ಎಐಸಿಸಿ-ಕೆಪಿಸಿಸಿ ಅಧ್ಯಕ್ಷರೇ ಜಾಮೀನಿನ ಮೇಲಿದ್ದು ಚುನಾವಣೆ ಎದುರಿಸುತ್ತಿದ್ದಾರೆ: ಸಿಎಂ
ಕಲಬುರಗಿ, ಏಪ್ರಿಲ್ 28: ವಿರೋಧ ಪಕ್ಷವಾದ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು ಹಾಗೂ ಕರ್ನಾಟಕ ರಾಜ್ಯಾದ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್ ನಾಯಕರು ಯಾರೂ ಚುನಾವಣೆಗೆ ನಿಲ್ಲುವ ಹಾಗಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಈ ಹಿಂದೆ ಚಿತ್ತಾಪುರದಲ್ಲಿ ಬಿಜೆಪಿ ನಾಯಕರನ್ನು ಗೆಲ್ಲಿಸಿಕೊಂಡು ಹೋಗಿದ್ದೆವು. ಈ ಬಾರಿ ಚಿತ್ತಾಪುರದಲ್ಲಿ ಮಣಿಕಂಠನನ್ನು ಗೆಲ್ಲಿಸಿಕೊಂಡು ಹೋಗಲು ಮತ್ತೆ ಬಂದಿದ್ದೇನೆ ಎಂದರು.

ಬಿಜೆಪಿ ಅಭ್ಯರ್ಥಿ ಮಣಿಕಂಠನ ಮೇಲೆ ಹಲವಾರು ಕೇಸ್ ಇದೆ. ಸಿಎಂ ಅವರ ಪರ ಮತ ಯಾಚನೆ ಮಾಡುವುದು ದುರಂತ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನ ರಾಷ್ಟ್ರೀಯ-ರಾಜ್ಯ ನಾಯಕರ ಮೇಲೆ ಕೇಸ್ ಇದೆ. ಅವರುಗಳು ಬೇಲ್ ಮೇಲೆ ಇದ್ದಾರೆ. ನಿಮ್ಮ ಮಾತಿನಂತೆಯೇ ನಡೆಯುವುದಾದರೇ ನೀವೆಲ್ಲರೂ ರಾಜಕೀಯದಿಂದಲೇ ಹೊರಗುಳಿಯಬೇಕು ಎಂದು ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟರು.
ಮಹಾತ್ಮ ಹೇಳಿದಂತೆ ಕಾಂಗ್ರೆಸ್ ಪಕ್ಷ ವಿಸರ್ಜಸಿ
ಮಹಾತ್ಮಾ ಗಾಂಧೀಜಿಯವರು ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಹೇಳಿದ್ದರು. ಪೂಜ್ಯ ಗಾಂಧೀ ಅವರ ಕನಸು ನನಸು ಮಾಡುವ ಕಾಲ ಈಗ ಬಂದಿದೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸೋಲಿಸಿ ಬೇರು ಸಮೇತ ಕಿತ್ತು ಹಾಕಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಕಾಲ ಬಂದಿದೆ. ಇದು ಚುನಾವಣೆ ಅಲ್ಲ. ಮಣಿಕಂಠನ ಜಾತ್ರೆ. ಹುರುಪು ಹುಮ್ಮಸ್ಸಿನಿಂದ ಪ್ರಚಾರ ಮಾಡಿ ಮಣಿಕಂಠರನ್ನು ಗೆಲ್ಲಿಸಿ ಎಂದು ಸಿಎಂ ಕರೆ ನೀಡಿದರು.
ದೀನ ದಲಿತರ ರಕ್ಷಣೆ ಮಾಡುವುದಾಗಿ ಹೇಳಿಕೊಂಡು 30 ವರ್ಷ ಕಳೆದಿದ್ದೀರಿ. ಮೀಸಲಾತಿ ಹೆಚ್ಚಳಕ್ಕೆ ಮೂವತ್ತು ವರ್ಷದಿಂದ ಬೇಡಿಕೆ ಇದ್ದರೂ ಕಾಂಗ್ರೆಸ್ ನವರು ಸಮುದಾಯಗಳಿಗೆ ಅನ್ಯಾಯ ಮಾಡುತ್ತ ಬಂದಿದೆ. ಎಲ್ಲಿ ನಿಮ್ಮಲ್ಲಿ ಸಾಮಾಜಿಕ ನ್ಯಾಯ. ನಾನು ಮೀಸಲಾತಿ ಹೆಚ್ಚಿಸಿದ್ದನ್ನು ಕಾಂಗ್ರೆಸ್ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ಕೊಟ್ಟಿದ್ದೀನಿ. ಅದೇ ವರ್ಷ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಚುನಾವಣೆ ಬಳಿಕ ಗಳಗಂಟಿ
ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರೆಂಟಿಗಳು ಮೇ 10ರ ವರೆಗೆ ಚುನಾವಣೆ ಮುಗಿಯುವರೆಗೂ ಮಾತ್ರವೇ ಇರುತ್ತವೆ. ಚುನಾವಣೆ ನಂತರ ಗ್ಯಾಂರಂಟಿಗಳೆಲ್ಲವು ಗಳಗಂಟಿ ಅಂತಾಗತ್ತವೇ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವೇ ಅವರ ಗ್ಯಾರಂಟಿ. ಮೇ 13 ರಂದು ಚಿತ್ತಾಪುರದಲ್ಲಿ ಗ್ಯಾರಂಟಿ ಇರೋದು ಮಣಿಕಂಠ ಒಬ್ಬನೇ. ಕರ್ನಾಟಕಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದೆ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರದಿಂದಲೂ ಹಲವು ಜನಪರ ಯೋಜನೆಗಳು ಜಾರಿಯಾಗಿವೆ ಎಂದರು ಅವರು ತಿಳಿಸಿದರು.
ಚಿತ್ತಾಪುರದಲ್ಲಿ ಎಲ್ಲಿರಿಗೂ ಸೂರು: ಸಿಎಂ ಭರವಸೆ
ಚಿತ್ತಾಪುರ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡಿ, ಇಲ್ಲಿ ಎಲ್ಲರಿಗು ಸೂರು, ನೀರಾವರಿ, ಕೈಗೆ ಕೆಲಸ ಕೊಡುತ್ತೀವಿ. ಮಣಿಕಂಠನನ್ನು ಶಾಸಕರಾಗಿ ಆಯ್ಕೆ ಮಾಡಿದರೆ, ಈಗಿನ ಶಾಸಕರು 20 ವರ್ಷದಲ್ಲಿ ಮಾಡದ ಅಭಿವೃದ್ಧಿಯನ್ನು ಮಣಿಕಂಠ ಮಾಡುತ್ತಾನೆ. ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಸಿಎಂ ಭರವಸೆ ನೀಡಿದರು.












Click it and Unblock the Notifications