ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದ ನಟ ಕಮಲ್‌ ಹಾಸನ್‌: ಕನ್ನಡಿಗರು ಹೇಳಿದ್ದೇನು ?

ಕರ್ನಾಟಕದಲ್ಲಿ ಕನ್ನಡವೇ ಮೊದಲು ಎನ್ನುವ ವಿಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ದಕ್ಷಿಣದ ಭಾಷೆಗಳ ಜನರ ಒಂದಾಗಿ ಹಿಂದಿ ವಿರುದ್ಧ ಹೋರಾಡ ಬೇಕು ಎನ್ನುವ ಅಭಿಯಾನ ಜೋರಾಗಿ ಇರುವಾಗಲೇ ತಮಿಳು - ಕನ್ನಡದ ನಡುವೆ ಸಂಘರ್ಷ ಮತ್ತೊಮ್ಮೆ ಶುರುವಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ನಟ ಕಮಲ್‌ ಹಾಸನ್‌ ನೀಡಿರುವ ಹೇಳಿಕೆಯೇ ಕಾರಣ. ದ್ರಾವಿಡ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ತಮಿಳಿನಿಂದಲೇ ಕನ್ನಡ ಭಾಷೆ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಜನನವಾಗಿದೆ ಎಂದು ತಮಿಳಿಗರು ವಾದ ಮಾಡುವುದು ಇದೆ. ಆದರೆ, ಇದೇ ಮೊದಲ ಬಾರಿಗೆ ಮುಕ್ತ ವೇದಿಕೆಯಲ್ಲಿ ಕನ್ನಡದಲ್ಲೂ ನಟಿಸಿರುವ ಹಾಗೂ ಬಹುಭಾಷ ನಟ ತಮಿಳು - ಕನ್ನಡವನ್ನು ಉಲ್ಲೇಖಿಸಿ ಮಾಡಿರುವ ಹೇಳಿಕೆಗೆ ಕನ್ನಡಿಗರು ಆಕ್ರೋಶಿತರಾಗಿದ್ದಾರೆ.

ಹಿಂದಿ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ವಿಚಾರದಲ್ಲಿ ಅಂದಿನ ಕೇಂದ್ರ ಸರ್ಕಾರವು ತ್ರಿಭಾಷಾ ನೀತಿ ಜಾರಿ ಮಾಡಿದಾಗಿನಿಂದಲೂ ವಿರೋಧಗಳು ಇವೆ. ಆದರೆ, ದಕ್ಷಿಣದ ಭಾಷೆಗಳ ನಡುವೆಯೇ ಪೈಪೋಟಿ ಇಲ್ಲವೇ ವಾಕ್ಸಮರಗಳು ನಡೆದಿರುವುದು ತೀರ ವಿರಳ. ದಕ್ಷಿಣ ಭಾರತೀಯರು ಭಾಷಾ ವಿಚಾರದಲ್ಲಿ ಕಲಿಕೆಯಲ್ಲಿ ಮುಂದಿದ್ದಾರೆ. ಕನ್ನಡಿಗರು ಅದರಲ್ಲಿ ಮೊದಲು ಅಂತಲೇ ಹೇಳಬಹುದು. ಕನ್ನಡಿಗರು ಒಂದಕ್ಕಿಂತ ಹೆಚ್ಚು ಭಾಷೆಯನ್ನು ಸಹಜವಾಗಿಯೇ ಕಲಿಯುತ್ತಾರೆ.

Actor Kamal Haasan said that Kannada came from Tamil What did Kannadigas say

ಇದಕ್ಕೆ ಕರ್ನಾಟಕವು 6 ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವುದು ಹಾಗೂ ಹೊರ ರಾಜ್ಯದ ಜನ ಹೆಚ್ಚಾಗಿ ಕರ್ನಾಟಕಕ್ಕೆ ಬರುವುದೂ ಕಾರಣ. ಆದರೆ, ಇದೀಗ ಕಮಲ್‌ ಹಾಸನ್‌ ಅವರು ನೀಡಿರುವ ಹೇಳಿಕೆ ದಕ್ಷಿಣ ಭಾರತೀಯರ ನಡುವೆಯೇ ಭಾಷೆ ವಿಚಾರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಕನ್ನಡ - ತಮಿಳಿನ ಬಗ್ಗೆ ಕಮಲ್‌ ಹಾಸನ್‌ ಹೇಳಿದ್ದೇನು ?

ಮಣಿರತ್ನಂ ಮತ್ತು ಕಮಲ್ ಹಾಸನ್ ಅವರ ಪ್ರಮುಖ ಸಿನಿಮಾ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು. ಇದರಲ್ಲಿ ವಿವಿಧ ವಿಚಾರಗಳ ಬಗ್ಗೆ ಕಮಲ್‌ ಹಾಸನ್‌ ಅವರು ಮಾತನಾಡಿದ್ದಾರೆ. ಇದರಲ್ಲಿ ಕನ್ನಡ ವಿಚಾರವೂ ಚರ್ಚೆಯಾಗಿದೆ.

Take a Poll

ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕಮಲ್‌ ಹಾಸನ್‌ ಅವರು ತಮಿಳಿನಿಂದ ಕನ್ನಡ ಹುಟ್ಟಿದೆ. ಕನ್ನಡದ ಮೂಲ ತಮಿಳು ಅಂತ ಅವರು ಹೇಳಿರುವುದು ಕನ್ನಡಿಗರಿಂದ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ತಮಿಳಿನಿಂದ ಬಂದ ಭಾಷೆಯೇ ನಿಮ್ಮ ಭಾಷೆಯೂ ಅಂತ ನಟ ಶಿವರಾಜ್‌ ಕುಮಾರ್‌ ಅವರನ್ನು ಉಲ್ಲೇಖಿಸಿ ಕಮಲ್‌ ಹೇಳಿದ್ದಾರೆ. ಕಮಲ್‌ ಅವರು ಶಿವರಾಜ್‌ ಕುಮಾರ್‌ ಅವರಿಗೆ ಸ್ವಾಗತ & ಧನ್ಯವಾದ ಕೋರುವಾಗ ಈ ರೀತಿ ಹೇಳಿದ್ದಾರೆ.

ಇದಕ್ಕೆ ಹಲವು ಕನ್ನಡಿಗರು ವಿರೋಧಿ ವ್ಯಕ್ತಪಡಿಸಿದ್ದಾರೆ. ಅಭಿಷೇಕ್‌ ಎನ್ನುವವರು, ಕನ್ನಡ ತಮಿಳಿನಿಂದ ಹುಟ್ಟಿಲ್ಲ

Actor Kamal Haasan said that Kannada came from Tamil What did Kannadigas say

ಕನ್ನಡವು ತಮಿಳಿನ ಬೇರುಗಳಂತೆ ಬೆಳೆದಿದೆ. ಖಂಡಿತ ನಾವು ಶಬ್ದಕೋಶವನ್ನು ಹಂಚಿಕೊಂಡಿದ್ದೇವೆ ಆದರೆ ನಿಮ್ಮ (ತಮಿಳು) ಭಾಷೆ ಕನ್ನಡದ ತಾಯಿಯಲ್ಲ ಅಂತ ಹೇಳಿದ್ದಾರೆ. ಇದೇ ರೀತಿ ಹಲವು ಕನ್ನಡಿಗರು ಕನ್ನಡದ ಇತಿಹಾಸವನ್ನು ಪರಿಚಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+