಾವಯುವ ಸಿರಿಧಾನ್ಯ ಬೆಳೆ

ಅಂಗಡಿ ಸಹೋದರರು ಬೆಳೆದ ನವಣಿ, ಉದಲು, ಕೊರಲೆ ಹಾಗೂ ಜೋಳ ಬೆಳೆಯುವ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಹಾಗೂ ರಾಸಾಯನಿಕ ಕೀಟನಾಶಕ ಸಿಂಪಡನೆ ಮಾಡದೆ ಸಾವಯುವ ರೀತಿಯಲ್ಲಿ ಬೆಳೆದು ರಾಸಾಯನಿಕ ಮುಕ್ತ ಸಿರಿಧಾನ್ಯಗಳನ್ನು ಬೆಳೆದು ಉತ್ತಮ ಇಳುವರಿಯನ್ನು ಪಡೆದು ಇತರರಿಗೂ ಮಾದರಿಯಾಗಿದ್ದಾರೆ.

Annigeri Farmer Brothers growing Cereals of Crops, they got more Income amid In Drought

ರೈತ ಪ್ರಕಾಶ ಅಂಗಡಿ ಮಾತನಾಡಿ ನಾನು ಅಣ್ಣಿಗೇರಿ ತಾಲೂಕಾ ಪ್ರಾರ್ಮರ್ ಪ್ರೋಡ್ಯೂಸರ್ ಕಂಪನಿಯ ಅದ್ಯಕ್ಷನಾಗಿರುವದರಿಂದ ಹೈದರಾಬಾದಿನ ಐಐಎಮ್‌ಆರ್ ಸಂಸ್ಥೆಯ ಅಧಿಕಾರಿಗಳು ಸಿರಿಧಾನ್ಯಗಳನ್ನು ಬೆಳೆಯಿರಿ ಎಂದಾಗ ನಾನು ಅವರ ಸಲಹೆ ಪಡೆದು ಸಿರಿಧಾನ್ಯಗಳನ್ನು ಬೆಳೆದಿದ್ದೇವೆ, ಈ ಸಿರಿಧ್ಯಾನ್ಯಗಳನ್ನು ಬೆಳೆಯಲು ಕಡಿಮೆ ಖರ್ಚು ಹಾಗೂ ಕಡಿಮೆ ತೇವಾಂಶದಲ್ಲಿ ಬೆಳೆಯಬಹುದು ಜೊತಗೆ ಉತ್ತಮ ಇಳುವರಿ ಪಡೆಯಬಹುದು.

ಸಿರಿಧಾನ್ಯದಲ್ಲೇ ಹಳೇಕಾಲದ ಮಂದಿ ಆರೋಗ್ಯ ಗುಟ್ಟು

ಈ ಸಿರಿಧಾನ್ಯಗಳನ್ನು ನಾವು ಸಣ್ಣವರಿದ್ದಾಗ ಹೆಚ್ಚಾಗಿ ಮನೆಗಳಲ್ಲಿ ಬಳುಸುತ್ತಿದ್ದದ್ದು ನೋಡಿದ್ದೇವೆ. ಹೀಗಾಗಿ ಆಕಾಲದ ಜನ ಬಹಳ ಗಟ್ಟಿ ಮುಟ್ಟಾಗಿ ಹಾಗೂ ಆರೋಗ್ಯವಾಗಿ ಶಕ್ತಿಯುತವಾಗಿರುತ್ತಿದ್ದರು. ಕಾಲಕ್ರಮೇಣ ಸೀರಿಧಾನ್ಯಗಳ ಬಳಕೆ ಕಡಿಮೆಯಾಗಿದೆ. ಸದ್ಯ ಮತ್ತೆ ಸಿರಿಧಾನ್ಯಗಳನ್ನು ಹೆಚ್ಚೆಚ್ಚು ಬಳಸಬೇಕು ಎಂಬ ಜಾಹೀರಾತುಗಳನ್ನು ನೋಡುತ್ತಿದ್ದೇವೆ, ಆದರೆ ದನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ರೈತರು ಹೆಚ್ಚೆಚ್ಚು ಸಿರಿಧಾನ್ಯಗಳನ್ನು ಬೆಳೆದು ಅವುಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸುವದರಿಂದ ಉತ್ತಮ ಆರೋಗ್ಯವನ್ನು ಹೊಂದಬೇಕು ಎನ್ನುತ್ತಾರೆ ಅವರು.

ಇತ್ತಿಚೀನ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರರ್ಕಾರಗಳು ಯಾವುದೇ ನೆರವುಗಳನ್ನು ನೀಡುತ್ತಿಲ್ಲ. ಇದರಿಂದ ಸಿರಿಧಾನ್ಯಗಳನ್ನು ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರವು ಪ್ರೋತ್ಸಾಹಧನದ ಜೊತಗೆ ಉತ್ತೇಜನ ನೀಡಿ ಅವರ ಬೆಳೆಗಳಿಗೆ ಭದ್ರತೆ ನೀಡಿದರೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗುತ್ತಾರೆ ಎಂದು ಮನವಿ ಮಾಡಿದರು.

ಸಾವಯವ ಗೊಬ್ಬರ ಬಳಸಿ ಉತ್ತಮ ಇಳುವರಿ

ಸಾವಯವ ಗೊಬ್ಬರದ ಮೂಲಕ ಸಿರಿಧಾನ್ಯಗಳನ್ನು ಬೆಳೆದು ಉತ್ತಮ ಇಳುವರಿಯನ್ನು ಪಡೆದಿದ್ದೇವೆ. ಸಿರಿಧಾನ್ಯಗಳು ನಮ್ಮಲ್ಲರ ಆರೋಗ್ಯಕ್ಕೆ ಉತ್ತಮವಾದವುಗಳು ಹೆಚ್ಚಾಗಿ ಸಕ್ಕರಿಕಾಯಿಲೆ (ಡಯಾಬಿಟಿಸಿ) ರೋಗ ನೀವಾರಣೆಗೆ ಸರಿಧಾನ್ಯ ರಾಮಬಾಣ ಎಂದು ಕೇಳಿದ್ದೇನೆ.

ಇತ್ತಿಚೀನ ದಿನಗಳಲ್ಲಿ ಸಕ್ಕರೆ ಕಾಯಿಲೆ ಹೊಂದಿದದವರು ಹೆಚ್ಚಾಗಿದ್ದಾರೆ. ಇದಕ್ಕೆ ನವಣಿ ಬೆಳೆ ಉತ್ತಮವಾಗಿದೆ, ನಾವು ಬಾಲ್ಯದ್ಲಲಿ ನವಣಕ್ಕಿ ಅನ್ನ ಎಂದು ಊಟ ಮಾಡುತ್ತಿದ್ದೆವು. ಇಂದು ಅಕ್ಕಿಯ ಅನ್ನವನ್ನು ಊಟ ಮಾಡುತ್ತಿದ್ದೇವೆ. ಸಿರಿಧಾನ್ಯಗಳನ್ನು ಬೆಳೆಯುವದರಿಂದ ರೈತರು ಸಂಕಷ್ಟಕ್ಕಿಡಾಗುವದಿಲ್ಲ. ರೈತರು ಇದನ್ನು ಬೆಳೆಯುವದು ಸೂಕ್ತ ನಾನು ಕೂಡಾ ನಮ್ಮ ಜಮೀನುಗಳಲ್ಲಿ ಕೆಲವೊಂದಿಷ್ಟು ಎಕರೆ ಹೊಲವನ್ನು ಸಿರಿಧಾನ್ಯ ಬೆಳೆಯಲು ಮೀಸಲಿಡುತ್ತೇನೆ ಎನ್ನುತ್ತಾರೆ ರೈತ ಸಂಗಮೇಶ ಅಂಗಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+