ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದಯಾನ 2022: ಆರ್ಥಿಕ ಹಿಂದುಳಿದ ಒಳಿತಿಗಾಗಿ ಮ್ಯಾರಾಥಾನ್

|
Google Oneindia Kannada News

ಬೆಂಗಳೂರು, ಜೂ. 06: ಸೂರ್ಯ ಹುಟ್ಟುವ ಮುನ್ನವೇ ಅಲ್ಲಿ ಹರ್ಷೋದ್ಗಾರ.. ಗುರಿ ಮುಟ್ಟುವ ತವಕ... ಹೆಜ್ಜೆ ಹೆಜ್ಜೆಯಲ್ಲೂ ಮಂದಹಾಸದ ನಗು, ಸ್ಪೂರ್ತಿಯ ಮಾತುಗಳು ಇದೇ ಆನಂದಯಾನ. ಮಾತ್ರವಲ್ಲ ಈ ಯಾನದ ಹಿಂದೆ ಒಂದು ಮಹತ್ವದ ಉದ್ದೇಶವೂ ಇತ್ತು.

ಭಾನುವಾರ ಬೆಳಗ್ಗೆ ಸರ್ಜಾಪುರ ರಸ್ತೆಯ ಮಳ್ಳೂರಿನಲ್ಲಿ ನಡೆದ ಆನಂದಯಾನ 2022ರ ಚಿತ್ರಣವಿದು. ಸ್ನೇಹದಾನ್ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ಈ ಆನಂದಯಾನದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಕೋವಿಡ್ ನಿಂದ ಎರಡು ವರ್ಷ ಸ್ಥಗಿತಗೊಂಡಿತ್ತು. ಈ ಭಾರಿ ಆಯೋಜಿಸಿದ್ದ ಆನಂದಯಾನ 2022 ಮ್ಯಾರಥಾನ್ ನಲ್ಲಿ ನೂರಾರು ಮಂದಿ ಸ್ವಯಂ ಪ್ರೇರಿತವಾರಿ ಪಾಲ್ಗೊಂಡಿದ್ದರು.

Ananda yana 2022 : the pure spirit of running while also giving to kids

ಐದು ಕಿ.ಮೀ. ದೂರ ಹಾಗೂ ಹತ್ತು ಕಿ.ಮೀ. ದೂರ ಎರಡು ವಿಭಾಗದಲ್ಲಿ ಆನಂದಯಾನ ಆಯೋಜಿಸಲಾಗಿತ್ತು. ಶಾಲಾ ಮಕ್ಕಳು, ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳು, ಹಿರಿಯ ನಾಗರಿಕರು ಈ ಆನಂದ ಯಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 6.35 ಕ್ಕೆ ಈ ಮಹಾಯಾನ ಆರಂಭವಾಯಿತು.

Ananda yana 2022 : the pure spirit of running while also giving to kids

ಇದಕ್ಕೂ ಮುನ್ನ ನೂರಾರು ಸ್ವಯಂ ಸೇವಕರು ಬೆಳಗಿನ ಜಾವ ಐದು ಗಂಟೆಗೆ ಬಂದು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆನಂದಯಾನದಲ್ಲಿ ಪಾಲ್ಗೊಂಡವರಿಗೆ ಮಾರ್ಗದರ್ಶನ ನೀಡಿದರು. ಅವರ ಬೇಕು ಬೇಡುಗಳಿಗೆ ಕೊನೆ ವರೆಗೂ ಸ್ಪಂದಿಸಿದು. ಈ ಆನಂದಯಾನದಲ್ಲಿ ಒನ್ ಇಂಡಿಯಾ, ಒನ್ ಇಂಡಿಯಾ ಕನ್ನಡ, ಡೈಲಿಹಂಟ್ ಬಳಗ ಕೂಡ ಕೈ ಜೋಡಿಸಿ ಎಲ್ಲಾ ಉದ್ಯೋಗಿಗಳು ಪಾಲ್ಗೊಂಡಿದ್ದರು.

Ananda yana 2022 : the pure spirit of running while also giving to kids

ನಿವೃತ್ತ ಬ್ರಿಗೇಡಿಯರ್ ವೆಂಕಟರಾಮನ್ ಮತ್ತು ಅವರ ಪತ್ನಿ ಶಾರದಾ ಅವರು ಕೂಡ ಈ ಮಹಾಯಾನದಲ್ಲಿ ಹೆಜ್ಜೆ ಹಾಕಿ ಯುವಕರಿಗೆ ಸ್ಫೂರ್ತಿ ತುಂಬಿದರು. ಮತ್ತೊಬ್ಬ ಹಿರಿಯ ನಾಗರಿಕರಾದ ವಿಜಯ್ ಕುಮಾರ್ ಅವರು ಮ್ಯಾರಥಾನ್ ಓಟ ಮುಗಿಸಿ ಇತರರಿಗೆ ಸ್ಫೂರ್ತಿ ತುಂಬಿದರು. ಪುಟಾಣಿಗಳು, ಮಹಿಳೆಯರು, ಪುರುಷರು ಸಾಕಷ್ಟು ಸಂಖ್ಯೆಯಲ್ಲಿ ಈ ಮ್ಯಾರಾಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ ಮಾತ್ರ ಮುಗಿಯಲಿಲ್ಲ ಈ ಮ್ಯಾರಥಾನ್. ಬ್ಯಾಂಡ್ ನ ಹಾಡುಗಳಿಗೆ ಮಕ್ಕಳು ಡ್ಯಾನ್ ಮಾಡಿ ಕುಣಿದು ಕುಪ್ಪಳಿಸಿದರು.

Ananda yana 2022 : the pure spirit of running while also giving to kids

ನಗು, ಸಂಭ್ರಮ, ಉತ್ಸಾಹ, ಫಿಟ್ನೆಸ್ ಗೆ ಕಾರಣವಾಗಿದ್ದ ಆನಂದಯಾನ 2022 ಆಯೋಜನೆ ಹಿಂದೆ ದೊಡ್ಡ ಕಾರಣವಿತ್ತು. ಈ ಯಾನದ ಮೂಲ ಉದ್ದೇಶ ಅಥಿರ್ಕವಾಗಿ ಹಿಂದುಳಿದ ಹಾಗೂ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಸಂಗ್ರಹಿಸುವುದಾಗಿತ್ತು. ಈ ಯಾನದಲ್ಲಿ ಪಾಲ್ಗೊಳ್ಳಲು ಪಾವತಿಸಿದ ಸದಸ್ಯತ್ವದ ಶುಲ್ಕ ಅನಾಥ ಹಾಗೂ ಹಿಂದುಳಿದ ಮಕ್ಕಳ ಕಲಿಕೆಗೆ ಬಳಸಲಾಗುತ್ತದೆ. ಅಂತೂ ಫನ್, ಫಿಟ್ನೆಸ್ ನಿಂದ ಕೂಡಿದ್ದ ಈ ಆನಂದಯಾನ ವಿಶ್ವ ಪರಿಸರ ದಿನವೇ ಆಯೋಜಿಸಿದ್ದು ಮತ್ತೊಂದು ವಿಶೇಷ. ಅದೂ ಮಕ್ಕಳ ಭವಿಷ್ಯಕ್ಕಾಗಿ ಆಯೋಜಿಸಿದ್ದು ಇದರ ಮೂಲ ಉದ್ದೇಶ.

English summary
Ananda Yana 2022 : The pure spirit of running while also giving to kids Education. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X