• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ವೀಕೆಂಡ್... ಸೀಸನ್- 3'ನಲ್ಲಿ ಮತ್ತಷ್ಟು ವಿಶೇಷ: ರಮೇಶ್ ಅರವಿಂದ್

By ಚೇತನ್ ಓ.ಆರ್.
|

ಇದೇ ತಿಂಗಳ 25ನೇ ತಾರೀಖಿನಿಂದ ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಮೇಶ್ ಅರವಿಂದ್ ಪ್ರತಿ ವಾರಾಂತ್ಯಕ್ಕೆ ನಮ್ಮ ಮನೆಗಳಿಗೆ ಬರಲಿದ್ದಾರೆ. ಯಾಕೆ ಬರಲಿದ್ದಾರೆ, ಹೇಗೆ ಬರಲಿದ್ದಾರೆ ಎಂಬುದನ್ನು ಇಲ್ಲಿ ಹೆಚ್ಚು ಹೇಳಬೇಕಿಲ್ಲ.

'ಝೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುವ ಅವರ ಜನಪ್ರಿಯ ಟಿವಿ ಕಾರ್ಯಕ್ರಮ, 'ವೀಕೆಂಡ್ ವಿತ್ ರಮೇಶ್' ಇದೇ ವಾರಾಂತ್ಯಕ್ಕೆ ಮತ್ತೆ ಆರಂಭ ಆಗ್ತಾ ಇದೆ. ತನ್ನದೇ ಆದ ಪ್ರತ್ಯೇಕ ವೀಕ್ಷಕ ವರ್ಗ ಹೊಂದಿರುವ ಈ ಕಾರ್ಯಕ್ರಮ ಮೂರನೇ ಆವತ್ತಿ ಹೇಗಿರಲಿದೆ. ರಮೇಶ್ ಇದ್ದಾರೆ ಅಂದ್ರೆ ಏನೋ ವಿಶೇಷ ಇದ್ದೇ ಇರುತ್ತೆ ಅನ್ನೋರಿಗೆ ಈ ಬಾರಿ ಏನೇನು ಅಚ್ಚರಿಗಳು ಕಾದಿವೆ ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತಮ್ಮನ್ನು ಸಂದರ್ಶಿಸಿದ ಒನ್ ಇಂಡಿಯಾಗೆ ರಮೇಶ್ ಕೆಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅವರು ಹಂಚಿಕೊಂಡ ಮಾಹಿತಿಗಳು ಅವರದೇ ಮಾತಿನಲ್ಲಿ ಇಲ್ಲಿ ನಿಮಗಾಗಿ.....

- ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಹೇಗಿರುತ್ತೆ?

ಸಧ್ಯದಲ್ಲೇ ಅದು ಶುರುವಾಗ್ತಿದೆ. ಕಾರ್ಯಕ್ರಮದ ಬೇಸಿಕ್ ಮಾಡೆಲ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಎಕ್ಸಾಟ್ ಆಗಿ ಗೊತ್ತಾಗೋಲ್ಲ. ನೋಡೋಣ ಕಾರ್ಯಕ್ರಮ ಯಾವ ರೀತಿ ಹೋಗುತ್ತೆ ಅಂತ. ಈ ಹಿಂದಿನಂತೆ ಈಗಲೂ ಕಾರ್ಯಕ್ರಮದಲ್ಲಿ ರಂಗು ತುಂಬಲು ಪ್ರಯತ್ನಿಸ್ತಾ ಇದೀವಿ.

- ಕೇವಲ ಸಿನಿ ಸ್ಟಾರ್ ಗಳನ್ನೇ ಅತಿಥಿಗಳಾಗಿ ಕರೆ ತಂದಿರಿ ಎಂಬ ಪುಟ್ಟ ಆರೋಪವಿದೆಯಲ್ಲಾ?

ಅಯ್ಯೋ ಅದು ಪುಟ್ಟ ಆರೋಪವಲ್ಲ, ದೊಡ್ಡ ಆರೋಪ... (ನಗು). ಈ ಬಾರಿ ಚಿತ್ರರಂಗ ಸೇರಿ ಇತರ ಮೂರು ವಿವಿಧ ರಂಗಗಳ ಸಾಧಕರನ್ನು ಕರೆತರೋ ಬಗ್ಗೆ ಆಲೋಚನೆಯಿದೆ. ಇದು ಸಾಧ್ಯವಾದಲ್ಲಿ, ಶೋ ಗೆ ಹೊಸ ರಂಗು ಬರುತ್ತದೆ.

ನನ್ನ ಪ್ರಕಾರ, ಸಾಧನೆ ಅನ್ನುವುದು ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತ ಆಗಿರೋದಿಲ್ಲ. ಒಬ್ಬ ರೈತ, ಸೈನಿಕ, ಶಿಕ್ಷಕಿ... ಹೀಗೆ ನಮ್ಮ ಸಮಾಜದ ಒಳಿತಾಗಿ ದುಡಿದಿರುವ ವ್ಯಕ್ತಿಗಳನ್ನು ಕರೆತರಬೇಕೆಂಬ ಹೆಬ್ಬಯಕೆ ಇದೆ. ಆದರೆ, ಇದಕ್ಕೆಲ್ಲಾ ಒಂದು ಪ್ರಾಕ್ಟಿಕಲ್ ಸಮಸ್ಯೆಯಿದೆ. ಒಬ್ಬ ಫಿಲ್ಮ ಪರ್ಸನಾಲಿಟಿ ಸಾಧಕರನ್ನು ಕರೆತಂದು ಕಾರ್ಯಕ್ರಮದ ಸೀಟ್ ಮೇಲೆ ಕೂರಿಸಿದಾಗ ಎಷ್ಟು ಪ್ರೀತಿಯಿಂದ, ಕುತೂಹಲದಿಂದ ನೋಡ್ತಾರೋ ಅಷ್ಟೇ ಕುತೂಹಲದಿಂದ ಬೇರೆ ರಂಗದ ಅಚೀವರ್ಸೂ ಬಂದಾಗ ನೋಡಬೇಕು. ಹಾಗಾದಾಗ ನಮಗೆ ಮತ್ತಷ್ಟು ಅಂಥ ಸಾಧಕರನ್ನು ಕರೆತರೋಕೆ ಸಾಧ್ಯ ಆಗುತ್ತೆ.

- ಮತ್ತೇನು ಹೊಸತನ ಇರುತ್ತೆ ಈ ಬಾರಿ?

ಖಂಡಿತವಾಗಿಯೂ ಇದೆ. ನನಗೆ, ಸಮಾಜಕ್ಕೆ ಚಿಕ್ಕಪುಟ್ಟದಾಗಿ ನೆರವಾದ ಪರ್ಸನಾಲಿಟೀಸ್ ನ ಈ ಬಾರಿ ಕಾರ್ಯಕ್ರಮಕ್ಕೆ ಇನ್ವೈಟ್ ಮಾಡ್ಬೇಕು ಅಂದ್ಕೊಂಡಿದೀವಿ.

ಅವರ ಸಾಧನೆಯನ್ನು ಹೈಲೈಟ್ ಮಾಡ್ಬೇಕು ಅನ್ನೋ ಆಲೋಚನೆ ಇದೆ. ಉದಾಹರಣೆಗೆ, ಯಾವುದೋ ಹಳ್ಳಿಯಲ್ಲಿ ಯಾರೋ ಒಬ್ಬ ಯುವಕ ಯಾರದ್ದೋ ಲೈಫ್ ಸೇವ್ ಮಾಡಿರ್ತಾನೆ... ಅಥವಾ ಆ ಹಳ್ಳಿಗೆ ಬೇಕಾದ ಒಂದು ಸೌಲಭ್ಯ ಕಂಡು ಹಿಡಿದಿರ್ತಾನೆ....

ಇಂಥವರನ್ನು ಗುರುತಿಸಿ ಅವರನ್ನು ಕಾರ್ಯಕ್ರಮಕ್ಕೆ ಕರೆತಂದು ನಮ್ ಶೋನಲ್ಲಿ ನಮ್ಮ ಆಡಿಯನ್ಸ್ ಕೂರೋ ಕಡೆ ಗೋಲ್ಡ್ ಕ್ಲಾಸ್ ಸಾಧಕರೆಂಬ ವಿಶೇಷ ವೇದಿಕೆ ರೆಡಿ ಮಾಡಿ, ಅಲ್ಲಿಗೆ ಅವರನ್ನು ತಂದು ಕೂರಿಸಬೇಕೆಂಬ ಆಲೋಚನೆಯಿದೆ. ಇದಿನ್ನೂ ಚರ್ಚಾ ಹಂತದಲ್ಲಿದ್ದು, ಸೂಕ್ತ ಮಾದರಿ ರೂಪಿಸಿ ಮುಂಬರುವ ದಿನಗಳಲ್ಲಿ ಇದನ್ನು ಅಳವಡಿಸಲು ಯೋಚಿಸಿದ್ದೇವೆ.

- ಮೂಲತಃ ಕರ್ನಾಟಕದವರಾಗಿದ್ದು ಬೇರೆ ರಾಜ್ಯಗಳಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವ್ಯಕ್ತಿಗಳನ್ನು ನಾವು ಈ ಬಾರಿ ನಿರೀಕ್ಷಿಸಬಹುದೇ?

ನಮ್ಮ ಕರ್ನಾಟಕದಲ್ಲೇ ಹೆಚ್ಚು ಜನ ಸಾಧಕರಿದ್ದಾರೆ. ಪೊಲೀಸ್ ಅಧಿಕಾರಿಗಳಿದ್ದಾರೆ, ರಾಜಕೀಯ ಗಣ್ಯರಿದ್ದಾರೆ, ಸಮಾಜ ಸೇವಕರಿದ್ದಾರೆ, ಕ್ರೀಡಾ ಸಾಧಕರಿದ್ದಾರೆ. ಮೊದಲು ಇಲ್ಲಿನವರಿಗೆ ಪ್ರಾಶಸ್ತ್ಯ ಕೊಡುತ್ತೇವೆ. ಉದಾಹರಣೆಗೆ, ಧಾರ್ಮಿಕ ಕ್ಷೇತ್ರದಲ್ಲಿ ವೀರೇಂದ್ರ ಹೆಗಡೆ ಅವರನ್ನು ಆಹ್ವಾನಿಸಿದ್ದೇವೆ, ಕ್ರಿಕೆಟ್ ಕ್ಷೇತ್ರದಿಂದ ಅನಿಲ್ ಕುಂಬ್ಳೆಯವರನ್ನು ಆಹ್ವಾನಿಸಿದ್ದೇವೆ. ಆದರೆ, ಇಲ್ಲೊಂದು ಪ್ರಾಕ್ಟಿಕಲ್ ಸಮಸ್ಯೆಯಿದೆ. ಈ ಸಾಧಕರಿಗೆ ಬಿಡುವು ಸಿಗಬೇಕು, ಅವರಿಗಷ್ಟೇ ಬಿಡುವು ಸಿಕ್ಕರೆ ಸಾಲದು ಅವರಿಗೆ ಹತ್ತಿರದ ಸ್ನೇಹಿತರು, ಸಂಬಂಧಿಗಳಿಗೂ ಅದೇ ದಿನವೇ ಬಿಡುವು ಸಿಗಬೇಕು. ಅವರೆಲ್ಲರ ಬಿಡುವಿನ ದಿನಗಳು ನನ್ನ ಡೇಟ್ಸ್ ಗೆ ಮ್ಯಾಚ್ ಆಗಬೇಕು. ಇದೆಲ್ಲವೂ ಸಮಸ್ಯೆಗಳಿವೆ. ಹೀಗೆ, ಕೆಲವು ಎಪಿಸೋಡ್ ಗಳನ್ನು ಶೂಟ್ ಮಾಡಬೇಕಂದ್ರೆ... ಅಯ್ಯೋ ದೇವ್ರೇ... ಸುಮಾರು 15 ದಿನಗಳೇ ಹಿಡಿಯುತ್ತವೆ. ಆದ್ರೂ ಇದನ್ನೆಲ್ಲಾ ಸಾಧಿಸೋಕೆ ಪ್ರಯತ್ನಿಸ್ತಾ ಇದೀವಿ. ದೊಡ್ಡ ರಿಸರ್ಚ್ ಟೀಮ್ ಇದೆ. ಎಲ್ಲರೂ ಕಾರ್ಯಕ್ರಮದಲ್ಲಿ ಹೊಸತನಕ್ಕಾಗಿ ದುಡೀತಾ ಇದೀವಿ.

- ನಿಮ್ಮ ಆ್ಯಂಕರಿಂಗ್ ಬಗ್ಗೆ ತುಂಬಾ ಮೆಚ್ಚುಗೆಯ ಮಾತುಗಳಿವೆ. ನಿಮಗೆ ವೈಯಕ್ತಿಕವಾಗಿ ನಟನೆ ಇಷ್ಟವೋ, ಆ್ಯಂಕರಿಂಗ್ ಇಷ್ಟವೋ?

ನನಗೆ ಎರಡೂ ಇಷ್ಟ. ನನಗೆ ನಟನೆ, ನಿರ್ದೇಶನ, ಬರಹ ಹಾಗೂ ಆ್ಯಂಕರಿಂಗ್ - ಈ ನಾಲ್ಕೂ ಇಷ್ಟ. ನಟನೆ ನನಗೆ ಫಸ್ಟ್ ಲವ್. ಅದರ ಜತೆಗೇ ಉಳಿದೆಲ್ಲವನ್ನೂ ತುಂಬಾನೇ ಇಷ್ಟಪಟ್ಟು ಮಾಡ್ತೀನಿ. ಒಂದೊಂದೂ ಒಂದೊಂದು ಕೆಪಾಸಿಟೀನ ಟೆಸ್ಟ್ ಮಾಡುತ್ತೆ. ಈ ಆ್ಯಂಕಿರಿಂಗ್ ಅನ್ನೋದು ನಿಮ್ಮ ಪ್ರೆಸೆನ್ಸ್ ಆಫ್ ಮೈಂಡ್, ಅಲ್ಲಿ ಚೇರ್ ಮೇಲೆ ಕೂರಿದ್ದ ಅತಿಥಿ ಜತೆ ಹೇಗೆ ಸ್ಪಂದಿಸ್ತೀರಾ, ನೀವು ಹೇಗೆ ರಿಯಾಕ್ಟ್ ಮಾಡ್ತೀರಾ ಅನ್ನೋದರ ಮೇಲೆ ಹೋಗುತ್ತೆ. ಈ ಎಲ್ಲವೂ ನನಗೆ ಇಷ್ಟವಾಗಿರುವುದರಿಂದ ಖುಷಿಯಿಂದ, ಇಂಟೆರೆಸ್ಟಿಂಗ್ ನಿಂದ ಮಾಡ್ತಾ ಇದೀನಿ.

English summary
Actor, Director Ramesh's renowned TV show 'Weekend With Ramesh - season 3' will be telecasting from March 5th 2017. With this backdrop, he shares some facts and his own ideas regarding the programme to OneIndia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X