68 ಕಡೆ ಎಸಿಬಿ ದಾಳಿ; ಪತ್ತೆಯಾದ ಅಕ್ರಮ ಆಸ್ತಿಗಳ ವಿವರ

ಬೆಂಗಳೂರು, ನವೆಂಬರ್ 25; ಕರ್ನಾಟಕದ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಬುಧವಾರ ಅತಿ ದೊಡ್ಡ ದಾಳಿ ನಡೆಸಿದ್ದರು. 15 ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 68 ಸ್ಥಳಗಳಲ್ಲಿ ದಾಳಿ ನಡೆದಿತ್ತು, ತಡರಾತ್ರಿ ತನಕ ದಾಖಲೆಗಳ ಪರಿಶೀಲನೆ ನಡೆದಿತ್ತು. ಲಾಕರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಎಸಿಬಿಯ ಒಟ್ಟು 503 ಅಧಿಕಾರಿ ಹಾಗೂ ಸಿಬ್ಬಂದಿಗಳು ಒಟ್ಟು 68 ತಂಡಗಳಾಗಿ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದರು. ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ ಹಣ, ಚಿನ್ನಾಭರಣಗಳನ್ನು ಪರಿಶೀಲಿಸಿದ್ದರು. ಶೋಧನಾ ಕಾರ್ಯದ ವೇಳೆ ಲಾಕರ್‌ಗಳು ಪತ್ತೆಯಾಗಿತ್ತು. ಗುರುವಾರ ಲಾಕರ್‌ಗಳು ಸೇರಿದಂತೆ ಒಟ್ಟು ದಾಳಿಯ ವೇಳೆ ಪತ್ತೆಯಾದ ಅಕ್ರಮ ಆಸ್ತಿಯ ಬಗ್ಗೆ ಎಸಿಬಿ ಪತ್ರಿಕಾಪ್ರಕಟಣೆಯನ್ನು ಬಿಡುಗಡೆ ಮಾಡಿದೆ. 15 ಸರ್ಕಾರಿ ಅಧಿಕಾರಿಗಳ ವಿವರಗಳನ್ನು ಇದರಲ್ಲಿ ನೀಡಲಾಗಿದೆ.

ಕಲಬುರಗಿಯಲ್ಲಿ ಜೇವರ್ಗಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್. ಎಂ. ಬಿರಾದರ್ ಮನೆ ಮೇಲೆ ದಾಳಿ ನಡೆದಿತ್ತು. ಇದಕ್ಕೆ ಸಂಬಂಧಿಸಿ ಈವರೆಗಿನ ತನಿಖೆಯಲ್ಲಿ ಸುಮಾರು 4,15,12,491 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 406.17ರಷ್ಟು ಹೆಚ್ಚಿನ ಅಕ್ರಮ ಆಸ್ತಿಇರುವುದು ಕಂಡುಬಂದಿರುತ್ತದೆ.

ಟಿ. ಎಸ್. ರುದ್ರೇಶಪ್ಪ (ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ, ಗದಗ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 6,65,03,782 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ನಿವೇಶನ, ಕಟ್ಟಡ, , ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 400ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಆಪಾದಿತರ ವಿವರಣೆಯನ್ನು ಪಡೆದು ತನಿಖೆಯನ್ನು ಮಾಡಬೇಕಾಗಿರುತ್ತದೆ ಎಂದು ಎಸಿಬಿ ಹೇಳಿದೆ.

ಎಸಿಬಿ ದಾಳಿಯಲ್ಲಿ ಸಿಕ್ಕ ಅಕ್ರಮ ಆಸ್ತಿ

ಎಸಿಬಿ ದಾಳಿಯಲ್ಲಿ ಸಿಕ್ಕ ಅಕ್ರಮ ಆಸ್ತಿ

* ಶ್ರೀನಿವಾಸ್. ಕೆ (ಕಾರ್ಯಪಾಲಕ ಅಭಿಯಂತರರು, ಹೆಚ್‍ಎಲ್‍ಬಿಸಿ-3, ಕೆ.ಆರ್. ಪೇಟೆ ಸಬ್ ಡಿವಿಜನ್, ಮಂಡ್ಯ ಜಿಲ್ಲೆ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 3,10,20,826 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 179.37ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ಕೆ. ಎಸ್. ಲಿಂಗೇಗೌಡ (ಕಾರ್ಯಪಾಲಕ ಅಭಿಯಂತರರು, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 2,03,94,135 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 146.33 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ಬಿ. ಕೃಷ್ಣಾರೆಡ್ಡಿ (ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನಗಳು, ಬೆಂಗಳೂರು) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 4,82,03,049 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 305 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

ಪತ್ತೆಯಾದ ಅಕ್ರಮ ಆಸ್ತಿ ಎಷ್ಟು?

ಪತ್ತೆಯಾದ ಅಕ್ರಮ ಆಸ್ತಿ ಎಷ್ಟು?

* ಎಲ್. ಸಿ. ನಾಗರಾಜ್ (ಆಡಳಿತಾಧಿಕಾರಿ, ಸಕಾಲ ಮಷೀನ್, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ನಗರ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 10,82,07,660 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 198 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ಜಿ. ವಿ. ಗಿರಿ (ಗ್ರೂಪ್-ಡಿ ನೌಕರ, ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಮಾರಪ್ಪನಪಾಳ್ಯ, ಯಶವಂತಪುರ, ಬೆಂಗಳೂರು ನಗರ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 6,24,03,000 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 563.85 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ಎಸ್. ಎಸ್. ರಾಜಶೇಖರ್ (ಪಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ, ಬೆಂಗಳೂರು ನಗರ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 1,40,64,000 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 77 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

ವಿವಿಧ ಜಿಲ್ಲೆಯಲ್ಲಿ ಎಸಿಬಿ ದಾಳಿ

ವಿವಿಧ ಜಿಲ್ಲೆಯಲ್ಲಿ ಎಸಿಬಿ ದಾಳಿ

* ಮಾಯಣ್ಣ (ಪ್ರಥಮ ದರ್ಜೆ ಸಹಾಯಕರು, ಬಿಬಿಎಂಪಿ ಕೇಂದ್ರ ಕಛೇರಿ, ಎನ್. ಆರ್. ವೃತ್ತ, ಬೆಂಗಳೂರು ನಗರ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 4,92,35,000 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ 138ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ಕೆ. ಎಸ್. ಶಿವಾನಂದ್ (ಸಬ್-ರಿಜಿಸ್ಟ್ರಾರ್ (ನಿವೃತ್ತ), ಬಳ್ಳಾರಿ ಜಿಲ್ಲೆ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 1,37,40,835 ರೂ. ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 198ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ಸದಾಶಿವ ರಾಯಪ್ಪ ಮರಲಿಂಗಣ್ಣನವರ್ (ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ್, ಬೆಳಗಾವಿ ಜಿಲ್ಲೆ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 3,05,05,574 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ 190.81 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

15 ನೌಕರರ ಮೇಲೆ ನಡೆದ ದಾಳಿ

15 ನೌಕರರ ಮೇಲೆ ನಡೆದ ದಾಳಿ

* ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ (ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 1,74,74,410 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ 191.91 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ನಾಥಾಜಿ ಪೀರಾಜಿ ಪಾಟೀಲ (ಲೈನ್ ಮೆಕಾನಿಕ್ ಗ್ರೇಡ್-2, ಹೆಸ್ಕಾಂ, ಬೆಳಗಾವಿ ಜಿಲ್ಲೆ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 2,20,69,587 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 141.30 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ಲಕ್ಷ್ಮೀನರಸಿಂಹಯ್ಯ (ರಾಜಸ್ವ ನಿರೀಕ್ಷಕರು, ಕಸಬಾ-2 ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 1,83,50,067 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 141.30 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

* ವಾಸುದೇವ್. ಆರ್. ಎನ್ (ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು), ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 18,20,63,868 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 879.53 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+