Kiccha Sudeep: ಸಿಎಂ ಬೊಮ್ಮಾಯಿಯನ್ನು ಕೊಂಡಾಡಿದ ಸುದೀಪ್: ಶಿಗ್ಗಾಂವಿಯಲ್ಲಿ ಕಿಚ್ಚನ ಕಿಚ್ಚಿನ ಮಾತು

ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ ನಾಪಮತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ನಟ ಕಿಚ್ಚ ಸುದೀಪ್ ಕಿಚ್ಚಿನ ಮಾತುಗಳನ್ನಾಡಿದ್ದಾರೆ. ಇಂದು ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ ಬೃಹತ್ ಮೆರವಣಿಗೆ ಮೂಲಕ ಶಕ್ತಿಪ್ರದರ್ಶನ ಮಾಡಿದರು. ಈ ವೇಳೆ ಸಿಎಂಗೆ ಸಾಥ್‌ ನೀಡಿದ ಕಿಚ್ಚ ಸುದೀಪ್ ಡಬಲ್ ಇಂಜಿನ್ ಸರ್ಕಾರವನ್ನು ಕೊಂಡಾಡಿದ್ದಾರೆ.

ಶಿಗ್ಗಾಂವಿಗೆ ಸುದೀಪ್ ಅವರನ್ನು ಕೇಸರಿ ಶಾಲು ಹೊದಿಸಿ ಪೇಟ ತೊಡಿಸಿ ಸಿಎಂ ಬೊಮ್ಮಾಯಿ ಅವರು ಬರಮಾಡಿಕೊಂಡರು. ರೋಡ್ ಶೋ ಬಳಿಕ ಮಾತನಾಡಿದ ಸುದೀಪ್, 'ಮೊದಲ ಬಾರಿಗೆ ಈ ಸ್ಥಳಕ್ಕೆ ನಾನು ಬಂದಿದ್ದೇನೆ. ತುಂಬಾ ಸುಂದರವಾಗಿ ನೀವು ನನ್ನನ್ನು ಸ್ವಾಗತಿಸಿದಿರಿ. ಇಲ್ಲಿಗೆ ಬರುವ ಉದ್ದೇಶ ಮುಖ್ಯಮಂತ್ರಿಗಳ ಪರವಾಗಿ ಬಂದಿದ್ದೇನೆ. ಅವರು ಕಡಿಮೆ ಅವಧಿಯಲ್ಲಿ ತುಂಬಾ ಕೆಲಸ ಮಾಡಿದಂತ ಮುಖ್ಯಮಂತ್ರಿಗಳಲ್ಲಿ ಮೊದಲಿಗರು' ಎಂದು ಬೊಮ್ಮಾಯಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Actor Sudeep praised CM Bommai: Kichchs words in Shiggaon

'ಹಿಂದಿಯಲ್ಲಿ ಒಂದು ಮಾತಿದೆ. ನಾಮ್ಕೇ ವಾಸ್ತೆ ಅಲ್ಲ ಕಾಮ್ಕೆ ವಾಸ್ತೆ. ಇದು ನಾನು ಅವರಲ್ಲಿ ನೋಡುತ್ತೇನೆ. ಬಿಸಿಲಿನಲ್ಲಿ ನೀವೆಲ್ಲಾ ನಿಂತು ಪ್ರತಿಕ್ರಿಯಿಸಿದ ರೀತಿ ಅವರು ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುವುದು ತೋರಿಸುತ್ತದೆ' ಎಂದು ಸುದೀಪ್ ಸಿಎಂ ಬೊಮ್ಮಾಯಿಯನ್ನು ಹೊಗಳಿದರು.

'ಈಗ ಅವರು ಒಬ್ಬರು ಅಲ್ಲ ಈಗ ಅವರ ಪರವಾಗಿ ನಾನೂ ಬಂದಿದ್ದೇನೆ. ಕೆಲಸ ಹಾಗಬೇಕು ಎಲ್ಲರಿಗೂ ಒಳ್ಳೆದಾಗಬೇಕು. ಒಳ್ಳೆ ಕೆಲಸ ಆಗಲಿ ಅನ್ನೋದೇ ನನ್ನ ಆಸೆ. ನನ್ನ ಅನೇಕ ಸ್ನೇಹಿತರು ಇಲ್ಲಿದಾರೆ. ಗೆದ್ದೆ ಗೆಲ್ಲುವೆ ಒಂದು ದಿನ ಗೆದ್ದೆ ಗೆಲ್ಲುತ್ತದೆ ಒಳ್ಳೆತನ. ಬೊಮ್ಮಾಯಿ ಮಾಮಾನನ್ನು ಗೆಲ್ಲಿಸಿ' ಎಂದು ಸಿಎಂ ಪರ ಕಿಚ್ಚ ಬ್ಯಾಂಟಿಂಗ್ ಮಾಡಿದರು.

Actor Sudeep praised CM Bommai: Kichchs words in Shiggaon

'ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ. ವಿದೇಶದಲ್ಲಿ ಹೋದರೂ ಪ್ರಧಾನಿ ಬಗ್ಗೆ ಒಳ್ಳೆಯ ಮಾತನಾಡುತ್ತಾರೆ. ಯಾವುದೇ ಕೆಲಸ ಮಾಡುವಾಗ ಕೆಲ ಘಟನೆಗಳಲ್ಲಿ ತೃಪ್ತಿ ಇರುವುದಿಲ್ಲ. ಆದರೆ ನಾವು ಪ್ರಯತ್ನ ಮಾಡಬೇಕು. ಆ ಪ್ರಯತ್ನ ನಾನು ಬೊಮ್ಮಾಯಿ ಹಾಗೂ ಮೋದಿ ಅವರಲ್ಲಿ ಕಂಡಿದ್ದೇನೆ' ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+