ರಾಜ್ಯದ ನಗರಗಳಲ್ಲಿ ಮೇ ಅಂತ್ಯದ ವೇಳೆಗೆ ನಗರ ಸಾರಿಗೆ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್, 14: ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ ಮೇ ಅಂತ್ಯದ ವೇಳೆಗೆ ನಗರ ಸಾರಿಗೆ ಸೇವೆ ಆರಂಭವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇತ್ತೀಚೆಗೆ ಹೇಳಿದ್ದಾರೆ.

ಬಹುತೇಕ ಕಡೆ ನಗರ ಸಾರಿಗೆ ಸೇವೆ ಆರಂಭವಾಗಿದ್ದರೂ ಇನ್ನೂ ಹದಿನಾಲ್ಕು ನಗರಗಳಲ್ಲಿ ನಗರ ಸಾರಿಗೆ ಆರಂಭವಾಗಿಲ್ಲ. ಆದರೆ ಮೇ ತಿಂಗಳ ವೇಳೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಸೇರಿದಂತೆ ಪ್ರಮುಖ ನಗರಗಳಲ್ಲಿ ನಗರ ಸಾರಿಗೆ ಸೇವೆ ಆರಂಭವಾಗಲಿದೆ ಎಂದರು.[ಕೆಎಸ್ಆರ್‌ಟಿಸಿಯ ಬಯೋ ಬಸ್ ಉಪಯೋಗಗಳು]

ಚಾಮರಾಜನಗರ, ಮಂಡ್ಯ, ಮದ್ದೂರು, ಶಿವಮೊಗ್ಗ, ರಾಮನಗರ, ಭದ್ರಾವತಿ, ಉಡುಪಿ, ಚಿಕ್ಕಮಗಳೂರು, ಸಾಗರ ಸೇರಿದಂತೆ ಅನೇಕ ನಗರಗಳಿಗೆ ಹೆಚ್ಚುವರಿ ಸಾರಿಗೆ ಸೇವೆ ಒದಗಿಸಲಾಗುವುದು. ಶಿವಮೊಗ್ಗಕ್ಕೆ ಅರವತ್ತೈದು ಬಸ್ ಗಳನ್ನು ಒದಗಿಸುವುದೂ ಸೇರಿದಂತೆ 1083 ಹೊಸ ಬಸ್ ಖರೀದಿಗೆ ಸರ್ಕಾರ ಮುಂದಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರ ನೀಡಿದರು.

All towns, Cities in Karnataka to get City Service from KSRTC: Ramalinga Reddy

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಾದರಿಯಲ್ಲಿ ಜಿಲ್ಲಾ ಕೇಂದ್ರಗಳ ಮೂಲಕ ನಗರ ಸಾರಿಗೆ ಅಭಿವೃದ್ಧಿ ಪಡಿಸಲಾಗುವುದು. ಹಲವಾರು ಕಾರಣಗಳಿಂದ ನಗರ ಸಾರಿಗೆ ವ್ಯವಸ್ಥೆಗೆ ಬಸ್ ಗಳನ್ನು ಒದಗಿಸುವುದು ವಿಳಂಬವಾಗಿದೆ. ಆದರೆ, ಈಗ ಎಲ್ಲ ತಾಂತ್ರಿಕ ತೊಂದರೆಗಳು ದೂರವಾಗಿವೆ ಎಂದು ಅವರು ಸ್ಪಷ್ಟಪಡಿಸಿದರು.[16 ಪ್ರಮುಖ ನಗರಗಳಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ]

ಕೆಲ ಖಾಸಗಿ ವಾಹನ ಸೇವೆಗಳು ರೈಲ್ವೇ ನಿಲ್ದಾಣದಿಂದ ಮನೆಯವರೆಗೆ ಕರೆದೊಯ್ಯಲು ದುಬಾರಿ ಶುಲ್ಕ ವಿಧಿಸುತ್ತಿರುವುದರಿಂದ ಹಿಡಿದು ಹಲವು ರೀತಿಯಲ್ಲಿ ಪ್ರಯಾಣಿಕರನ್ನು ದೋಚುವ ಕೆಲಸ ಮಾಡುತ್ತಿವೆ ಎಂಬುದು ತಮ್ಮ ಗಮನಕ್ಕೆ ಬಂದಿದೆ.

ರೈಲ್ವೇ ನಿಲ್ದಾಣದಿಂದ ಹಿಡಿದು, ಬಸ್ ನಿಲ್ದಾಣದಿಂದ ಹಿಡಿದು ತಮ್ಮ ತಮ್ಮ ಮನೆಗಳ ತನಕ ತೆರಳಲು ನಗರ ಸಾರಿಗೆ ವ್ಯವಸ್ಥೆ ಜನರಿಗೆ ಅನುಕೂಲ ಒದಗಿಸಿಕೊಡಲಿದೆ ಎಂದರು.

ಅಂಗವಿಕಲರ ಪಾಸ್, ವೃದ್ಧರಿಗೆ ನೀಡುವ ಪಾಸ್, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪಾಸ್ ಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Transport minister R Ramalinga Reddy said Karnataka Government in porcess of purchasing new buses to facilitate introduction of city transport facilities in all towns of the state by May month end/
Please Wait while comments are loading...