ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಬಂದ ಜಗ್ಗೇಶ್, ಕಾರಣ ಏನು?
Recommended Video

ಬೆಂಗಳೂರು, ನವೆಂಬರ್ 30: ಡಬ್ಬಿಂಗ್ ಸಿನಿಮಾ ಬಿಡುಗಡೆ ವಿರೋಧಿ ಹೋರಾಟದಿಂದ ನಟ ಜಗ್ಗೇಶ್ ಅವರು ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಈ ಬಗ್ಗೆ ಪತ್ರ ಬರೆದಿರುವ ಅವರು, 'ಡಬ್ಬಿಂಗ್ ಹೋರಾಟಕ್ಕೂ ನನಗೂ ಇನ್ನು ಮುಂದೆ ಸಂಭಂದವಿಲ್ಲ' ಎಂದು ಬರೆದುಕೊಂಡಿದ್ದಾರೆ. ಕನ್ನಡಿಗರು ಅವರಿಗೆ ಇಷ್ಟವಾದುದನ್ನು ಪಡೆಯಬಹುದು ಎಂದು ಸಹ ಅವರು ಹೇಳಿದ್ದಾರೆ.
'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ
ಜಗ್ಗೇಶ್ ಅವರು ಡಬ್ಬಿಂಗ್ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದ ಬಳಿಕ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಡಬ್ಬಿಂಗ್ ಪರ ನೆಟ್ಟಿಗರು ಪ್ರಶ್ನೆ ಮಾಡಿದ್ದರು, ಹಾಗಾಗಿ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಡಬ್ಬಿಂಗ್ ವಿರೋಧಿ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಕ್ಷಮೆಯನ್ನೂ ಜಗ್ಗೇಶ್ ಕೇಳಿದ್ದಾರೆ. 'ಸಂವಿಧಾನವೇ ಡಬ್ಬಿಂಗ್ಗೆ ಒಪ್ಪಿಗೆ ನೀಡಿದ ಮೇಲೆ ನನ್ನದೇನೂ ಇಲ್ಲ' ಎಂದು ಅವರು ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ.
ನಾನು ಬದುಕಿನಲ್ಲಿ ಶ್ರಮದಿಂದ ಮುಂದೆ ಬಂದವನು!!ಕನಸಿನಲ್ಲಿಯು ಯಾರಿಗು ಕೆಟ್ಟದ್ದು ಬಯಸಿಲ್ಲಾ ಬಯಸೋಲ್ಲಾ!ರಾಯರ ಭಕ್ತರು ತಪ್ಪುಮಾಡುವರಲ್ಲಾ..!
— ನವರಸನಾಯಕ ಜಗ್ಗೇಶ್ (@Jaggesh2) November 30, 2018
ನನಗೆ ನನ್ನ ಕನ್ನಡಭಾಷೆ ಕನ್ನಡಜನರೆ ದೇವರು ಎಂದು ಭಾವಿಸಿ ಶ್ರದ್ಧೆಯಿಂದ ಯಾವತಪ್ಪು ಮಾಡದೆ ಬದುಕಿರುವೆ.
ನನ್ನ ಮೇಲಿನ ಅಪಾರ್ಥ ಸರಿಪಡಿಸಲು
ಈ ಬರಹ..ಓದಿ ಭಿನ್ನಾಭಿಪ್ರಾಯ ಇದ್ದರೆ ಮರೆತುಬಿಡಿ!ವಿನಂತಿ! pic.twitter.com/le4yPiHuqo
ಜಗ್ಗೇಶ್ ಅವರು ಡಬ್ಬಿಂಗ್ ಹೋರಾಟದಿಂದ ಹಿಂದೆ ಉಳಿಯುವ ಮೂಲಕ ಡಬ್ಬಿಂಗ್ ವಿರೋಧಿ ಧ್ವನಿಯಗಳಿಗೆ ಅಲ್ಪ ಹಿನ್ನಡೆ ಆಗಲಿದೆ. ಚಿತ್ರರಂಗದ ಹಲವು ಗಣ್ಯರು ಡಬ್ಬಿಂಗ್ಗೆ ವಿರೋಧವಾಗಿದ್ದಾರೆ. ಆದರೂ ಆಗೊಮ್ಮೆ-ಈಗೊಮ್ಮೆ ಡಬ್ಬಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತಲೇ ಇವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications