ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ : ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ಬಿಡುಗಡೆ

By Mahesh
|
Google Oneindia Kannada News

Recommended Video

ಕಾಂಗ್ರೆಸ್ ನಿಂದ ಮೋದಿ ಮಾರ್ಕ್ಸ್ ಕಾರ್ಡ್ ರಿಲೀಸ್ | ಬಿಜೆಪಿಯಿಂದ ಸಿದ್ದು ಮಾರ್ಕ್ಸ್ ಕಾರ್ಡ್ ರಿಲೀಸ್

ಮಂಡ್ಯ, ಮಾರ್ಚ್ 25: ಮಾಜಿ ಸಂಸದೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡಿದ್ದರ ಬಗ್ಗೆ ಮಂಡ್ಯ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಮ್ಯಾ ಅವರು ನೀಡಿದ ಮಾರ್ಕ್ಸ್ ಕಾರ್ಡ್ ಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಕ್ಸ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಒಂದು ರಿಪೋರ್ಟ್ ಕಾರ್ಡ್ ಕೊಟ್ಟಿತ್ತು. ಅದನ್ನು ಮಾಜಿ ಸಂಸದೆ ರಮ್ಯಾ ಶಾಲೆಯಲ್ಲಿ ಸಿಗೋ ಮಾರ್ಕ್ಸ್ ಕಾರ್ಡ್ ನಂತೆ ಮಾಡಿ ಅದರಲ್ಲಿ ವಿಷಯ, ರಿಮಾರ್ಕ್ ಮತ್ತು ದರ್ಜೆ ಅಂತ ರಿಪೋರ್ಟ್ ಕಾರ್ಡ್ ನಲ್ಲಿ ನಮೂದಿಸಿದ್ದರು.

After Modis progress grade card Siddramaiah marks card revealed

ಇದೀಗ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮಾರ್ಕ್ಸ್ ಕಾರ್ಡ್ ತಯಾರಿಸಿದ್ದು, ಬ್ಯಾನರ್ ಹಾಕಿದ್ದಾರೆ. ಮಾರ್ಕ್ಸ್ ಕಾರ್ಡ್ ಈ ರೀತಿ ಇದೆ:

ವಿದ್ಯಾರ್ಥಿ ಹೆಸರು - ಸಿದ್ದರಾಮಯ್ಯ
ಟರ್ಮ್ - 2013 ರಿಂದ
ರೋಲ್ ನಂಬರ್ - 419
ಬ್ಲಡ್ ಗ್ರೂಪ್ - ಖಾನ್ ಗ್ರೇಸ್

ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ - ಡಿ ಗ್ರೇಡ್
ರಕ್ಷಣಾ ಪರೀಕ್ಷೆಯಲ್ಲಿ - ಸಿ ಗ್ರೇಡ್
ಆರೋಗ್ಯ ಪರೀಕ್ಷೆಯಲ್ಲಿ - ಸಿ ಗ್ರೇಡ್
ಆರ್ಥಿಕ ಪರೀಕ್ಷೆಯಲ್ಲಿ - ಎಫ್ ಗ್ರೇಡ್

After Modis progress grade card Siddaramaiah marks card revealed

ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ - ಸಿ ಗ್ರೇಡ್
ಸ್ಟೋರಿ ಟೆಲ್ಲಿಂಗ್‍ನಲ್ಲಿ - ಎ + +
ಫೈನಲ್ ಗ್ರೇಡ್ - ಡಿ

ಈ ರೀತಿ ಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಕ್ಸ್ ಕಾರ್ಡ್ ಅನ್ನು ಬಿಜೆಪಿ ಮುಖಂಡರಾದ ಸಿ.ಟಿ ಮಂಜುನಾಥ್, ಶಿವಕುಮಾರ್, ವರದರಾಜು , ಶಿವೂ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ.

After Modis progress grade card Siddaramaiah marks card revealed

ಅಷ್ಟೇ ಅಲ್ಲದೇ ಮಾಕ್ಸ್ ಕಾರ್ಡ್ ಬ್ಯಾನರ್ ಮಾಡಿಸಿ ಮಂಡ್ಯದಲ್ಲಿ ಹಾಕಿದ್ದಾರೆ. ರಮ್ಯಾ ಅವರೇ ಮೋದಿ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಮುಖ್ಯಮಂತ್ರಿ ಆಡಳಿತ ನೋಡಿಕೊಳ್ಳಿ. ಮಂಡ್ಯಕ್ಕೆ ಬಾರದ ನಿಮಗೆ ಪ್ರಧಾನಿ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

English summary
After Ramya shared PM Narendra Modi's progress grade card, Vishwa Hindu Parishad and BJP leader CT Manjunath has shared Karnataka CM Siddramaiah marks card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X