ಮಳೆ ಹಾನಿಯ ಅಧ್ಯಯನ ನಡೆಸಿದ ಅನಂತ ಕುಮಾರ್
ಗುಲ್ಬರ್ಗ, ಸೆ.8 : ಗುಲ್ಬರ್ಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಕೇಂದ್ರ ಸಚಿವ ಅನಂತ ಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದದರು. ಕಮಲಾನಗರದಲ್ಲಿ ಪ್ರವಾಹದಿಂದ ಮೃತಪಟ್ಟ ಆರು ವರ್ಷದ ಮಹಾದೇವಪ್ಪನ ಮನೆಗೆ ಭೇಟಿ ನೀಡಿ ಮೃತನ ತಂದೆ ಗುಂಡಪ್ಪಗೆ ಸಾಂತ್ವನ ಹೇಳಿದರು ಮತ್ತು ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಕೇಂದ್ರ ರಾಸಾನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಭಾನುವಾರ ಗುಲ್ಬರ್ಗದಲ್ಲಿ ಆಗಸ್ಟ್ 26 ರಿಂದ 30ರವರೆಗೆ ಬಿದ್ದ ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಹಾನಿಯ ಬಗ್ಗೆ ಅಧ್ಯಯನ ನಡೆಸಿದರು. ವಿಧಾನ ಪರಿಷತ್ ಶಾಸಕ ಅಮರನಾಥ ಪಾಟೀಲ್, ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ್, ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಹೆಚ್.ಎಂ.ಕುಮಾರ್ ಮುಂತಾದವರು ಅನಂತ ಕುಮಾರ್ ಅವರ ಜೊತೆ ಪಾಲ್ಗೊಂಡಿದ್ದರು. [ಮಳೆ ಹಾನಿ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ : ಸಿಎಂ]
ಅತಿವೃಷ್ಟಿಯಿಂದ ಶರಣಬಸವೇಶ್ವರ ಕೆರೆಯಲ್ಲಿ ನೀರಿನ ತೀವ್ರ ಒತ್ತಡ ತಗ್ಗಿಸಲು ಕೆರೆಯಿಂದ ಹೆಚ್ಚುವರಿ ನೀರು ಬಿಡಲು ಮಾಡಿದ ವ್ಯವಸ್ಥೆಯನ್ನು ಸಚಿವರು ವೀಕ್ಷಿಸಿದರು. ಈ ಕೆರೆಯ ಸುತ್ತಮುತ್ತಲಿನ ಕೆರೆಯ ಒಡ್ಡು ಸದೃಢಗೊಳಿಸಲು 6.74 ಕೋಟಿ ರೂ. ಅಂದಾಜು ಮೊತ್ತದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ ವಿವರವನ್ನು ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರಿಂದ ಪಡೆದರು. ಅನಂತ ಕುಮಾರ್ ಭೇಟಿಯ ಚಿತ್ರಗಳು

ಮಳೆ ಹಾನಿ ಅಧ್ಯಯನ ನಡೆಸಿದ ಕೇಂದ್ರ ಸಚಿವ
ಗುಲ್ಬರ್ಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದದರು.

ಒಂದು ಲಕ್ಷ ರೂ.ಪರಿಹಾರ ನೀಡಿಕೆ
ಕಮಲಾನಗರದಲ್ಲಿ ಪ್ರವಾಹದಿಂದ ಮೃತಪಟ್ಟ ಆರು ವರ್ಷದ ಮಹಾದೇವಪ್ಪನ ಮನೆಗೆ ಭೇಟಿ ನೀಡಿದ ಅನಂತ ಕುಮಾರ್, ಮೃತನ ತಂದೆ ಗುಂಡಪ್ಪಗೆ ಸಾಂತ್ವನ ಹೇಳಿದರು ಮತ್ತು ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

ಸಚಿವರಿಂದ ಕೆರೆ ವೀಕ್ಷಣೆ
ಭಾರೀ ಮಳೆಯಿಂದ ಶರಣಬಸವೇಶ್ವರ ಕೆರೆಯಲ್ಲಿ ನೀರಿನ ಒತ್ತಡ ಹೆಚ್ಚಾಗಿದ್ದು, ಅದನ್ನು ತಗ್ಗಿಸಲು ಕೆರೆಯಿಂದ ಹೆಚ್ಚುವರಿ ನೀರು ಬಿಡಲು ಮಾಡಿದ ವ್ಯವಸ್ಥೆಯನ್ನು ಅನಂತ ಕುಮಾರ್ ವೀಕ್ಷಿಸಿದರು. ಕೆರೆಯ ಸುತ್ತಮುತ್ತಲಿನ ಒಡ್ಡು ಸದೃಢಗೊಳಿಸಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ವಿವರಗಳನ್ನು ಮಹಾನಗರ ಪಾಲಿಕೆಯ ಆಯುಕ್ತರಿಂದ ಪಡೆದರು.

ರಸಗೊಬ್ಬರ ಕಾರ್ಖನೆ ಸ್ಥಾಪನೆ
ಬೆಳಗಾವಿ-ಹುಬ್ಬಳ್ಳಿ ಮಧ್ಯೆ ಹಾಗೂ ಬಿಡದಿಯಲ್ಲಿ ಸ್ಪರ್‌ಲೈನ್ ಆಧಾರಿತ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲಾಗುತ್ತದೆ ಎಂದು ಗುಲ್ಬರ್ಗದಲ್ಲಿ ಸಚಿವರು ಹೇಳಿದರು. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾವು ದಾಬೂಲ್‌ನಿಂದ ಬೆಳಗಾವಿ ಮೂಲಕ ಹುಬ್ಬಳ್ಳಿ, ಬೆಂಗಳೂರು ಬಿಡದಿವರೆಗೆ ಪೈಪ್‌ಲೈನ್ ನಿರ್ಮಿಸಿದೆ. ಇದರ ಸಹಾಯದಿಂದ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಶೀಘ್ರ ರಾಷ್ಟ್ರೀಯ ರಸಗೊಬ್ಬರ ನೀತಿ
ಯೂರಿಯಾ, ಎನ್‌ಪಿಕೆ (ಸಾರಜನಕ, ಪಾಸ್ಪರಸ್, ಪೊಟ್ಯಾ ಶಿಯಂ) ಬಳಕೆ ಕುರಿತು ಹೆಚ್ಚುತ್ತಿರುವ ಆತಂಕ ಹಾಗೂ ಭೂಮಿ- ಕೃಷಿಯ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮ ತಡೆಗೆ ಶೀಘ್ರವೇ ರಾಷ್ಟ್ರೀಯ ರಸಗೊಬ್ಬರ ನೀತಿ ಜಾರಿ ಗೊಳಿಸಲಾಗುವುದು ಎಂದು ಅನಂತ್ ಕುಮಾರ್ ಹೇಳಿದರು.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications