• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಶುರುವಾಯ್ತು ಬಂಧನ ಭೀತಿ

|
Google Oneindia Kannada News

ಬೆಂಗಳೂರು, ನವೆಂಬರ್ 25: ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಬುಧವಾರ ನಡೆದಿದ್ದ ಎಸಿಬಿ ಮೆಗಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವೂ ಎಸಿಬಿ ಅಧಿಕಾರಿಗಳು ದಾಳಿ ತನಿಖೆ ಮುಂದುವರೆಸಿದ್ದಾರೆ.

ಎಸಿಬಿ ಅಧಿಕಾರಿಗಳು ಬುಧವಾರ ಮುಂಜಾನೆ ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಕಲಬುರಗಿ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 15 ಸರ್ಕಾರಿ ನೌಕರರಿಗೆ ಸೇರಿದ 68 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು, ದಾಖಲೆಗಳನ್ನು ಪರಿಶೀಲನೆ ನಡೆಸಿದರು.

68 ಸ್ಥಳಗಳಲ್ಲಿ ಎಸಿಬಿ ದಾಳಿ; ಸಿಕ್ಕಿದ ಹಣ, ಆಸ್ತಿಯ ಮಾಹಿತಿ 68 ಸ್ಥಳಗಳಲ್ಲಿ ಎಸಿಬಿ ದಾಳಿ; ಸಿಕ್ಕಿದ ಹಣ, ಆಸ್ತಿಯ ಮಾಹಿತಿ

ಏಕಕಾಲದಲ್ಲಿ ರಾಜ್ಯಾದ್ಯಂತ 503 ಅಧಿಕಾರಿಗಳ 38 ತಂಡದಿಂದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ, ನಗದು ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಸಂಜೆವರೆಗೂ ದಾಳಿ ನಡೆಸಿ ಎಸಿಬಿ ಅಧಿಕಾರಿಗಳು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ಸಿಕ್ಕಿರುವ ಚಿನ್ನಾಭರಣಕ್ಕೆ, ಆಸ್ತಿ ಪತ್ರಗಳಿಗೆ ಸೂಕ್ತ ದಾಖಲಾತಿಗಳನ್ನು ಒದಗಿಸುವಂತೆ ಒಂದು ವಾರಗಳ ಕಾಲ ಸಮಯವಕಾಶ ಕೊಟ್ಟಿದ್ದಾರೆ.

ಸೂಕ್ತ ದಾಖಲಾತಿ ನೀಡದೆ ಹೋದರೆ ಕಾನೂನು ರೀತಿಯ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದ್ದು, ಎಸಿಬಿ ನೋಟಿಸ್ ನೀಡಿದ ಬೆನ್ನಲ್ಲೇ ಅಧಿಕಾರಿಗಳ ಎದೆಯಲ್ಲಿ ಬಂಧನ ಭೀತಿ ಶುರುವಾಗಿದೆ.

ಲಂಚ ಬಾಕ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಾ?
ಎಸಿಬಿ ದಾಳಿ ವೇಳೆ ಭ್ರಷ್ಟ ಸರ್ಕಾರಿ ಅಧಿಕಾರಿಗಳು ಕೋಟಿಗಟ್ಟಲೆ ಹಣ ಲೂಟಿ ಹೊಡೆದಿರುವುದು ಪತ್ತೆಯಾಗಿದ್ದು, ಕಂತೆ ಕಂತೆ ಹಣ, ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆಗಿರುವುದು ಪತ್ತೆಯಾಗಿದೆ.

ಎಸಿಬಿ ದಾಳಿ ಬಳಿಕ ಭ್ರಷ್ಟ ಅಧಿಕಾರಿಗಳು ಮಂಕಾಗಿದ್ದು, ಅಧಿಕಾರಿಗಳು ಲೂಟಿ ಹೊಡೆದಿರುವುದು ಮೇಲ್ನೊಟಕ್ಕೆ ಪತ್ತೆಯಾಗಿದೆ. ಭ್ರಷ್ಟ ಅಧಿಕಾರಿಗಳಿಗೆ ಕಾನೂನು ರೀತಿಯ ಶಿಕ್ಷೆಯಾಗುತ್ತದಾ ಕಾದು ನೋಡಬೇಕು. ರಾಜ್ಯದಲ್ಲಿ ನಡೆದ ಎಸಿಬಿ ದಾಳಿಯು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಮುಂದುವರೆದ ಎಸಿಬಿ ತಲಾಷ್
ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಧಿಸಿದಂತೆ ಗುರುವಾರವೂ ಎಸಿಬಿ ಅಧಿಕಾರಿಗಳು ತಲಾಷ್ ನಡೆಸಿದ್ದಾರೆ. ಎಸಿಬಿ ದಾಳಿಗೆ ಒಳಗಾದ ಸರ್ಕಾರಿ ಅಧಿಕಾರಿಗಳ ಬ್ಯಾಂಕ್ ಖಾತೆ ಪರಿಶೀಲನೆ ಮಾಡಲಾಗುತ್ತಿದೆ.

ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಲಾಕರ್ ಇದೆಯಾ? ಇಲ್ಲವಾ? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಬ್ಯಾಂಕ್ ಡಿಟೈಲ್ಸ್ ಇಟ್ಕೊಂಡು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಎಸಿಬಿ ತಂಡ ತೆರಳಿದೆ.

   ಕರ್ನಾಟಕದ ಮೇಲೆ ಎಸಿಬಿ ಬಿಗಿ ಕಾರ್ಯಾಚರಣೆ : 60 ಸ್ಥಳಗಳಲ್ಲಿ 400ಕ್ಕೂ ಹೆಚ್ಚು ಸರಗಳ್ಳರಿಂದ ಶೋಧ | Oneindia Kannada

   ಒಂದು ವೇಳೆ ಲಾಕರ್ ಇದ್ದರೆ ಅದನ್ನು ಓಪನ್ ಮಾಡಿ ಪರಿಶೀಲನೆ ನಡೆಸಬೇಕಾಗುತ್ತದೆ. ಲಾಕರ್‌ನಲ್ಲಿ ಚಿನ್ನಾಭರಣ ಇದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಂಡು ಮುಂದಿನ ತನಿಖೆ ನಡೆಸಲಾಗುತ್ತದೆ.

   ನಂತರ ಅಧಿಕಾರಿಗೆ ಸೇರಿದ ಬ್ಯಾಂಕ್ ಅಕೌಂಟ್‌ಗಳನ್ನು ಫ್ರೀಜ್ ಮಾಡಲಿದ್ದು, ಬಹುತೇಕ ಎಲ್ಲರ ಬ್ಯಾಂಕ್ ಅಕೌಂಟ್‌ಗಳನ್ನು ಫ್ರೀಜ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

   ಈಗಾಗಲೇ ಕೃಷಿ ಇಲಾಖೆ ನಿರ್ದೇಶಕ ಟಿ.ಎಸ್. ರುದ್ರೇಶಪ್ಪರನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿಯ ಪಿಡಬ್ಲ್ಯೂಡಿ ಶಾಂತಗೌಡರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ಇದೇ ವೇಳೆ ಬಿಬಿಎಂಪಿ ಸಿಬ್ಬಂದಿ ಮಾಯಣ್ಣಗೆ ಸೋಮವಾರ ವಿಚಾರಣೆಗೆ ಹಾಜರಾಗುವುದಕ್ಕೆ ಸೂಚಿಸಿದ್ದಾರೆ.

   English summary
   ACB Raid in Karnataka; Facing Fear of Arrest among Corrupt Officials after ACB issued Notice.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X