ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯ ಕಾಲೇಜು ಸ್ಥಾಪನೆ

Subscribe to Oneindia Kannada

ಬೆಂಗಳೂರು, ಜುಲೈ, 19: ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕೆಂಬುದು ಸರ್ಕಾರದ ನೀತಿ. ಇದರ ಅನ್ವಯ ಹೊಸ ಕಾಲೇಜು ಪ್ರಾರಂಭಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬಿಜೆಪಿಯ ಮಹಂತೇಶ್ ಕವಟಗಿಮಠ ಪ್ರಶ್ನೆಗೆ ವಿಧಾನಪರಿಷತ್‌ನಲ್ಲಿ ಸೋಮವಾರ ಲಿಖಿತ ಉತ್ತರ ನೀಡಿದ ಸಚಿವರು, 2015-16ನೇ ಸಾಲಿನಲ್ಲಿ ಗದಗ, ಕಲಬುರಗಿ ಮತ್ತು ಕೊಪ್ಪಳ, 2016-17ನೇ ಸಾಲಿನಲ್ಲಿ ಕಾರವಾರ, ಕೊಡಗು ಮತ್ತು ಚಾಮರಾಜನಗರದಲ್ಲಿ ಹೊಸ ಕಾಲೇಜು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.[ಹೊಸ ವರ್ಷದ ಕೊಡುಗೆ : 3 ವೈದ್ಯಕೀಯ ಕಾಲೇಜು ಆರಂಭ]

All Districts will get Government Medical Colleges: Sharan Prakash Patil

2014-15ನೇ ಸಾಲಿನಲ್ಲಿ ಘೋಷಿಸಿರುವ ತುಮಕೂರು, ಚಿತ್ರದುರ್ಗ, ಬಾಗಲಕೋಟೆ, ಹಾವೇರಿ, ಯಾದಗಿರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೊಸ ಕಾಲೇಜು ಪ್ರಾರಂಭಿಸಲು ಮಂಜೂರಾತಿ ಆದೇಶ ಹೊರಡಿಸಿದ್ದು, ಇವುಗಳ ಕಟ್ಟಡ ನಿರ್ಮಾಣ ಮತ್ತು ಎಂಸಿಐ ನಿಯಮ ಅನ್ವಯ ಮೂಲ ಸೌಲಭ್ಯಕ್ಕಾಗಿ ಅನುದಾನ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.[ಅಂಗೀಕಾರವಾದ ಈ ವಿಧೇಯಕ, ಪರಿಸರಕ್ಕೆ ಎಷ್ಟು ಮಾರಕ?]

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳನ್ನು ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka: All Districts will get Government Medical Colleges very soon Medical Education Minister Sharan Prakash Patil said on 18 July, at Vidhana Parishad, Karnataka Assembly.
Please Wait while comments are loading...