ಅಂಕೋಲಾ: ಪಾದಚಾರಿಗಳ ಮೇಲೆ ಹರಿದ ಲಾರಿ, 3 ಸಾವು

Written By:
Subscribe to Oneindia Kannada

ಶಿರಸಿ, ಜುಲೈ, 11: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾ ಸೋಮವಾರ ಭೀಕರ ಅಪಘಾತವೊಂದಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪಾದಾಚಾರಿಗಳ ಮೇಲೆ ಲಾರಿ ಹರಿದು ಮೂವರು ಮೃತಪಟ್ಟಿದ್ದಾರೆ.

ಮೃತರನ್ನು ಹುಬ್ಬಳ್ಳಿ ಮೂಲದ ಸಿದ್ದವ್ವ ಹಾಲಪ್ಪ ಗಾಣಿಗೇರ್ (55), ಕಲಗಟಗಿ ತಾಲೂಕಿನ ಉಗ್ಗಿನಕೇರಿಯ ಕಲ್ಲಪ್ಪ (45) ಹಾಗೂ ಚನ್ನಪ್ಪ (35) ಎಂದು ಗುರುತಿಸಲಾಗಿದೆ.[ವೀಲಿಂಗ್ ಮಾಡಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು]

accident

ಅಪಘಾತ ಸಂಭವಸಿದ್ದು ಹೇಗೆ?
ಮೃತರು ಮಾಸ್ತಿಕಟ್ಟೆ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಬಂದ ಲಾರಿ ಮೂರು ಜನರ ಮೇಲೆ ಹರಿದಿದೆ. ಅಪಘಾತದ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.[ಯುವತಿ ಮೇಲೆ ಹರಿದ ಟಿಪ್ಪರ್ ಲಾರಿ]

ದುರ್ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sirsi: Speeding truck kills 3 people near Mastikatta, National Highway No. 63 ( Ankola - Hubli - Hospet - Bellary - Guntakal - Gooty ), Ankola Taluk, Uttara Kannada on 11, July 2016. Esteem Mall. Three killed identified as Halappa, Kallappa, Channappa.
Please Wait while comments are loading...