ಮೋದಿ ಭ್ರಷ್ಟ ಎಂದಿದ್ದಕ್ಕೆ ರಾಹುಲ್ ಮೇಲೆ ಅನಂತ್ ವಾಗ್ದಾಳಿ

ಬೆಂಗಳೂರು, ಮೇ 19 : ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಕುದುರೆ ವ್ಯಾಪಾರಕ್ಕೆ ನೇರವಾಗಿ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆರೋಪಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

ಕರ್ನಾಟಕದಲ್ಲಿ ಶಾಸಕರನ್ನು ಕೊಳ್ಳಲು ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರವನ್ನು ಕೊಟ್ಟಿದ್ದರು. ಇದೇ ರೀತಿಯಾ ಭ್ರಷ್ಟಾಚಾರದ ವಿರುದ್ಧ ತಾವು ಹೋರಾಡುತ್ತೇನೆಂದು ತಿಳಿಸುವುದು. ಅವರು ಸುಳ್ಳು ಹೇಳುತ್ತಿದ್ದಾರೆ. ಅವರೇ ಭ್ರಷ್ಟ ಎಂದು ವಿಶ್ವಾಸಮತದಲ್ಲಿ ಬಿಜೆಪಿ ಸೋತ ನಂತರ ರಾಹುಲ್ ಟೀಕಿಸಿರುವ ರೀತಿ.

ಇದಕ್ಕೆ ಬಿಜೆಪಿ ಸಂಸದ ಅನಂತ್ ಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರೇನು ಪ್ರಧಾನಿ ಬಗ್ಗೆ ಹೇಳುತ್ತಿದ್ದಾರೆ? ಇದೇ ಪ್ರಧಾನಿ ಯಾವುದೇ ಹಗರಣವಿಲ್ಲದ ಸರಕಾರ ನೀಡಿದ್ದಾರೆ. ರಾಹುಲ್ ಈ ರೀತಿ ಪ್ರಧಾನಿ ಮೇಲೆ ಆರೋಪ ಹೊರಿಸಿದರೆ, ರಾಹುಲ್ ತನ್ನ ಮನದ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Ananth Kumar slams Rahul for calling Modi corrupt

ನರೇಂದ್ರ ಮೋದಿ ಮೇಲೆ ಮಾತ್ರವಲ್ಲ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮೇಲೆ ಕೂಡ ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದ್ದಾರೆ. ಈ ಕ್ರಿಯೆಗಳಿಗೆಲ್ಲ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+