Get Updates
Get notified of breaking news, exclusive insights, and must-see stories!

Breaking: ರಾಜ್ಯದ ಪಬ್ , ಬಾರ್ ಮತ್ತು ಮದ್ಯದಂಗಡಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶ

ಬೆಂಗಳೂರು, ಜುಲೈ29: ರಾಜ್ಯದಲ್ಲಿ ಪಬ್ , ಬಾರ್ ಮತ್ತು ಮದ್ಯದಂಗಡಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶವನ್ನು ಹೊರಡಿಸಿದ್ದಾರೆ. ಪಬ್ , ಬಾರ್, ಮತ್ತು ಮದ್ಯದಂಗಡಿಗಳು ನಿಗಧಿತ ಸಮಯದಲ್ಲಿ ಬಂದ್ ಮಾಡುವ ಜೊತೆಗೆ ಕಲವು ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಬಾರ್ ಮತ್ತು ಪಬ್ ಸೇರಿದಂತೆ ಮದ್ಯದಂಗಡಿಗಳಿ ಮೀಸೆ ಚಿಗುರದ ಅಪ್ರಾಪ್ತರು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಮದ್ಯ ಸೇವನೆ ಮಾಡುವುದು ಕಾನೂನಿಗೆ ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಮಕ್ಕಳನ್ನು ಬಾರ್ ನಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದಾಗಲಿ, ಮಕ್ಕಳಿಗೆ ಮದ್ಯವನ್ನು ನೀಡುವುದಾಗಲಿ ಮಾಡುವಂತಿಲ್ಲ ಎಂಬ ನಿಯಮವೂ ಇದೆ. ಆದರೂ ಅಪ್ರಾಪ್ತರು ಬಾರ್ ನಲ್ಲಿ ಮದ್ಯವನ್ನು ಖರೀದಿಸುತ್ತಿದ್ದಾರೆ. ಇದಕ್ಕಾಗಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶವನ್ನು ಮಾಡಿದ್ದಾರೆ.

ಅಲೋಕ್ ಕುಮಾರ್ ಆದೇಶವೇನು..?

*ಬಾರ್, ಪಬ್, ಮದ್ಯದಂಗಡಿಗಳಿಗೆ ಅಪ್ರಾಪ್ತ ವಯಸ್ಕರು ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
*ಬಾರ್, ಪಬ್, ಮದ್ಯದಂಗಡಿಗಳಲ್ಲಿ ಮಾದಕ ದ್ರವ್ಯ ಸಾಗಣಿಕೆ ಮತ್ತು ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸುವುದು.
*ಬಾರ್, ಪಬ್, ಮದ್ಯದಂಗಡಿಗಳ ಲೈಸನ್ಸ್‌ಗಳಲ್ಲಿ ನಿಗದಿಪಡಿಸಿದ ಸಮಯದಂತೆ ಕಡ್ಡಾಯವಾಗಿ ಅಂಗಡಿಗಳನ್ನು ಮುಚ್ಚುವಂತೆ ಕ್ರಮವನ್ನು ವಹಿಸುವುದು.
*ಸುಪ್ರೀಂ ನ್ಯಾಯಾಲಯದ ಆದೇಶದಂತೆ ಪಬ್‌ಗಳಲ್ಲಿ ಅಳವಡಿಸಿರುವ ಧ್ವನಿವರ್‍ಧಕಗಳನ್ನು ರಾತ್ರಿ 10.00ಗಂಟೆಯೊಳಗಾಗಿ ನಿಲ್ಲಿಸಿ ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮವನ್ನು ಜರುಗಿಸುವುದು. ಎಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.

ADGP Alok Kumar Issues Orders for Pubs, Bars and Liquor Shops in Karnataka

Recommended Video

      ಕರಾವಳಿಕಿಚ್ಚು:ಫಾಸಿಲ್ ಏನ್ ಮಾಡಿದ್ದ?ಕೊಲೆಯಾಗಿದ್ದು ಯಾಕೆ? | OneIndia Kannada

      ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೊರತುಪಡಿಸಿ ಉಳಿದ ಎಲ್ಲಾನಗರದ ಆಯುಕ್ತರಿಗೆ , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಕ್ರಮವನ್ನು ಕೈಗೊಳ್ಳಲು ಸೂಚನೆಯನ್ನು ನೀಡಿದ್ದು. ಜುಲೈ 31ರೊಳಗೆ ಕ್ರಮವನ್ನು ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಸೂಚನೆಯನ್ನು ನೀಡಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+