Get Updates
Get notified of breaking news, exclusive insights, and must-see stories!

ಎರಡೂವರೆ ವರ್ಷದಲ್ಲಿ 60,000ಕ್ಕೂ ಹೆಚ್ಚು ಎಸಿ ಕೋರ್ಟ್ ಪ್ರಕರಣ ಇತ್ಯರ್ಥ: ಸಚಿವ ಕೃಷ್ಣಬೈರೇಗೌಡ

ಬೆಂಗಳೂರು: ಆಡಳಿತ ಹಾಗೂ ವಿಪಕ್ಷ ನಾಯಕರಿಂದ ಅಸಾಧ್ಯ ಎಂದು ಬಣ್ಣಿಸಲಾಗುತ್ತಿದ್ದ ಎಸಿ ನ್ಯಾಯಾಲಯದಲ್ಲಿನ ಪ್ರಕರಣಗಳ ಇತ್ಯರ್ಥವನ್ನು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಸಹಕಾರದಿಂದ ನಾವು ಸಾಧ್ಯವಾಗಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಲಾಖೆಯ ಎಲ್ಲ ಅಧಿಕಾರಿಗಳನ್ನು ಪ್ರಶಂಸಿಸಿದರು.

ಬಾಕಿ ಇದ್ದ 73,000 ಪ್ರಕರಣ

ವಿಕಾಸಸೌಧದಿಂದ ಸೋಮವಾರ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಸಿಕ ಪ್ರಗತಿ ಪರಿಶೀಲನೆ ನಡೆಸಿದರು. "2023ಕ್ಕೂ ಮುನ್ನ ಆಡಳಿತ ನಡೆಸಿದ ಸರ್ಕಾರಗಳು ಎಸಿ ನ್ಯಾಯಾಲಯದಲ್ಲಿ ಅವಧಿ ಮೀರಿದ 62,857 ತಕರಾರು ಪ್ರಕರಣಗಳನ್ನು ವಿಲೇವಾರಿ ಮಾಡದೆ ಉಳಿಸಿ ಹೋಗಿದ್ದವು. ಇದಲ್ಲದೆ, 11,000 ಪ್ರಕರಣಗಳನ್ನು ಆರ್‌ಸಿಸಿಎಂಎಸ್‌ನಲ್ಲಿ ದಾಖಲು ಮಾಡಿರಲಿಲ್ಲ. ಇವೆಲ್ಲವೂ ಸೇರಿ 73,000 ಪ್ರಕರಣಗಳ ಬಾಕಿ ಇದ್ದವು. ಜನ ಸಾಮಾನ್ಯರು ದಿನನಿತ್ಯ ಸರ್ಕಾರಿ ಕಚೇರಿಗೆ ಅಲೆಯುವ ಪರಿಸ್ಥಿತಿ ಇತ್ತು ಎಂದು ಬೇಸರ ಹಂಚಿಕೊಂಡರು.

AC Court Case Disposal

ನಾನು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಈ ಎಲ್ಲ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ನೀಡಿ, ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದೆ. ವಿಪಕ್ಷದ ನಾಯಕರು ಮಾತ್ರವಲ್ಲ, ಸ್ವತಃ ಆಡಳಿತ ಪಕ್ಷದ ನಾಯಕರೇ ಈ ಕೆಲಸ ಅಸಾಧ್ಯ ಎಂದಿದ್ದರು. ಆದರೆ ಇಂದು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಸಹಕಾರ, ಶ್ರಮದಿಂದ ಅಸಾಧ್ಯ ಎಂದ ಕೆಲಸವನ್ನು ಸಾಧ್ಯವಾಗಿಸಿದ್ದೇವೆ. ಅವಧಿ ಮೀರಿದ 73,000 ಪ್ರಕರಣಗಳನ್ನು ಪ್ರಸ್ತುತ 10,656ಕ್ಕೆ ಇಳಿಸಲಾಗಿದೆ. ಈ ಮೂಲಕ ಜನರು ಅನಗತ್ಯ ಸರ್ಕಾರಿ ಕಚೇರಿಗೆ ಅಲೆಯುವ ಪ್ರಸಂಗಕ್ಕೆ ಅಂತ್ಯ ಹಾಡಿದ್ದೇವೆ ಎಂದರು.

ಈ ಜಿಲ್ಲೆಗಳಲ್ಲೇ ಹೆಚ್ಚು ಬಾಕಿ ಪ್ರಕರಣ

ಎಸಿ ನ್ಯಾಯಾಲಯಗಳಲ್ಲಿ ಕಳೆದ ಎರಡೂವರೆ ವರ್ಷದಿಂದ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ. ಆದರೂ, ಇನ್ನೂ 10,000ಕ್ಕೂ ಅಧಿಕ ಅವಧಿ ಮೀರಿದ ಪ್ರಕರಣಗಳು ಬಾಕಿ ಇವೆ. ಈ ಪೈಕಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಅಧಿಕ ಸಂಖ್ಯೆಯ ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಪ್ರಕರಣಗಳನ್ನೂ ಮಾರ್ಚ್ ಅಂತ್ಯದ ವೇಳೆಗೆ ವಿಲೇವಾರಿಗೊಳಿಸಬೇಕು. ಮಾರ್ಚ್ ತಿಂಗಳ ನಂತರ ಯಾವುದೇ ಹಳೆಯ ಪ್ರಕರಣಗಳು ಇರಕೂಡದು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಹಿಂದೆ ಎಸಿ ನ್ಯಾಯಾಲಯಗಳ ಆದೇಶವನ್ನು ಆರ್‌ಸಿಸಿಎಂಎಸ್‌ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವ ಪ್ರವೃತ್ತಿ ಇರಲಿಲ್ಲ. ಇದರಿಂದ ಕೆಲ ಅಧಿಕಾರಿಗಳು ತಮ್ಮ ಇಷ್ಟ ಬಂದಂತೆ ಆದೇಶ ನೀಡಿರುವುದು ಕಂಡುಬಂದಿದೆ. ಎಸಿ ಆದೇಶಗಳನ್ನು ನ್ಯಾಯಬದ್ಧಗೊಳಿಸುವ ನಿಟ್ಟಿನಲ್ಲಿ ಈ ಹಿಂದಿನ ಎಲ್ಲ ಅನುಮಾನಿತ ಆದೇಶಗಳನ್ನೂ ಮರು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಪ್ರಸ್ತುತ ಆದೇಶಗಳನ್ನು ಆರ್‌ಸಿಸಿಎಂಎಸ್‌ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಲು ಸೂಚಿಸಿದ್ದು, ಉಪ ವಿಭಾಗಾಧಿಕಾರಿಗಳ ಎಲ್ಲ ಆದೇಶಗಳನ್ನೂ ಪಾರದರ್ಶಕಗೊಳಿಸಲಾಗಿದೆ ಎಂದರು.

ಸರ್ಕಾರಿ ಜಮೀನು ಒತ್ತುವರಿ ಮೇಲೆ ನಿಗಾ

ಇನ್ನು ಅವಧಿ ಮೀರಿದ ಎಲ್ಲ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂಬ ಉದ್ದೇಶದಿಂದ ಕಳೆದ ಎರಡೂವರೆ ವರ್ಷಗಳಿಂದ ಉಪ ವಿಭಾಗಾಧಿಕಾರಿಗಳಿಗೆ ಅದನ್ನೇ ಪ್ರಮುಖ ಜವಾಬ್ದಾರಿ ಎಂದು ವಹಿಸಲಾಗಿತ್ತು. ಆದರೆ, ಇದೀಗ ಉಪ ವಿಭಾಗಾಧಿಕಾರಿಗಳು ಬೇರೆ ಪ್ರಮುಖ ಕೆಲಸಗಳ ಕಡೆಗೂ ಮುಖ ಮಾಡಬೇಕಿದೆ. ಗ್ರಾಮ ಲೆಕ್ಕಾಧಿಕಾರಿಗಳು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಜಮೀನುಗಳ ವಿವರಗಳನ್ನೂ ಬೀಟ್ ಆ್ಯಪ್‌ನಲ್ಲಿ ದಾಖಲು ಮಾಡಿದ್ದಾರೆ. ಇದರ ಆಧಾರದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ, ಭೂ ಸರ್ವೇ ಮಾಡಿಸಿ ತಹಶೀಲ್ದಾರರಿಂದ ಆದೇಶ ಹೊರಡಿಸಿ ಒತ್ತುವರಿ ತೆರವು ಮಾಡಬೇಕು. ಈ ಕೆಲಸ ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+