ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮನ ವಿರುದ್ಧ ಮತ್ತೆ ಮಾತನಾಡಿದ ಭಗವಾನ್

|
Google Oneindia Kannada News

ಬೆಂಗಳೂರು, ಸೆ. 28 : ಹಿಂದೂ ದೇವತೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರೊ.ಎಸ್‌.ಕೆ.ಭಗವಾನ್‌ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿರುವ ಬಗ್ಗೆ ಕರ್ನಾಟಕದಲ್ಲಿ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಪ್ರಶಸ್ತಿಯನ್ನು ವಾಪಸ್ ಪಡೆಯಿರಿ ಎಂದು ಅಭಿಯಾನವೇ ಆರಂಭವಾಗಿದೆ. ಇಂತಹ ಹೊತ್ತಿನಲ್ಲಿ ಭಗವಾನ್ ಪುನಃ ದೇವರ ಬಗ್ಗೆ ತಮ್ಮ ಹೇಳಿಕೆಗಳನ್ನು ಮುಂದುವರೆಸಿದ್ದಾರೆ.

ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ದಿ.ದೇವರಾಜು ಅರಸು ಅವರ ಶತಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆ.ಎಸ್.ಭಗವಾನ್ ಅವರು ಪುನಃ ರಾಮನ ವಿರುದ್ಧ ಮಾತನಾಡಿದ್ದಾರೆ. [ಹೇ ಭಗವಾನ್! ಯಾರು? ಏನು? ಎತ್ತ? ಏನಿದೆಲ್ಲ?]

ks bhagawan

'ಶ್ರೀರಾಮ ಆತ್ಮಹತ್ಯೆ ಮಾಡಿಕೊಂಡ. ರಾಮನನ್ನು ಪೂಜಿಸುವವರು ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರಾಮ ಆದರ್ಶ ಪುರುಷನಲ್ಲ. ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾಚಾರ್ಯರು ಅಜ್ಞಾನಿಗಳು' ಎಂದು ಭಗವಾನ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. [ಭಗವಾನ್ ಅವರಿಗೆ ಪ್ರಶಸ್ತಿ ಯಾಕೆ ಕೊಡಬಾರದು?]

ಕೆ.ಎಸ್.ಭಗವಾನ್ ಹೇಳಿದ್ದೇನು?

* 'ರಾಮಾಯಣದ ಅಂತ್ಯದಲ್ಲಿ ರಾಮನೇ ಆತ್ಮಹತ್ಯೆ ಮಾಡಿಕೊಂಡ. ರಾಮನನ್ನು ನಂಬಿ ಪೂಜಿಸುವವರಿಗೂ ಅದೇ ಗತಿ ಬರಲಿದೆ. ರೈತರು ರಾಮನನ್ನು ನಿಷ್ಠೆಯಿಂದ ಪೂಜಿಸುತ್ತಾರೆ. ಅದಕ್ಕಾಗಿಯೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.'

* 'ಶ್ರೀರಾಮ ಪತ್ನಿಯ ಚಾರಿತ್ರ್ಯ ಪರೀಕ್ಷಿಸಲು ಅಗ್ನಿ ಪ್ರವೇಶಿಸುವಂತೆ ಮಾಡಿದ. ರಾಮ ಮಹಿಳಾ ವಿರೋಧಿ. ತನ್ನ ನಡವಳಿಕೆ ಮೂಲಕ ಶೇ.98ರಷ್ಟು ಜನ ವಿರೋಧಿಯಾದ ರಾಮ ಹೇಗೆ ಆದರ್ಶ ಪುರುಷನಾಗಲು ಸಾಧ್ಯ?.'

* 'ಶ್ರೀರಾಮನ ಕಾಲದಲ್ಲಿ ಜಾತಿ ವ್ಯವಸ್ಥೆ ಇತ್ತು. ಈ ವ್ಯವಸ್ಥೆಯಿಂದ ಹೊರಬರಲು ನಮಗೆ ಸಾವಿರಾರು ವರ್ಷಗಳು ಬೇಕಾದವು. ಅಂತಿಮವಾಗಿ ಬುದ್ಧನಿಂದ ಜಾತಿ ವ್ಯವಸ್ಥೆ ಕಡಿಮೆಯಾಯಿತು. ಈಗ ಮತ್ತೆ ರಾಮರಾಜ್ಯದ ಪ್ರಸ್ತಾಪ ಎಷ್ಟು ಸರಿ?'.

* 'ಬುದ್ಧನಿಗಿಂತ ರಾಮನಿಗೆ ಎತ್ತರದ ಸ್ಥಾನಕೊಡಲು 14 ವರ್ಷ ವನವಾಸ ಮಾಡಿದ ಎಂದು ಉಲ್ಲೇಖಿಸಲಾಗಿದೆ. ಬಲಪಂಥೀಯರು ಎಂದು ಹೇಳಿಕೊಳ್ಳುವ ಕೆಲವರು ರಾಮಾಯಣದ ಮೂಲ ಗ್ರಂಥಗಳನ್ನೇ ಓದಿಲ್ಲ.'

* 'ರಾಮ ಕೆಳವರ್ಗದವರನ್ನು ತುಳಿದು ಹಾಕಿದ. ಆದರೆ, ಜನ ಮಾತ್ರ ಮನೆಯಲ್ಲಿ ರಾಮನ ಫೋಟೋ ಮುಂದೆ ಕಷ್ಟ ಹೇಳಿಕೊಂಡು ಅಳುತ್ತಾರೆ. ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್‌ ಭಾವಚಿತ್ರವನ್ನು ಮನೆಯಲ್ಲಿ ಇಟ್ಟುಕೊಂಡಿಲ್ಲ.'

* 'ದೇವರನ್ನು ನಂಬಿದ ಯಾರಿಗೂ ಒಳ್ಳೆಯದಾಗಿಲ್ಲ. ಆದ್ದರಿಂದ ದೇವರನ್ನು ನಂಬದೆ ಜಾತಿ ವ್ಯವಸ್ಥೆ ತೊಲಗಿಸಲು ಹೋರಾಡಿದ ಅಂಬೇಡ್ಕರ್‌ ಹಾಗೂ ಬುದ್ಧನನ್ನು ಜನರು ಪೂಜಿಸಬೇಕು' ಎಂದು ಅಭಿಪ್ರಾಯಪಟ್ಟರು.

English summary
Kannada writer and critic Prof K.S.Bhagawan again made a controversial remarks on god Rama and Krishna in Bengaluru on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X