ಜುಲೈ 20ರಿಂದ ಹುಬ್ಬಳ್ಳಿಗೆ ಏರ್‌ ಇಂಡಿಯಾ ವಿಮಾನ ಸೇವೆ

Posted By:
Subscribe to Oneindia Kannada

ಹುಬ್ಬಳ್ಳಿ, ಜೂನ್ 28 : ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಸೇವೆ ಆರಂಭವಾಗಲಿದೆ. ಏರ್ ಇಂಡಿಯಾ ವಾರದಲ್ಲಿ ಮೂರುದಿನ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸಲಿದೆ.

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಜುಲೈ 20 ರಿಂದ ಬೆಂಗಳೂರು ಹುಬ್ಬಳ್ಳಿ ನಡುವೆ ಏರ್ ಇಂಡಿಯಾ ವಿಮಾನ ವಾರದಲ್ಲಿ ಮೂರು ದಿನ ಹಾರಾಟ ನಡೆಸಲಿದೆ' ಎಂದು ಅವರು ಹೇಳಿದ್ದಾರೆ. [ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಮತ್ತಷ್ಟು ವಿಳಂಬ?]

air india

ವೇಳಾಪಟ್ಟಿ : ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಜೆ 5.05ಕ್ಕೆ ಆಗಮಿಸುವ ವಿಮಾನ, 5.25ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲಿದೆ. 'ಜುಲೈ 20ರಿಂದ ಈ ಸೇವೆ ಆರಂಭವಾಗಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಶಿವಾನಂದ ಬೇನಾಳ ತಿಳಿಸಿದ್ದಾರೆ. [ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ವಿಮಾನ ಹಾರಾಟ]

ಈಗಾಗಲೇ ಬೆಂಗಳೂರು ಮೂಲದ ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ನಡುವೆ ಹಾರಾಟ ನಡೆಸುತ್ತಿದೆ. 2015ರ ಏಪ್ರಿಲ್ 2ರಿಂದ ಏರ್ ಪೆಗಾಸಸ್ ಹುಬ್ಬಳ್ಳಿಗೆ ಮಧ್ಯಾಹ್ನ ವಿಮಾನ ಸೇವೆ ಆರಂಭಿಸಿದೆ. 2015ರ ನವೆಂಬರ್ 11ರಿಂದ ಬೆಳಗ್ಗೆಯೂ ವಿಮಾನ ಹಾರಾಟ ನಡೆಸುತ್ತಿದೆ.[ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ]

ವಿಮಾನ ಅಪಘಾತ ಸಂಭವಿಸಿತ್ತು : ಮೊದಲು ಸ್ಪೈಸ್‌ಜೆಟ್ ಹುಬ್ಬಳ್ಳಿಗೆ ವಿಮಾನಯಾನ ಸೇವೆ ನೀಡುತ್ತಿತ್ತು. 2015ರ ಮಾ.8ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ವಿಮಾನ ಸೇವೆ ಸ್ಥಗಿತಗೊಂಡಿತ್ತು. [ಏರ್ ಪೆಗಾಸಸ್ ವೆಬ್ ಸೈಟ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Air India to start operations between Hubballi-Bengaluru from July 20, 2016.
Please Wait while comments are loading...